ಜಯರಾಮ್ ಕಾರ್ತಿಕ್ 
ಸಿನಿಮಾ ಸುದ್ದಿ

ನಾನು 'ವಿಸ್ಮಯ'ದಲ್ಲಿ ನಟಿಸಿದ್ದೇನೆ: ಜಯರಾಮ್ ಕಾರ್ತಿಕ್

ಅರ್ಜುನ್ ಸರ್ಜಾ ಅವರ 150 ನೇ ಸಿನಿಮಾದಲ್ಲಿ ಜಯರಾಮ್ ಕಾರ್ತಿಕ್ ನಟನೆಯ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು. ಆದರೆ ಸಿನಿಮಾ ಬಿಡುಗಡೆಗೆ ಸಿದ್ಧವಾಗುವವರೆಗೂ ಪಾತ್ರದ ಬಗ್ಗೆ ಮಾಹಿತಿಯನ್ನು...

ಅರ್ಜುನ್ ಸರ್ಜಾ ಅವರ 150 ನೇ ಸಿನಿಮಾದಲ್ಲಿ ಜಯರಾಮ್ ಕಾರ್ತಿಕ್ ನಟನೆಯ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು. ಆದರೆ ಸಿನಿಮಾ ಬಿಡುಗಡೆಗೆ ಸಿದ್ಧವಾಗುವವರೆಗೂ ಪಾತ್ರದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸದಂತೆ ಜಯರಾಂ ಕಾರ್ತಿಕ್ ಮೇಲೆ ಒತ್ತಡವಿತ್ತು. 
ವಿಸ್ಮಯ ಸಿನಿಮಾದಲ್ಲಿ ಜಯರಾಮ್ ಕಾರ್ತಿಕ್ ಅರ್ಜುನ್ ಸರ್ಜಾ ಎದುರಾಳಿ ಅಂದರೆ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ. "ವಿಸ್ಮಯ ದೊಡ್ಡ ಯೋಜನೆಯಾಗಿತ್ತು, ನಾನು ಆ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಎಲ್ಲರಿಗೂ ಹೇಳಬೇಕೆಂದುಕೊಂಡಿದ್ದೆ, ಆದರೆ ಸಿನಿಮಾದ ನಿರ್ಮಾಪಕರು, ಮಾಹಿತಿಯನ್ನು ಬಹಿರಂಗಪಡಿಸದಂತೆ ಸೂಚಿಸಿದ್ದರು. ನಾನು ವಿಸ್ಮಯದಲ್ಲಿ ನಟಿಸಿದ್ದೇನೆ ಎಂದು ಹೇಳುವುದಕ್ಕೆ ಸಿನಿಮಾ ಬಿಡುಗಡೆಯಾಗುತ್ತಿರುವ ವಾರದ ವರೆಗೂ ಕಾಯಬೇಕಾಯಿತು ಎಂದು ಜಯರಾಮ್ ಕಾರ್ತಿಕ್ ಹೇಳಿದ್ದಾರೆ. 
ವಿಸ್ಮಯ ಚಿತ್ರ ತೆಲುಗಿನಲ್ಲೂ ಡಬ್ ಆಗಿದ್ದು, ಕುರುಕ್ಷೇತ್ರಂ ಎಂಬ ಹೆಸರಿನಲ್ಲಿ ಬಿಡುಗಡೆಯಾಗಲಿದೆ, ತಮಿಳಿನಲ್ಲಿ ನಟ ಕೃಷ್ಣ ನನ್ನ ಪಾತ್ರವನ್ನಿ ನಿರ್ವಹಿಸಿದ್ದಾರೆ ಎಂದು ಜೆಕೆ ತಿಳಿಸಿದ್ದಾರೆ. ಹಿರೋ ಪಾತ್ರದಲ್ಲಿಯೂ ನಟಿಸಿರುವ ಜಯರಾಮ್ ಕಾರ್ತಿಕ್, ನಾನು ನಕಾರಾತ್ಮಕ ಪಾತ್ರಗಳಲ್ಲಿಯೂ ನಟಿಸುತ್ತೇನೆ ಆದರೆ ಅಂತಹ ಪಾತ್ರಗಳು ಎಂದಿಗೂ ನೆನೆಸಿಕೊಳ್ಳುವಂತಹದ್ದಾಗಿರಬೇಕು, ವಿಸ್ಮಯದ ಪಾತ್ರ ಅಂತಹ ಸಾಲಿಗೆ ಸೇರಿದೆ ಎಂದು ಜೆಕೆ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT