ನಿರೂಪ್ ಭಂಡಾರಿ ಮತ್ತು ರಾಧಿಕಾ ಪಂಡಿತ್ 
ಸಿನಿಮಾ ಸುದ್ದಿ

ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾದಲ್ಲಿ ನಿರೂಪ್ ಭಂಡಾರಿಗೆ ರಾಧಿಕಾ ಪಂಡಿತ್ ನಾಯಕಿ

ರಂಗಿತರಂಗ ಸಿನಿಮಾ ಮೂಲಕ ಸಾವಿರಾರು ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ನಾಯಕ ನಿರೂಪ್ ಭಂಡಾರಿ ತಮ್ಮ ಸಹೋದರ ಅನೂಪ್ ಭಂಡಾರಿ ನಿರ್ದೇಶನ ...

ಬೆಂಗಳೂರು: ರಂಗಿತರಂಗ ಸಿನಿಮಾ ಮೂಲಕ ಸಾವಿರಾರು ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ನಾಯಕ ನಿರೂಪ್ ಭಂಡಾರಿ ತಮ್ಮ ಸಹೋದರ ಅನೂಪ್ ಭಂಡಾರಿ ನಿರ್ದೇಶನ ರಾಜರಥ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ನಿರೂಪ್ ಭಂಢಾರಿಗೆ ರಾಧಿಕಾ ಪಂಡಿತ್ ನಾಯಕಿಯಾಗಿ ನಟಿಸಲಿದ್ದಾರೆ,
ನಾನು ನನ್ನ ಮೂರನೇ ಸಿನಿಮಾವನ್ನು ರಿಶಬ್ ಶೆಟ್ಟಿ ಜೊತೆ ಮಾಡಲು ಯೋಜಿಸಿದ್ದೆ, ಆದರೆ ರಿಶಬ್ ಶೆಟ್ಟಿ ಅವರ ಹಲವು ಸಿನಿಮಾಗಳು ಇನ್ನೂ ಪೂರ್ಣಗೊಂಡಿರದ ಕಾರಣ ನಮ್ಮ ಪ್ರಾಜೆಕ್ಟ್ ಮುಂದೂಡಲಾಯಿತು.
ರಾಕ್ ಲೈನ್ ನಿರ್ಮಾಣ ಸಂಸ್ಥೆಯ ಈ ಚಿತ್ರಕ್ಕೆ ವಿ. ಪ್ರಿಯಾ ನಿರ್ದೇಶನ ಮಾಡಲಿದ್ದಾರೆ. ಪ್ರಿಯಾ ಕಥೆ ಹೇಳಿದ ಶೈಲಿ ನನಗೆ ತುಂಬಾ ಹಿಡಿಸಿದೆ. ಪಾತ್ರ ಹಾಗೂ ಕಥೆಯ ಬಗ್ಗೆ ಆಕೆಗೆ ಆತ್ಮ ವಿಶ್ವಾಸವಿದೆ, ಈ ಸಿನಿಮಾದಲ್ಲಿ ನನ್ನ ಪಾತ್ರ ಹಾಸ್ಯಭರಿತವಾಗಿದೆ ಎಂದು ನನಗನಿಸುತ್ತದೆ ಎಂದು ನಿರೂಪ್ ಹೇಳಿದ್ದಾರೆ.
ನಿರ್ದೇಶಕಿ ಪ್ರಿಯಾ ಅವರ ಮನಸಲ್ಲಿ ಪಾತ್ರದ ಬಗ್ಗೆ  ಒಂದು ನಿಖರ ಐಡಿಯಾ ಇತ್ತು, ಹೀಗಾಗಿ ಆ ಪಾತ್ರಕ್ಕೆ ನಾನೇ ಸೂಕ್ತ ಎಂದು ಅವರಿಗೆ ಅನಿಸಿದೆ. ಪ್ರಿಯಾ ಮಣಿರತ್ನಂ ಅವರ ಬಳಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ, ಅದು ನನಗೆ ಮತ್ತಿ ಅನೂಪ್ ನನ್ನು ಮತ್ತಷ್ಟು ಇಂಪ್ರೆಸ್ ಮಾಡಿದೆ. ತಮಿಳಿನಲ್ಲಿ ಆಕೆ ಮೂರು ಸಿನಿಮಾ ನಿರ್ದೇಶಿಸಿದ್ದಾರೆ. ಹಲವು ಸುತ್ತಿನ ಮಾತುಕತೆಗಳ ನಂತರ ಈ ಪ್ರಾಜೆಕ್ಟ್ ನಲ್ಲಿ ನಟಿಸಲು ನಾನು ಒಪ್ಪಿದೆ ಎಂದು ನಿರೂಪ್ ಭಂಡಾರಿ ವಿವರಿಸಿದ್ದಾರೆ.
ಒಂದೇ ಒಂದು ಸಿನಿಮಾದಲ್ಲಿ ಅಭಿನಯಿಸಿರುವ ನಿರೂಪ್ ಬಿಗ್ ಬ್ಯಾನರ್ ಸಿನಿಮಾದಲ್ಲಿ ಪ್ರಸಿದ್ಧ ನಟಿ ರಾಧಿಕಾ ಪಂಡಿತ್ ಜೊತೆ ಅಭಿನಯಿಸಲು ಅವಕಾಶ ಸಿಕ್ಕಿದೆ.  ರಾಕ್ ಲೈನ್ ವೆಂಕಟೇಶ್ ಅವರ ಜೊತೆ ಮೊದಲ ಸಿನಿಮಾವಾಗಿದೆ. ರಂಗಿತರಂಗ ಸಿನಿಮಾ ತಯಾರಿ ವೇಳೆಯಿಂದಲೂ ನಾನು ಅವರನ್ನು ಬಲ್ಲೆ, ಅವರೊಬ್ಬ ಒಳ್ಳೆಯ ಮನಸ್ಸಿರುವ ವ್ಯಕ್ತಿ ಎಂದು ನಿರೂಪ್ ಹೊಗಳಿದ್ದಾರೆ. 
ಕೃಷ್ಣನ್ ಲವ್ ಸ್ಚೋರಿ ಸಿನಿಮಾದಲ್ಲಿ ರಾಧಿಕಾ ಅವರ ಅಭಿನಯ ನನಗೆ ಬಹಳ ಇಷ್ಟ.  ಅವರಿಂದ ನಾನು ಸಾಕಷ್ಟು ಕಲಿಯಲು ಸಹಾಯವಾಗುತ್ತದೆ. ಪ್ರಿಯಾ ನಿರ್ದೇಶನದಲ್ಲಿ ಭಾರತೀಯ ಸಿನಿಮಾ ರಂಗಕ್ಕೆ ಇದೊಂದು ಉತ್ತಮ ಚಿತ್ರವಾಗಲಿದೆ, ನನಗೂ ಕೂಡ ಉತ್ತಮ ಅನುಭವವಾಗಲಿದೆ ಎಂದು ತಿಳಿಸಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾ ಸೆಪ್ಟಂಬರ್ ನಲ್ಲಿ ಸೆಟ್ಟೇರಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT