ಚಿಕ್ಕಣ್ಣ-ಶರಣ್ 
ಸಿನಿಮಾ ಸುದ್ದಿ

ಇನ್ನೆರಡು ಸಿನೆಮಾಗಳಲ್ಲಿ ಮುಂದುವರೆಯಲಿದೆ ಶರಣ್-ಚಿಕ್ಕಣ್ಣ ಕೆಮಿಸ್ಟ್ರಿ

ತೆರೆಯ ಮೇಲಿನ ಕೆಮಿಸ್ಟ್ರಿ ಕೇವಲ ಹೀರೊ ಮತ್ತು ಹೀರೋಯಿನ್ ಗಳಿಗೆ ಸೀಮಿತವಾಗಬೇಕಿಲ್ಲ ಮತ್ತು ಸಿನೆಮಾದ ಯಶಸ್ಸಿಗೆ ವಿವಿಧ ನಟರ ನಡುವಿನ ತೆರೆಯ ಮೇಲಿನ ಬಾಂಧವ್ಯ ಕೂಡ ಅಷ್ಟೇ

ಬೆಂಗಳೂರು: ತೆರೆಯ ಮೇಲಿನ ಕೆಮಿಸ್ಟ್ರಿ ಕೇವಲ ಹೀರೊ ಮತ್ತು ಹೀರೋಯಿನ್ ಗಳಿಗೆ ಸೀಮಿತವಾಗಬೇಕಿಲ್ಲ ಮತ್ತು ಸಿನೆಮಾದ ಯಶಸ್ಸಿಗೆ ವಿವಿಧ ನಟರ ನಡುವಿನ ತೆರೆಯ ಮೇಲಿನ ಬಾಂಧವ್ಯ ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಕನ್ನಡ ಚಿತ್ರರಂಗದಲ್ಲಿ ಅಂತಹ ಒಂದು ಉತ್ತಮ ಉದಾಹರಣೆ ನಟ ಶರಣ್ ಮತ್ತು ಚಿಕ್ಕಣ್ಣನವರದ್ದು.
ನಂದಕಿಶೋರ್ ನಿರ್ದೇಶನದ 'ಅಧ್ಯಕ್ಷ' ಸಿನೆಮಾದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದು ಜನಕ್ಕೆ ಬಹಳ ಮೆಚ್ಚುಗೆಯಾಗಿತ್ತು ಮತ್ತು ಈಗ ಅದೇ ಮಾಂತ್ರಿಕತೆಯನ್ನು ಈ ಇಬ್ಬರೂ ನಟಿಸಿರುವ 'ರಾಜ್-ವಿಷ್ಣು'ವಿನಲ್ಲಿ ಕಾಣಲು ಕಾತರಿಸುತ್ತಿದ್ದಾರೆ. 
ಮತ್ತೊಂದು ಆಸಕ್ತಿದಾಯಕ ವಿಷಯದಲ್ಲಿ ಈ ಇಬ್ಬರ ಜೋಡಿ ಮುಂದಿನ ಎರಡು ಸಿನೆಮಾಗಳಿಗೆ ಮುಂದುವರೆಯಲಿದೆ. ಈ ಸಿನೆಮಾಗಳನ್ನು ಅನಿಲ್ ಮತ್ತು ಯೋಗಾನಂದ್ ಮುದ್ದಣ್ಣ ನಿರ್ದೇಶಿಸಲಿದ್ದಾರೆ. 
ಈಮಧ್ಯೆ 'ರಾಜ್-ವಿಷ್ಣು' ನಿರ್ಮಾಪಕರು ಚಿತ್ರದ ಆಡಿಯೋವನ್ನು ಚಿಕ್ಕಣ್ಣನವರ ಹುಟ್ಟುಹಬ್ಬದ ದಿನವಾದ ಇಂದು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ರಾಮು ನಿರ್ಮಿಸಿರುವ ಮತ್ತು ಕೆ ಮಾದೇಶ್ ನಿರ್ದೇಶನದ ಈ ಚಿತ್ರ ತಮಿಳು ಸಿನೆಮಾ 'ರಜನಿ ಮುರುಗನ್'ನಿಂದ ಸ್ಫೂರ್ತಿ ಪಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?