ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್
ಮುಂಬೈ: ಖ್ಯಾತ ಚಿತ್ರಕಥೆಗಾರ ಸಲೀಮ್ ಖಾನ್ ಮತ್ತು ಸುಶೀಲ ಚರಕ್ ಅವರ ಪುತ್ರ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಪೋಷಕರೊಡನೆ ಬಾಂಧ್ರ ಅಪಾರ್ಟ್ಮೆಂಟ್ ನಲ್ಲಿ ನೆಲೆಸಲು ಇಷ್ಟಪಡುತ್ತಾರೆ ಮತ್ತು ವೈಭವಯುತ ಬಂಗ್ಲೆಗಾಗಿ ಅವರಿಂದ ದೂರವಾಗಲು ಇಚ್ಛಿಸುವುದಿಲ್ಲ.
ತಮ್ಮ ಮುಂದಿನ ಚಿತ್ರ 'ಟ್ಯೂಬ್ ಲೈಟ್' ಪ್ರಚಾರಕ್ಕಾಗಿ ತಮ್ಮ ಸಹೋದರ ಸೊಹೈಲ್ ಖಾನ್ ಅವರೊಂದಿಗೆ ಸಲ್ಮಾನ್ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮ 'ಸ ರೇ ಗಮ ಪ ಲಿಟಲ್ ಚಾಂಪ್ಸ್' ನಲ್ಲಿ ಭಾಗವಹಿಸಿದ್ದರು.
ದೊಡ್ಡ ಬಂಗ್ಲೆಗೆ ನೀವು ಹೋಗಬಹದಾದರೂ ಸಲ್ಮಾನ್ ಸಣ್ಣ ಅಪಾರ್ಟ್ಮೆಂಟ್ ನಲ್ಲಿಯೇ ಉಳಿದಿರುವುದು ಏಕೆ ಎಂದು ಸ್ಪರ್ಧಿ ಧ್ರೂನ್ ಟಿಕ್ಕೂ' ಪ್ರಶ್ನಿಸಿದಾಗ "ದೊಡ್ಡ ವೈಭವಯುತ ಬಂಗ್ಲೆಗಿಂತಲೂ ನನಗೆ ಬಾಂಧ್ರ ಅಪಾರ್ಟ್ಮೆಂಟ್ ನಲ್ಲಿ ಇರಲು ಇಷ್ಟ ಏಕೆಂದರೆ ಅಲ್ಲಿ ನಮ್ಮ ಮನೆಯ ಮೇಲೆಯೇ ನನ್ನ ಪೋಷಕರು ಇರುತ್ತಾರೆ. ನಾನು ಸಣ್ಣವನಾಗಿದ್ದಾಗಿಲಿಂದಲೂ ಕಾಲುಗಳು ಅಲ್ಲಿಗೆ ಎಳೆದು ತರುತ್ತವೆ" ಎಂದು ಸಲ್ಮಾನ್ ಹೇಳಿದ್ದಾರೆ.
"ಆ ಇಡೀ ಕಟ್ಟಡ ನನಗೆ ಕುಟುಂಬವಿದ್ದಂತೆ. ನಾವು ಮಕ್ಕಳಾಗಿದ್ದಾಗ, ಆ ಕಟ್ಟಡ ಎಲ್ಲ ಮಕ್ಕಳು ಕೆಳಗೆ ಉದ್ಯಾನದಲ್ಲಿ ಆಡುತ್ತಿದ್ದೆವು ಮತ್ತು ಕೆಲವು ಬಾರಿ ಅಲ್ಲಿಯೇ ಮಲಗುತ್ತಿದ್ದೆವು.
"ಆಗ ಅಲ್ಲಿ ಬೇರೆ ಬೇರೆ ಮನೆಗಳು ಎಂದು ನಾವು ಎಣಿಸಿರಲಿಲ್ಲ. ಎಲ್ಲರು ಎಲ್ಲರ ಮನೆಗೆ ಹೋಗಿ ಊಟ ಮಾಡುತ್ತಿದ್ದೆವು. ಆ ಮನೆಗೆ ಸಂಬಂಧಿಸಿದಂತೆ ಎಲ್ಲ ನೆನಪುಗಳನ್ನು ಉಳಿಸಿಕೊಳ್ಳಲು ನಾನಿನ್ನು ಅಲ್ಲಿಯೇ ಇದ್ದೇನೆ" ಎಂದು ಕೂಡ ಸಲ್ಮಾನ್ ಹೇಳಿದ್ದಾರೆ.