ಕಾಲಿವುಡ್ ಗೆ ಮರಳಿದ ಅಕ್ಷರಾ ಗೌಡ: ಬಿಲ್ಲಾ-3 ಚಿತ್ರದಲ್ಲಿ ಸಿಂಬುಗೆ ನಾಯಕಿ
ತಮಿಳು, ಹಿಂದಿ ಮತ್ತು ಕನ್ನಡ ಸಿನಿಮಾಗಳಲ್ಲಿ ನಿರತವಾಗಿರುವ ನಟಿ ಅಕ್ಷರಾ ಗೌಡ ಮತ್ತೆ ತಮಿಳಿನಲ್ಲಿ ಮತ್ತೊಂದು ಬಿಗ್ ಬ್ರೇಕ್ ಕೊಡಲು...
ಬೆಂಗಳೂರು: ತಮಿಳು, ಹಿಂದಿ ಮತ್ತು ಕನ್ನಡ ಸಿನಿಮಾಗಳಲ್ಲಿ ನಿರತವಾಗಿರುವ ನಟಿ ಅಕ್ಷರಾ ಗೌಡ ಮತ್ತೆ ತಮಿಳಿನಲ್ಲಿ ಮತ್ತೊಂದು ಬಿಗ್ ಬ್ರೇಕ್ ಕೊಡಲು ಮುಂದಾಗಿದ್ದಾರೆ.
ತಮಿಳಿನ ಬಿಲ್ಲಾ- 3 ಸಿನಿಮಾದಲ್ಲಿ ಸಿಂಬು ಅಲಿಯಾಸ್ ಸಿಲಂಬರಸನ್ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ. ಸಿಂಬು ಈ ಸಿನಿಮಾ ನಿರ್ದೇಶಿಸಿ ನಿರ್ಮಾಣ ಮಾಡಲಿದ್ದಾರೆ.
ಅಕ್ಟೋಬರ್ ಮೊದಲ ವಾರದಲ್ಲಿ ಶೂಟಿಂಗ್ ಆರಂಭವಾಗಲಿದ್ದು, ಆಗಸ್ಟ್ ಮೊದಲ ವಾರದಲ್ಲಿ ಅಮೆರಿಕಾಗೆ ತೆರಳಲಿದ್ದಾರೆ. ಸಿನಿಮಾದ ಬಹುತೇಕ ಭಾಗ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ, ಕೆಲ ಸನ್ನಿವೇಶಗಳನ್ನು ಮುಂಬಯಿಯಲ್ಲಿ ಚಿತ್ರೀಕರಿಸಲಾಗುತ್ತದೆ. ಶೀಘ್ರವೇ ಸಿನಿಮಾ ತಂಡ ಟೀಸರ್ ಬಿಡುಗಡೆ ಮಾಡಲಿದೆ.
ನಾಯಕಿಗಾಗಿ ಹುಡುಕಾಟ ನಡೆಸುತ್ತಿದ್ದ ಸಿಂಬು ಅಕ್ಷರಾ ಗೌಡ ರನ್ನು ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಬಗ್ಗೆ ಹೆಚ್ಚಿನ ವಿವರವನ್ನು ಚಿತ್ರ ತಂಡ ನೀಡಲಿದೆ.
ಬಿಲ್ಲಾ ಕ್ರೇಜ್ ರಜನಿಕಾಂತ್ ರಿಂದ ಆರಂಭವಾಯಿತು, ನಂತರ, ಅಜಿತ್ ಬಿಲ್ಲಾ-2 ಮುಂದುವರಿಸಿದರು, ಸದ್ಯ ಸಿಂಬು ಬಿಲ್ಲಾ-3ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.
ಅಕ್ಷರಾ ಗೌಡ ಕನ್ನಡದ ಪ್ರೇಮದಲ್ಲಿ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದು, ಗೌಸ್ ಪೀರ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಅಕ್ಷರಾ ಅಭಿನಯಿಸಲಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.