ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ನಟಿ ಸೋನಿಕಾ ಚೌಹಾಣ್ ಸಾವು ಪ್ರಕರಣ: ನಟ ವಿಕ್ರಮ್ ಚಟರ್ಜಿ ಬಂಧನ

ಬೆಂಗಾಲಿ ನಟಿ ಹಾಗೂ ರೂಪದರ್ಶಿ ಸೋನಿಕಾ ಚೌಹಾಣ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿಕ್ರಮ್ ಚಟರ್ಜಿಯವರನ್ನು ವಿಶೇಷ ತನಿಖಾ ತಂಡದ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ...

ಬೆಂಗಾಲಿ ನಟಿ ಹಾಗೂ ರೂಪದರ್ಶಿ ಸೋನಿಕಾ ಚೌಹಾಣ್
Manjula VN
Updated On : 7 Jul 2017, 4:20 am
ಕೋಲ್ಕತಾ: ಬೆಂಗಾಲಿ ನಟಿ ಹಾಗೂ ರೂಪದರ್ಶಿ ಸೋನಿಕಾ ಚೌಹಾಣ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿಕ್ರಮ್ ಚಟರ್ಜಿಯವರನ್ನು ವಿಶೇಷ ತನಿಖಾ ತಂಡದ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ. 
ಸೋನಿಕಾ ಸಾವಿನ ಬಳಿಕ ಕೆಲ ದಿನಗಳಿಂದ ವಿಕ್ರಮ್ ಚಟರ್ಜಿಯವರು ತಲೆಮರೆಸಿಕೊಂಡಿದ್ದರು. ಇದರಂತೆ ಗುರುವಾರ ವಿಕ್ರಮ್ ಅವರು ರೇಡಿಯೋ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿರುವ ಕುರಿತು ಮಾಹಿತಿ ತಿಳಿದುಬಂದಿತ್ತು. ದಕ್ಷಿಣ ಕೋಲ್ಕತಾದ ಕಸ್ ಬಾ ಪ್ರದೇಶದಲ್ಲಿರುವ ರಾಶ್ ಬೆಹಾರಿ ಅವೆನ್ಯೂ ಮಾರ್ಗದಲ್ಲಿನ ಆ್ಯಕ್ರೋಪೊಲೀಸ್ ಮಾಲ್ ನ ಹೊರಗೆ ಕ್ಯಾಬ್ ನಲ್ಲಿ ವಿಕ್ರಮ್ ಕುಳಿತಿದ್ದರು. ಈ ವೇಳೆ ಬಂಧನಕ್ಕೊಳಪಡಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಇಂದು ವಿಕ್ರಮ್ ಅವರನ್ನು ಅಲಿಪೋರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ. 
ಕಳೆದ ಏಪ್ರಿಲ್ ತಿಂಗಳಿನಲ್ಲಿ ವಿಕ್ರಮ್ ಚಟರ್ಜಿಯವರೊಂದಿಗೆ ನಟಿ ಸೋನಿಕಾ ಚೌಹಾಣ್ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಸಂಭವಿಸಿದ ಅಪಘಾತದಲ್ಲಿ ನಟಿ ಸಾವನ್ನಪ್ಪಿದ್ದರು. ಈ ಘಟನೆ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. 

Advertisement

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿಕ್ರಮ್ ವಿರುದ್ಧ ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದು, ಪರಿಣಾಮ ಅಪಘಾತ ಸಂಭವಿಸಿ ನಟಿ ಸಾವನ್ನಪ್ಪಿದ್ದಾರೆಂಬ ಆರೋಪದಡಿ ಸೆಕ್ಷನ್ 304ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement