ನಂದ ಕಿಶೋರ್ ಮತ್ತು ತರುಣ್ ಸುಧೀರ್ 
ಸಿನಿಮಾ ಸುದ್ದಿ

ನಾವು ಸದಾ ಒಬ್ಬರಿಗೊಬ್ಬರು ಬೆನ್ನಲುಬಾಗಿರುತ್ತೇವೆ: ನಂದ ಕಿಶೋರ್- ತರುಣ್ ಸುಧೀರ್

ಹಿರಿಯ ನಟ ದಿವಂಗತ ಸುದೀರ್ ಅವರ ಪುತ್ರರಾದ ನಂದ ಕಿಶೋರ್ ಮತ್ತು ತರುಣ್ ಸುಧೀರ್, ತಮ್ಮ ತಾಯಿ ಸ್ಥಾಪಿಸಿದ ನಾಟಕ ಕಂಪನಿಯನ್ನು...

ಬೆಂಗಳೂರು: ಬಾಲಿವುಡ್ ನಲ್ಲಿ ದಶಕಗಳಿಂದ ವಿಭಿನ್ನ ಶೈಲಿಯ ಸಿನಿಮಾ ನೀಡುತ್ತಿರುವ ಅಬ್ಬಾಸ್-ಮಸ್ತಾನ್, ಹಾಲಿವುಡ್ ನ ಕೊಯಾನ್ ಸಹೋದರರ ಜೋಡಿಯಂತೆ ಸ್ಯಾಂಡಲ್ ವುಡ್ ನಲ್ಲೂ ಸಹೋದರರ ಜೋಡಿಯೊಂದು ಸಿನಿಮಾಗಾಗಿ ಒಬ್ಬರಿಗೊಬ್ಬರು ಬೆನ್ನು ಕೊಟ್ಟು ನಿಂತಿದ್ದಾರೆ.
ಹಿರಿಯ ನಟ ದಿವಂಗತ ಸುದೀರ್ ಅವರ ಪುತ್ರರಾದ ನಂದ ಕಿಶೋರ್ ಮತ್ತು ತರುಣ್ ಸುಧೀರ್, ತಮ್ಮ ತಾಯಿ ಸ್ಥಾಪಿಸಿದ ನಾಟಕ ಕಂಪನಿಯನ್ನು ಬೆಳೆಸಿಕೊಂಡು ಬಂದವರು. ಕಳೆದ 23 ವರ್ಷಗಳಿಂದ ಕರ್ನಾಟಕ ಕಲಾ ವೈಭವ ಸಂಘ ಎಂಬ ನಾಟಕ ಕಂಪನಿಯನ್ನು ಬೆಳೆಸಿ ಪೋಷಿಸುತ್ತಿದ್ದಾರೆ.
ಸಿನಿಮಾದಲ್ಲಿ  ನಂದ ಕಿಶೋರ್ ಅವರಿಗೆ ತರುಣ್ ಎಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತಿದ್ದಾರೆ. 2013 ರಲ್ಲಿ ಬಿಡುಗಡೆಯಾದ ವಿಕ್ಟರಿ ಚಿತ್ರಕ್ಕೆ ನಂದ ಕಿಶೋರ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು.ಅದಾದ ನಂತರ, ಅಧ್ಯಕ್ಷ, ರನ್ನ, ಮುಕುಂದ ಮುರಾರಿ, ನಂತರ ಈಗ ಟೈಗರ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಪ್ರದೀಪ್ ನಾಯಕರಾಗಿರುವ ಟೈಗರ್ ಚಿತ್ರಕ್ಕೆ ತರುಣ್ ಚಿತ್ರಕಥೆ ಬರೆದಿದ್ದು, ನಂದ ಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ.
ಉತ್ತಮ ಚಿತ್ರಕಥೆಯಿಂದ ಪ್ರೇಕ್ಷಕರಿಗೆ ಒಳ್ಳೆಯ ಸಿನಿಮಾ ನೀಡುವುದು ನಮ್ಮ ಉದ್ದೇಶವಾಗಿದೆ. ನಮಗೆ ಸರಿ ಹೊಂದುವಂತಹ ನಮ್ಮ ಇಷ್ಟಾನಿಷ್ಟಗಳನ್ನು ಅರ್ಥ ಮಾಡಿಕೊಳ್ಳುವವರು ಒಟ್ಟಿಗೆ ಇದ್ದಾಗ ಸಿನಿಮಾ ಮತ್ತಷ್ಟು ಉತ್ತಮವಾಗಿ ಮೂಡಿಬರಲು ಸಾಧ್ಯವಾಗುತ್ತದೆ ಎಂದು ನಿರ್ದೇಶಕ ನಂದ ಕಿಶೋರ್ ಹೇಳಿದ್ದಾರೆ.
ತಮ್ಮ ಸಿನಿಮಾಗಳಲ್ಲಿ ತರುಣ್ ಭಾಗಿಯಾಗುವುದರಿಂದ ನಮ್ಮ ಚಿಂತನೆ ಸ್ಷಷ್ಟವಾಗಿರುತ್ತದೆ. ನಾವಿಬ್ಬರು ನಮಗೆ ಉತ್ತಮ ವಿಮರ್ಶಕರಾಗಿದ್ದೇವೆ ಎಂಬುದು ಕಿಶೋರ್ ಅಭಿಪ್ರಾಯ.
ಕೆಲಸದ ವಿಚಾರದಲ್ಲಿ ನಾವು  ಪರಸ್ಪರ, ದೂರು, ಜಗಳ, ವಾದ ಮಾಡುತ್ತೇವೆ. ನಮ್ಮಿಬ್ಬರ ನಡುವೆ ಒಂದು ಆರೋಗ್ಯಕರವಾದ ಪೈಪೋಟಿಯಿದೆ. ಆದರೆ ಸಿನಿಮಾ ಮಾಡುವಾಗ ನಮ್ಮಿಬ್ಬರ ಗುರಿ ಒಂದೇ ಆಗಿರುತ್ತದೆ. ಎಲ್ಲಾ ಯಶಸ್ಸುಗಳು ನಮ್ಮನ್ನು ದೊಡ್ಡ ಮಟ್ಟದಲ್ಲಿ  ಯೋಜನೆ ಮಾಡಿ ಮತ್ತೊಂದು ಹಂತಕ್ಕೆ ತಲುಪುವಂತೆ ಮಾಡುತ್ತದೆ, ನಾವಿಬ್ಬರೂ ಯಾವಾಗಲೂ ಒಬ್ಬರಿಗೊಬ್ಬರು ಬೆಂಬಲವಾಗಿರುತ್ತೇವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT