ರಚಿತಾ ರಾಮ್-ಶ್ರದ್ಧಾ ಶ್ರೀನಾಥ್
ಬೆಂಗಳೂರು: ನಟಿ ರಚಿತಾ ರಾಮ್ ಎರಡನೇ ಬಾರಿಗೆ ವಿಜಯ್ ಸಿನೆಮಾದಿಂದ ಹೊರಬಂದಿದ್ದಾರೆ ಎನ್ನುತ್ತವೆ ಮೂಲಗಳು. ಈ ಹಿಂದೆ ಅವರು ದುನಿಯಾ ವಿಜಯ್ ಅವರ 'ಕನಕ' ಸಿನೆಮಾದಲ್ಲಿ ನಟಿಸಬೇಕಿತ್ತು, ಆದರೆ ಕಾರಣಾಂತರಗಳಿಂದ ಅದರಿಂದ ಹೊರಬಿದ್ದಿದ್ದರು ಮತ್ತೀಗ 'ಜಾನಿ ಜಾನಿ ಯಸ್ ಪಾಪ' ಸಿನೆಮಾದಿಂದಲೂ ಹೊರಬಂದಿರುವ ಸುದ್ದಿ ಬೆಳಕಿಗೆ ಬಂದಿದೆ.
ಪ್ರೀತಮ್ ಗುಬ್ಬಿ ತಮ್ಮ 'ಜಾನಿ ಜಾನಿ ಯಸ್ ಪಾಪ'ದಲ್ಲಿ ವಿಜಯ್ ಮತ್ತು ರಚಿತಾ ಜೋಡಿಯನ್ನು ಪರಿಚಯಿಸಲು ಮುಂದಾಗಿದ್ದಾಗ, ದಿನಾಂಕಗಳ ಕಲಹದಿಂದ ಆರ್ ಚಂದ್ರು ನಿರ್ದೇಶನದ 'ಕನಕ' ಸಿನೆಮಾದಲ್ಲಿ ನಟಿಸುವುದರಿಂದ ನಟಿ ದೂರವುಳಿದಿದ್ದರು. ಈಗ ರಚಿತಾ ಪೂರ್ವನಿಯೋಜಿತ ಸಿನೆಮಾಗಳ ಕೆಲಸದ ಮೇರೆಗೆ 'ಜಾನಿ ಜಾನಿ ಯಸ್ ಪಾಪ'ದಲ್ಲಿ ನಟಿಸುತ್ತಿಲ್ಲ ಎಂದು ತಿಳಿದುಬಂದೆ.
ಈಗ 'ಜಾನಿ ಜಾನಿ ಯಸ್ ಪಾಪ' ಚಿತ್ರತಂಡ ವಿಜಯ್ ಎದುರು ನಟಿಸಲು 'ಯು ಟರ್ನ್' ಬೆಡಗಿ ಶ್ರದ್ಧಾ ಶ್ರೀನಾಥ್ ಅವರ ಜೊತೆಗೆ ಚರ್ಚೆ ನಡೆಸಿದೆಯಂತೆ. ನಟಿ ಇದಕ್ಕೆ ಆಸಕ್ತಿ ತೋರಿದ್ದು, ಹಣಕಾಸಿನ ವಿಷಯವಷ್ಟೇ ಬಾಕಿ ಉಳಿದಿದೆ ಎನ್ನುತ್ತವೆ ಮೂಲಗಳು.
'ಜಾನಿ ಜಾನಿ ಯಸ್ ಪಾಪ' ಸಿನೆಮಾ 'ಜಾನಿ ಮೇರಾ ನಾಮ್' ಸಿನೆಮಾದ ದ್ವಿತೀಯ ಭಾಗವಾಗಿದ್ದು, ಹಿಂದಿನ ಆವೃತ್ತಿಯಲ್ಲಿ ರಮ್ಯಾ ನಟಿಸಿದ್ದರು.
ಈ ಸಿನೆಮಾವನ್ನು ವಿಜಯ್ ಒಡೆತನದ ದುನಿಯಾ ಟಾಕೀಸ್ ನಿರ್ಮಿಸುತ್ತಿದ್ದು, ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ರಂಗಾಯಣ ರಘು ಮತ್ತು ಸಾಧುಕೋಕಿಲ ಕೂಡ ತಾರಾಗಣದ ಭಾಗವಾಗಿದ್ದಾರೆ.
ಈಮಧ್ಯೆ ಶ್ರದ್ಧಾ ತಮ್ಮ ತಮಿಳು ಸಿನೆಮಾ 'ಇವನ್ ತಂತಿರನ್' ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.