'ಚಮಕ್' ಚಿತ್ರದಲ್ಲಿ ಗಣೇಶ್ ಮತ್ತು ರಶ್ಮಿಕಾ
ಬೆಂಗಳೂರು: ನಿರ್ದೇಶಕ ಸುನಿ 'ಚಮಕ್' ಸಿನೆಮಾದ ೭೫% ಚಿತ್ರೀಕರಣ ಸಂಪೂರ್ಣಗೊಳಿಸಿದ್ದಾರೆ. ಈ ಸಿನೆಮಾದಲ್ಲಿ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದಾರೆ. ಇವರ ಪಾತ್ರಗಳ ಹೆಸರು ಖುಷ್ ಮತ್ತು ಖುಷಿಯಂತೆ. ಸಿನೆಮಾದ ಮೊದಲ ನೋಟ ಈಗ ಲಭ್ಯವಾಗಿದ್ದು, ಮುಖ್ಯ ನಟರು ಮದುವೆ ಸಮಾರಂಭದಲ್ಲಿ ಭಾಗಿಯಾಗಿರುವ ಸ್ಟಿಲ್ ಗಳು ಲಭ್ಯವಾಗಿವೆ.
"ಇದು ಯುವ ಜೋಡಿಯ ಕಥೆ. ಗಣೇಶ್ ಗೈನೋಕಾಲಜಿಸ್ಟ್ ಮತ್ತು ರಶ್ಮಿಕಾ ಎಂಬಿಎ ಪದವೀಧರೆ ಆದರೆ ಮದುವೆ ನಂತರ ಗೃಹಕಾರ್ಯ ನಿರ್ವಹಿಸುವ ಮಹಿಳೆಯಾಗಿ ನಟಿಸಿದ್ದಾರೆ. ಇದು ಕೌಟುಂಬಿಕ ಮೌಲ್ಯಗಳನ್ನು ಚರ್ಚಿಸುತ್ತದೆ" ಎನ್ನುತ್ತಾರೆ ನಿರ್ದೇಶಕ ಸುನಿ.
ವಿಷಯದ ಆಧಾರಿತವಾಗಿ ಪಾತ್ರಗಳ ಹೆಸರನ್ನು ಆಯ್ಕೆ ಮಾಡಿರುವುದಾಗಿ ಹೇಳುವ ನಿರ್ದೇಶಕ "ಇದು ರೊಮ್ಯಾಂಟಿಕ್ ಹಾಸ್ಯ ಚಿತ್ರ. ಆದುದರಿಂದ ಆ ಹೆಸರುಗಳನ್ನು ಆಯ್ಕೆ ಮಾಡಿದೆ. ಖುಷ್ ಮತ್ತು ಖುಷಿ ಹೆಸರುಗಳೇ ಸಂತಸವನ್ನು ಸೂಚಿಸುತ್ತವೆ" ಎನ್ನುತ್ತಾರೆ.
ಈ ಮಧ್ಯೆ ಮಳೆಯಿಂದ ಹೋಳಿ ನಡುವೆ ನಡೆಯಬೇಕಿದ್ದ ಆಕ್ಷನ್ ದೃಶ್ಯದ ಚಿತ್ರೀಕರಣವನ್ನು ಸುನಿ ಮುಂದೂಡಿದ್ದಾರೆ. ಐರ್ಲೆಂಡ್ ನಲ್ಲಿ ಒಂದು ಹಾಡಿನ ಚಿತ್ರೀಕರಣ ಕೂಡ ಬಾಕಿಯಿದೆಯಂತೆ.
ಟಿ ಆರ್ ಚಂದ್ರಶೇಖರ್ ಸಿನೆಮಾವನ್ನು ನಿರ್ಮಿಸುತ್ತಿದ್ದು, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.