ಪ್ರಥಮ್. ಸುದೀಪ್ ಮತ್ತು ಭುವನ್
ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿಗಳಾದ ಪ್ರಥಮ್ ಮತ್ತು ಭುವನ್ ನಡುವಿನ ಕಿತ್ತಾಟ ತಾರಕ್ಕೇರಿದೆ. ಪರಸ್ಪರ ಇಬ್ಬರು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ನೀಡಿದ್ದು, ಕಾನೂನು ಸಮರ ನಡೆಸುತ್ತಿದ್ದಾರೆ.
ಭುವನ್ ತೊಡೆ ಕಚ್ಚಿದ ಸಂಬಂಧ ಪ್ರಥಮ್ ವಿರುದ್ಧ ದೂರು ದಾಖಲಾಗಿದೆ. ಅದಕ್ಕೆ ಪ್ರತಿಯಾಗಿ ಪ್ರಥಮ್ ಕೂಡ ಭುವನ್ ವಿರುದ್ಧ ಕಂಪ್ಲೈಂಟ್ ನೀಡಿದ್ದಾರೆ.
ಇಬ್ಬರ ಹಾದಿ ರಂಪ -ಬೀದಿ ರಂಪ ನೋಡಿದ ನಟ ಸುದೀಪ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಭುವನ್ ಮತ್ತು ಪ್ರಥಮ್ ಇಬ್ಬರನ್ನ ಇಂದು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸಂಧಾನ ನಡೆಸಿದ್ದಾರೆ ಎನ್ನಲಾಗಿದೆ.
ಇಬ್ಬರು ಈ ಕಚ್ಚಾಟ ಬೀದಿ ಜಗಳ ಬಿಟ್ಟು ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯುವ ಕಡೆ ಗಮನ ಕೊಡಿ ಎಂದು ಬುದ್ದಿವಾದ ಹೇಳಿದ್ದಾರಂತೆ. ಜನ ನಿಮ್ಮಿಬ್ಬರಿಗೂ ಒಳ್ಳೆಯ ಸ್ಥಾನ ನೀಡಿದ್ದಾರೆ. ಅದನ್ನು ಉಳಿಸಿಕೊಂಡು ಹೋಗಿ, ಒಳ್ಳೊಳ್ಳೆ ಸಿನಿಮಾಗಳು ನಿಮ್ಮ ಕೈಯ್ಯಲ್ಲಿವೆ. ಸಂಜು ಮತ್ತು ನಾನು ಶೋ ಚೆನ್ನಾಗಿ ಬರ್ತಿದೆ, ಕಾನೂನು ಹೋರಾಟ ಬಿಟ್ಟು. ಬೆಳೆಯುವ ಕಡೆಗೆ ಹೆಚ್ಚು ಗಮನ ನೀಡಿ ಎಂದ ಹೇಳಿದ್ದಾರೆ ಎಂದು ಮಾಧ್ಯಮಗಳ ವರದಿ ಮಾಡಿವೆ.