ಮುಂಬೈ: ’ಬಾಹುಬಲಿ-2' ಚಿತ್ರದ 'ಬಲ್ಲಾಳದೇವ' ಪಾತ್ರಧಾರಿ ರಾಣಾ ದಗ್ಗುಬಾಟಿ ಚಾಟ್ ಶೋ ನಡೆಸಿಕೊಡಲಿದ್ದಾರೆ.
ಸಿನಿಮಾ ಕ್ಷೇತ್ರದ ಸ್ನೇಹಿತರೊಂದಿಗೆ ಮಾತನಾಡುವ ನಂ.1 ಯಾರಿ ಕಾರ್ಯಕ್ರಮವನ್ನು ರಾಣಾ ದಗ್ಗುಬಾಟಿ ನಡೆಸಿಕೊಡಲಿದ್ದು, ಟಾಲಿವುಡ್ ನ ಪ್ರಮುಖ ಸ್ಟಾರ್ ನಟರ ಜೀವನದ ಅನುಭವಗಳು ಹಾಗೂ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಕಾರ್ಯಕ್ರಮವಾಗಿರಲಿದೆ.
ಕಾರ್ಯಕ್ರಮ ನಿರೂಪಣೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಣಾ ದಗ್ಗುಬಾಟಿ ನಂ.1 ಯಾರಿ ಮೇಲಿನ ಪ್ರೀತಿ ವಿಶ್ವಾಸಗಳಿಗೆ ಧನ್ಯವಾದಗಳು, ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಡೆಸಿಕೊಡುತ್ತೇನೆ ಎಂದು ಹೇಳಿದ್ದಾರೆ. ನಂ.1 ಯಾರಿ ಕಾರ್ಯಕ್ರಮ ಜೂ.26 ರಿಂದ ಜೆಮಿನಿ ಟಿವಿ ಹಾಗೂ ವೀರು ಟಿವಿಯಲ್ಲಿ ಪ್ರಸಾರವಾಗಲಿದೆ.