ಬೆಂಗಳೂರು: ಧೈರ್ಯಂ ಸಿನಿಮಾ ಮೂಲಕ ನಾಯಕ ಅಜಯ್ ರಾವ್ ಆಕ್ಷನ್ ಹೀರೋ ಆಗೋ ಬದಲಾಗಿದ್ದಾರೆ. ಇಲ್ಲಿಯವರೆಗೂ ಕೌಟುಂಬಿಕ ಮತ್ತು ಲವರ್ ಬಾಯ್ ಪಾತ್ರಗಳಲ್ಲಿ ಅಜಯ್ ರಾವ್ ಕಾಣಿಸಿಕೊಳ್ಳುತ್ತಿದ್ದರು. ಆಸಕ್ತಿದಾಯಕ ಕಥೆಗಳನ್ನು ಆರಿಸಿಕೊಂಡು ನಾನು ನಟಿಸುತ್ತಿದ್ದೆ. ಅದನ್ನು ಪ್ರೇಕ್ಷಕರು ನೋಡುತ್ತಿದ್ದರು. ಈಗ ಅಜಯ್ ಆಕ್ಷನ್ ಹೀರೋ ಆಗಿ ನಟಿಸಿರುವ ಧೈರ್ಯಂ ಸಿನಿಮಾ ವಾರ ರಿಲೀಸ್ ಆಗಲಿದೆ.
ಮೊದಲ ಬಾರಿಗೆ ಥ್ರಿಲ್ಲರ್ ಎನಿಸುವಂತ ಪಾತ್ರ ಮಾಡಿದ್ದು, ಖಳನಾಯಕ ರವಿಶಂಕರ್ ಜೊತೆ ಹೋರಾಡುವುದಾಗಿದೆ. ದೈಹಿಕವಾಗಿ ಹೊಡೆದಾಟ ನಡೆಸುವುದಕ್ಕಿಂತ ಬುದ್ದಿ ಉಪಯೋಗಿಸಿ ನಡೆಸುವ ಹೋರಾಟ ಈ ಸಿನಿಮಾದಲ್ಲಿದೆ ಎಂದು ಅಜಯ್ ಅಭಿಪ್ರಾಯ ಪಟ್ಟಿದ್ದಾರೆ.
ರವಿ ಶಂಕರ್ ರಿಂದ ನನ್ನ ಪಾತ್ರಕ್ಕೆ ಕಿರುಕುಳ ನೀಡಲಾಗುತ್ತದೆ. ಇದೊಂದು ಬೆಕ್ಕು ಮತ್ತು ಇಲಿಯ ಆಟ, ಕೊನೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಪ್ರೇಕ್ಷಕರಿಗೆ ಕೊನೆಯವರಗೂ ಆಶ್ಚರ್ಯ ಮೂಡಿಸುತ್ತದೆ.
ಒಂದು ವೇಳೆ ನಾನು ಗೆದ್ದರೇ ಅವರು ಸಂತಸಗೊಳ್ಳುತ್ತಾರೆ. ಒಂದು ವೇಳೆ ನಾನು ಸೋತರೇ ಅವರು ದುಃಖಿತರಾಗುವುದಿಲ್ಲ, ಆದರೆ, ಪಾತ್ರದ ಬಗ್ಗೆ ಕರುಣೆ ತೋರುತ್ತಾರೆ ಎಂದು ಅಜಯ್ ತಿಳಿಸಿದ್ದಾರೆ.
ಖಳನಾಯಕ ರವಿಶಂಕರ್ ಎದುರು ನಾಯಕನಾಗಿ ನಟಿಸಿದ್ದು, ವಿಲನ್ ಪಾತ್ರ ಪವರ್ ಫುಲ್ ಆಗಿದೆ, ಹಾಗೆಯೇ ನಾಯಕನ ಪೂತ್ರ ಕೂಡ ಅಷ್ಟೆ ಸಾಮರ್ಥ್ಯದಿಂದ ಕೂಡಿದೆ. ಈ ಸಿನಿಮಾದ ಭಾಗವಾಗಿರುವುದಕ್ಕೆ ಅಜಯ್ ಧನ್ಯವಾದ ಹೇಳಿದ್ದಾರೆ.
ಆಕ್ಷನ್, ರೋಮಾನ್ಸ್ ಮತ್ತು ಒಂದೆರಡು ಹಾಡುಗಳಲ್ಲಿ ನಟಿಸುವುದರಿಂದ ನನಗೆ ಸಂತೋಷವಾಗುವುದಿಲ್ಲ, ಪ್ರೇಕ್ಷಕರು ನಾನು ಯಾವ ರೀತಿಯ ಪಾತ್ರ ಮಾಡಬೇಕು ಎಂಬುದನ್ನು ಸ್ವತಃ ಅವರೇ ನಿರ್ಧರಿಸಬೇಕು. ನನ್ನ ವೃತ್ತಿ ಜೀವನದಲ್ಲಿ ನಾನು ಇದನ್ನೇ ತಲೆಯಲ್ಲಿರಿಸಿಕೊಂಡು ನಾನು ಕೆಲಸ ಮಾಡಿದ್ದೇನೆ, ನಾನು ಅತ್ತರೆ ಪ್ರೇಕ್ಷಕರು ದೂರ ಹೋಗುತ್ತಾರೆ, ಒಂದು ವೇಳೆ ನಾನು ನಕ್ಕರೆ, ಅವರು ಕೂಡ ನನ್ನೊಂದಿರುತ್ತಾರೆ. ಒಂದು ವೇಳೆ ನಾನು ಹೊದೆ ತಿಂದರೇ ಕೋಪಗೊಂಡ ಅವರು, ನಾನು ಯಾವಾಗ ತಿರುಗಿ ಹೊಡೆಯುತ್ತೇನೆ ಎಂದು ಕಾಯುತ್ತಿರುತ್ತಾರೆ, ಆಗ ಚಪ್ಪಾಳೆ ಹೊಡೆಯುತ್ತಾರೆ, ಇದು ಪ್ರೇಕ್ಷಕರು ಮತ್ತು ನನ್ನ ನಡುವೆ ಸಂತೋಷ ಮೂಡಿಸುತ್ತದೆ.
ಪ್ರತಿಯೊಂದು ಚಿತ್ರದಲ್ಲಿ ವಿಭಿನ್ನವಾದ ಹಾಗೂ ಉತ್ತಮವಾದ ಪಾತ್ರ ಮಾಡಲು ನಾನು ಬಯಸುತ್ತೇನೆ. ಧೈರ್ಯಂ ನಲ್ಲಿನ ನನ್ನ ಪಾತ್ರ ಪ್ರೇಕ್ಷಕರಿಗೆ ಮೆಚ್ಚುಗೆಯಾಗುತ್ತದೆ ಎಂದು ಅಜಯ್ ರಾವ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಸಿನಿಮಾ ರಂಗ ರಿಯಾಲಿಟಿ ಶೋ ಅಲ್ಲ, ಹೀಗಾಗಿ ಬದುಕಿದ್ದೇವೆ ಎಂದು ತೋರಿಸಿಕೊಳ್ಳಬೇಕಾಗುತ್ತದೆ, ಪ್ರೇಕ್ಷಕರು ನನ್ನಲ್ಲಿ ಒಬ್ಬ ನಾಯಕನಿಗಿಂತ ಒಬ್ಬ ನಟನನ್ನು ನಿರೀಕ್ಷಿಸುತ್ತಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos