ಬೆಂಗಳೂರು: 'ಲೂಸಿಯಾ', 'ಯು ಟರ್ನ್' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಒಂದು ಮೊಟ್ಟೆಯ ಕಥೆ ಸಿನಿಮಾ ನಿರ್ದೇಶಿಸಿ ನಿರ್ಮಾಣ ಮಾಡುತ್ತಿದ್ದಾರೆ.
ಸಿನಿಮಾದ ಪ್ರಮೋಷನ್ ಮತ್ತು ರಿಲೀಸ್ ಸಂಬಂಧ ನಾನು ಗಮನ ಕೇಂದ್ರೀಕರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಸಿನಿಮಾದ ಕಾನ್ಸೆಪ್ಟ್ ಬಹಳ ಇಷ್ಟವಾಗಿದ್ದು, ಪ್ರೇಕ್ಷಕರ ಜೊತೆ ತನ್ನ ನಿಲುವನ್ನು ಹಂಚಿಕೊಳ್ಳಲು ಬಯಸಿದ್ದಾರೆ. ನಾನು ಯಾವಾಗಲು ಇದೇ ರೀತಿಯ ವಿಷಯದ ಬಗ್ಗೆ ಗಮನ ಹರಿಸುತ್ತಿದ್ದೆ . ನಾನು ಈತಂಡವನ್ನು ಸೇರಬಹುದೆಂದು ಭಾವಿಸಿದ್ದೆ ಎಂದು ಪವನ್ ಹೇಳಿದ್ದಾರೆ.
ಒಂದು ಮೊಟ್ಟೆಯ ಕಥೆ ನೋಡಿದಾಗ ರಾಜ್ ಗಿಂತ ತಮ್ಮ ತಮ್ಮ ನಿರ್ದೇಶನ ಸ್ವಲ್ಪ ವಿಭಿನ್ನ ಎಂದು ಆಲೋಚಿಸಿದ್ದೆ, ಆದರೆ ವೀಕ್ಷಕರನ್ನು ಭಾವನಾತ್ಮಕವಾಗಿ ಸೆಳೆಯಲು ನಾವಿಬ್ಬರು ಒಂದಾದೆವು ಎಂದು ತಿಳಿಸಿದ್ದಾರೆ.
ನಾನು ಈ ರೀತಿಯ ಸಿನಿಮಾ ಮಾಡಿದ್ದೇನೆಂದು ಯಾರೋಬ್ಬರು ಭಾವಿಸಿರಲು ಸಾದ್ಯವಿಲ್ಲ, ಆದರೆ ಇದರಲ್ಲಿ ನಿರ್ದೇಶಕರ ಪ್ರಾಮಾಣಕ ಪ್ರಯತ್ನವನ್ನು ನೋಡಬಹುದಾಗಿದೆ. ನಾನು ಯಾವಾಗಲು ಮಾಡುವ ಎಲ್ಲಾ ಪ್ರಾಜೆಕ್ಟ್ ಗಳಿಗಿಂತ ಇದು ವಿಭಿನ್ನವಾಗಿದೆ. ಸರಳವಾಗಿ ಸಿನಿಮಾ ಮಾಡುವುದು ಬಹಳ ಕಷ್ಟದ ಕೆಲಸ ಎಂದು ಪವನ್ ಅಭಿಪ್ರಾಯ ಪಟ್ಟಿದ್ದಾರೆ.
ಇಡಿ ಸಿನಿಮಾ ಮಂಗಳೂರು ಭಾಷೆಯಲ್ಲಿದೆ, ಒಂದು ನಗರ ಕನ್ನಡ ಪದ ಬಳಕೆಯಾಗಿಲ್ಲ, ಇದು ತುಂಬಾ ಹೊಸದಾಗಿದ್ದು, ಹೀಗಾಗಿ ನನಗೆ ತುಂಬಾ ಇಷ್ಟವಾಯಿತು ಎಂದು ಪವನ್ ಹೇಳಿದ್ದಾರೆ.
ಒಂದು ಮೊಟ್ಟೆಯ ಕಥೆ ಸಿನಿಮಾವನ್ನು ಮಲ್ಟಿಫ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ನೋಡಬಹುದಾಗಿದೆ. ಈ ಸಿನಿಮಾದಲ್ಲಿ ನೀವು ಬೇರೊಬ್ಬರ ಕಥೆಯನ್ನಲ್ಲ ನಿಮ್ಮ ಜೀವನದ್ದೇ ಸ್ವಂತ ಕಥೆ ನೋಡುತ್ತೀರಿ ಎಂದು ತಿಳಿಸಿದ್ದಾರೆ.
ಸಿನಿಮಾ ಈ ವಾರೆ ತೆರೆ ಕಾಣಲಿದ್ದು, ನಿರ್ಮಾಪಕನಾಗಿ ಒಂದು ಮೊಟ್ಟೆಯ ಕಥೆ ತುಂಬಾ ಒತ್ತಡದಿಂದ ಕೂಡಿತ್ತು. ಇದಾರ ನಂತರ ನಾನು ಒಂದು ಲಾಂಗ್ ಬ್ರೇಕ್ ತೆಗೆದುಕೊಂಡು ನನ್ನದೆ ಕಥೆಯೊಂದಿಗೆ ವಾಪಸ್ ಬರುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos