ಗಣೇಶ್ ಮತ್ತು ರಶ್ಮಿಕಾ 'ಚಮಕ್' ಬೈಕ್ ಸವಾರಿ
ಬೆಂಗಳೂರಿನಿಂಗ ಮೇಲುಕೋಟೆಗೆ ಮತ್ತು ಅಲ್ಲಿಂದ ವಾಪಸ್ ಬೈಕ್ ಸವಾರಿ ಮಾಡಿದ್ದಾರೆ ನಟ ಗಣೇಶ್ ಮತ್ತು ನಟಿ ರಶ್ಮಿಕಾ ಮಂದಣ್ಣ. ಈ ಬೈಕ್ ಸವಾರಿಯಲ್ಲಿ ೨೦೦ ಕ್ಕೂ ಹೆಚ್ಚು ಉತ್ಸಾಹಿ ಬೈಕ್ ಸವಾರರು
ಬೆಂಗಳೂರು: ಬೆಂಗಳೂರಿನಿಂಗ ಮೇಲುಕೋಟೆಗೆ ಮತ್ತು ಅಲ್ಲಿಂದ ವಾಪಸ್ ಬೈಕ್ ಸವಾರಿ ಮಾಡಿದ್ದಾರೆ ನಟ ಗಣೇಶ್ ಮತ್ತು ನಟಿ ರಶ್ಮಿಕಾ ಮಂದಣ್ಣ. ಈ ಬೈಕ್ ಸವಾರಿಯಲ್ಲಿ ೨೦೦ ಕ್ಕೂ ಹೆಚ್ಚು ಉತ್ಸಾಹಿ ಬೈಕ್ ಸವಾರರು ಪಾಲ್ಗೊಂಡಿದ್ದು ವಿಶೇಷ.
ಇದು ಅವರ ಮುಂದಿನ ಸಿನೆಮಾ 'ಚಮಕ್'ನ ಹಾಡಿನ ಚಿತ್ರೀಕರಣದ ಭಾಗವಾಗಿತ್ತಂತೆ. ಈ ಸಿನೆಮಾದಲ್ಲಿ ಗಣೇಶ್ ಪ್ರಸೂತಿ ವೈದ್ಯ ತಜ್ಞನ ಪಾತ್ರವಹಿಸಿದ್ದಾರೆ.
ವೈದ್ಯರಿಗೂ ಬೈಕ್ ಸವಾರಿಗೂ ಎತ್ತಣ ಸಂಬಂಧ ಎಂದು ಪ್ರಶ್ನಿಸಿದರೆ "ಡಾ. ಗಣೇಶ್ ಅವರಿಗೆ ಬೈಕ್ ಮೇಲೆ ಮೋಹ ಮತ್ತು ಅವರ ಹವ್ಯಾಸ ಕೂಡ ಅದು. ಅವರ ಬಳಿ ಎರಡು ದೊಡ್ಡ ರಾಯಲ್ ಎನ್ ಫೀಲ್ಡ್ ಬೈಕ್ ಗಳಿವೆ" ಎನ್ನುತ್ತಾರೆ ನಿರ್ದೇಶಕ ಸುನಿ.
ಈ ದೃಶ್ಯ ಚಿತ್ರೀಕರಣದ ವೇಳೆ ಸುನಿ ಹಲವು ಉತ್ಸಾಹಿ ಬೈಕ್ ಸವಾರ ತರುಣರನ್ನು ಇದರ ಭಾಗವಾಗಲು ಆಹ್ವಾನಿಸಿದ್ದರು. "ಈ ಸವಾರಿ ಸಿನೆಮಾಗೆ ಹೇಗೆ ಸಂಬಂಧಿಸಿದೆ ಎಂದು ಪ್ರೇಕ್ಷಕರು ಕಂಡುಹಿಡಿಯಬೇಕು" ಎನ್ನುತ್ತಾರೆ ಸುನಿ.
ಬೆಳಗ್ಗೆ ೬ ಘಂಟೆಗೆ ಪ್ರಾರಂಭವಾದ ಬೈಕ್ ಸವಾರಿ ಚಿತ್ರೀಕರಣ ಇಡೀ ದಿನ ಹಿಂಡಿಯಿತಂತೆ. "ನಿರ್ದೇಶಕನಾಗಿ ಬೈಕ್ ಸವಾರಿಯನ್ನು ಸೆರೆ ಹಿಡಿಯುವುದು ವಿಭಿನ್ನ ಅನುಭವವಾಗಿತ್ತು" ಎನ್ನುವ ಸುನಿ "ಇದಕ್ಕಾಗಿ ವಿಶೇಷ ಕ್ಯಾಮರಾಗಳನ್ನು ಬಳಸಿದೆವು" ಎಂದು ತಿಳಿಸುತ್ತಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.