ಹೈದರಾಬಾದ್: ಟಾಲಿವುಡ್ ನಟ ಚೈತನ್ಯ ಅಕ್ಕಿನೇನಿ ಮತ್ತು ನಟಿ ಸಮಂತಾ ರುಥ್ ಪ್ರಭು ಹೈದರಾಬಾದ್ ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ತೀರಾ ಆಪ್ತರಿಗೆ ಮಾತ್ರ ಆಹ್ವಾನ ನೀಡಿದ್ದ ಈ ಸಮಾರಂಭದಲ್ಲಿ ಇಬ್ಬರು ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ. ನಟ ನಾಗಾರ್ಜುನ್ ನಿಶ್ಚಿತಾರ್ಥ ಸಂಬಂಧ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ನನ್ನ ತಾಯಿ ಈಗ ನನ್ನ ಮಗಳಾಗಿದ್ದಾಳೆ ಎಂದು ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ. 2014 ರಲ್ಲಿ ತೆರೆಕಂಡ ಮ್ಯಾಗ್ನಮ್ ಒಪಸ್ ಮಾನಮ್ ಚಿತ್ರದಲ್ಲಿ ಸಮಂತಾ ನಾಗಾರ್ಜುನ್ ತಾಯಿ ಪಾತ್ರ ನಿರ್ವಹಿಸಿದ್ದರು.
ತಮ್ಮ ಹಿರಿಯ ಸೊಸೆ ಸಮಂತಾ ನಮ್ಮ ಮನೆಗೆ ಕಾಲಿಟ್ಟ ಮೇಲೆ ಆಕೆ ನಮ್ಮ ಮಗಳು ಎಂದು ನಾಗಾರ್ಜುನ್ ಹೇಳಿದ್ದಾರೆ. ಸಮಂತಾ ಮತ್ತು ನಾಗಚೈತನ್ಯ ಪರಸ್ಪರ ಉಂಗುರ ಬದಲಾಯಿಸಿಕೊಂಡ ಫೋಟೋಗಳು ಹಾಗೂ ತಮ್ಮ ಕುಟುಂಬದ ಹಲವು ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.
ಅಮಲಾ, ನಾಗ ಚೈತನ್ಯ ಸಮಂತಾ, ಅಖಿಲ್ ಅಕ್ಕಿನೇನಿ ಹಾಗೂ ಶ್ರೀಯಾ ಭೂಪಾಲ್ ತಮ್ಮ ಜೊತೆ ಇರುವ ಫೋಟೋಗಳನ್ನು ಷೇರ್ ಮಾಡಿದ್ದಾರೆ. ವಿವಾಹದ ದಿನಾಂಕವನ್ನು ಇನ್ನು ನಿಗದಿಪಡಿಸಿಲ್ಲ.