ನಟಿ ಸಂಯುಕ್ತ ಹೆಗಡೆ 
ಸಿನಿಮಾ ಸುದ್ದಿ

ತೆಲುಗು ಪದಾರ್ಪಣೆಗೆ ಸಂಯುಕ್ತ ಹೆಗಡೆ ಸಿದ್ಧ?

ನಿಖಿಲ್ ಸಿದ್ಧಾರ್ಥ ಅಭಿನಯಿಸಲಿರುವ 'ಕಿರಿಕ್ ಪಾರ್ಟಿ' ತೆಲುಗು ರಿಮೇಕ್ ಚಿತ್ರೀಕರಣಕ್ಕೆ ಸಿದ್ಧವಾಗಿದೆ. ಎಕೆ ಎಂಟರ್ಟೈನ್ಮೆಂಟ್ ನಿರ್ಮಿಸುತ್ತಿರುವ ಈ ಸಿನೆಮಾವನ್ನು ನೃತ್ಯನಿರ್ದೇಶನದಿಂದ ನಿರ್ದೇಶನಕ್ಕೆ

ಬೆಂಗಳೂರು: ನಿಖಿಲ್ ಸಿದ್ಧಾರ್ಥ ಅಭಿನಯಿಸಲಿರುವ 'ಕಿರಿಕ್ ಪಾರ್ಟಿ' ತೆಲುಗು ರಿಮೇಕ್ ಚಿತ್ರೀಕರಣಕ್ಕೆ ಸಿದ್ಧವಾಗಿದೆ. ಎಕೆ ಎಂಟರ್ಟೈನ್ಮೆಂಟ್ ನಿರ್ಮಿಸುತ್ತಿರುವ ಈ ಸಿನೆಮಾವನ್ನು ನೃತ್ಯನಿರ್ದೇಶನದಿಂದ ನಿರ್ದೇಶನಕ್ಕೆ ಭಡ್ತಿ ಪಡೆಸಿರುವ ರಾಜು ಸುಂದರಂ ನಿರ್ದೇಶಿಸಲಿದ್ದಾರೆ. 
ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ' ಸಿನೆಮಾದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ಜೊತೆಗೆ ನಟಿ ಸಂಯುಕ್ತ ಹೆಗಡೆ ಪಾದಾರ್ಪಣೆ ಮಾಡಿದ್ದಲ್ಲದೆ ಎಲ್ಲರ ಗಮನ ಸೆಳೆದಿದ್ದರು. ಈಗ ಅದೇ ಪಾತ್ರವನ್ನು ತೆಲುಗಿನಲ್ಲಿಯೂ ನಟಿಸಲು ಚಿತ್ರತಂಡ ಸಂಯುಕ್ತ ಅವರ ಮೊರೆ ಹೋಗಿದೆಯಂತೆ. 
ಮೂಲಗಳ ಪ್ರಕಾರ "ನಿರ್ಮಾಣ ತಂಡ ನಟಿಯ ಜೊತೆಗೆ ಮಾತುಕತೆ ನಡೆಸಿದೆ. ಈಗ ದಿನಾಂಕ ಮತ್ತು ಹಣಕಾಸಿನ ವಿಷಯ ಅಂತಿಮವಾಗಬೇಕಿದೆ. ಇವೆಲ್ಲವೂ ಒಪ್ಪಿತವಾದರೆ, ಅವರನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಕಾತರರಾಗಿದ್ದೇವೆ" ಎನ್ನುತ್ತವೆ. 
ನಟಿ ಸದ್ಯಕ್ಕೆ ಸಂತೋಷ್ ನಿರ್ದೇಶನದ 'ಕಾಲೇಜ್ ಕುಮಾರ್' ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಹಾಗೆಯೇ ಶ್ರೀನಾಗ್ ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರಂತೆ. ಇದರ ಅಧಿಕೃತ ಘೋಷಣೆ ಆಗಬೇಕಷ್ಟೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ: ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಜಾತಿ ನಿಂದನೆ ತಂದೆ-ಮಗನ ವಿರುದ್ಧ ಪ್ರಕರಣ ದಾಖಲು

SCROLL FOR NEXT