ಪವನ್ ಒಡೆಯರ್, ಸಂದೇಶ್ ಮತ್ತು ದರ್ಶನ್ 
ಸಿನಿಮಾ ಸುದ್ದಿ

ಸಂದೇಶ್, ಪವನ್ ಒಡೆಯರ್ ಮತ್ತು ದರ್ಶನ್ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ಯುಸಿ ನಟ. ಸಾಲು ಸಾಲು ಸಿನಿಮಾಗಳಿಗೆ ಸಹಿ ಮಾಡಿರುವ ದರ್ಶನ್...

ಬೆಂಗಳೂರು: ಸದ್ಯ ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ಯುಸಿ ನಟ. ಸಾಲು ಸಾಲು ಸಿನಿಮಾಗಳಿಗೆ ಸಹಿ ಮಾಡಿರುವ ದರ್ಶನ್ ಪ್ರಕಾಶ್ ಜಯರಾಮ್ ಅವರ ತಾರಕ್ ಸಿನಿಮಾ ಡಬ್ಬಿಂಗ್ ನಲ್ಲಿ ನಿರತರಾಗಿದ್ದಾರೆ.
ತಾರಕ್ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು, ಕುರುಕ್ಷೇತ್ರಕ್ಕಾಗಿ ದರ್ಶನ್ ತಯಾರಿ ನಡೆಸುತ್ತಿದ್ದಾರೆ. ಐರಾವತ ನಂತರ ಮತ್ತೆ ದರ್ಶನ್ ಜೊತೆ ಕೆಲಸ ಮಾಡಲು ಉತ್ಸಾಹ ತೋರಿರುವ ನಿರ್ಮಾಪಕ ಸಂದೇಶ್ ಎನ್ ಕಳೆದ ಎರಡು ವರ್ಷಗಳಿಂದ ದರ್ಶನ್ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಫೋಟೋ ವೊಂದು ಇಬ್ಬರು ಒಟ್ಟಿಗೆ ಕೆಲಸ ಮಾಡಲು ಶೀಘ್ರದಲ್ಲೇ  ಸೇರಲಿದ್ದಾರೆ ಎಂಬದನ್ನು ಹೇಳುತ್ತಿದೆ.
ಪವನ್ ಒಡೆಯರ್ ನಿರ್ದೇಶನದಲ್ಲಿ ದರ್ಶನ್ ಮುಂದಿನ ಸಿನಿಮಾವನ್ನು ಸಂದೇಶ್ ನಿರ್ಮಿಸಲಿದ್ದಾರೆ. ಪ್ರಾಜೆಕ್ಟ್ ಸಿದ್ದವಾಗುತ್ತಿದ್ದು, ಇತ್ತೀಚೆಗೆ ದರ್ಶನ್ ಅವರನ್ನು ಭೇಟಿ ಮಾಡಿ ಕಥೆ ಬಗ್ಗೆ ಚರ್ಚಿಸಿದ್ದೇನೆ, ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಸಂದೇಶ್ ತಿಳಿಸಿದ್ದಾರೆ.
ದರ್ಶನ್ ಸದ್ಯ ಬ್ಯುಸಿಯಾಗಿದ್ದು, ಅವರ ಷೆಡ್ಯುಲ್ ಮೇಲೆ ಸಿನಿಮಾ ಶೂಟಿಂಗ್ ನಡೆಯಲಿದೆ,ಮುಂದಿನ ವರ್ಷ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಿದ್ದಾರೆ. ಪವನ್ ಒಡೆಯರ್ ತಂತ್ರಜ್ಞಾನ ಬಳಕೆ ವಿಧಾನ ನನಗೆ ಬಹಳ ಮೆಚ್ಚುಗೆಯಾಗಿದೆ. ಕಥೆ ಸರಳವಾಗಿದ್ದರೂ ಶಕ್ತಿಶಾಲಿಯಾಗಿರುತ್ತದೆ ಎಂದು ಎಂದು ಹೇಳಿದ್ದಾರೆ.
2015 ರಲ್ಲಿ ಐರಾವತ ಸಿನಿಮಾ ರಿಲೀಸ್ ಆಗಿತ್ತು, ಅದಾದ ನಂತರ ಎರಡು ವರ್ಷಗಳಿಂದ ಕಾಯುತ್ತಿದ್ದೆ, ದರ್ಶನ್ ಕೆಲಸದ ವಿಷಯದಲ್ಲಿ ಪರ್ಫೆಕ್ಟ್ ಆಗಿದ್ದು, ಅವರಿಗಾಗಿ ಕಾಯುವುದು ಎನು ತಪ್ಪಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT