ಮುಂಬೈ: ಸದ್ಯಕ್ಕೆ ಬಾಲಿವುಡ್ ನಟರಲ್ಲಿ ಜನಪ್ರಿಯರಾಗಿರುವ ನವಾಜುದ್ದೀನ್ ಸಿದ್ದಿಕಿ, ನಟಿ ಶ್ರೀದೇವಿ ಅವರ ಅಭಿಮಾನಿಯಂತೆ.
ಶ್ರೀದೇವಿ ಆವರೊಂದಿಗೆ 'ಮಾಮ್' ಸಿನೆಮಾದಲ್ಲಿ ನಟಿಸುವ ಅವಕಾಶ ಸಿಕ್ಕಾಗ ಚಿವುಟಿಕೊಂಡು ಪರೀಕ್ಷಿಸಿಕೊಂಡೆ ಎನ್ನುವ ನಟ "'ಮಾಮ್' ಸಿನೆಮಾದಲ್ಲಿ ಶ್ರೀದೇವಿ ಆವರೊಂದಿಗೆ ಅವಕಾಶ ಸಿಕ್ಕಾಗ, ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ಇದು ನನ್ನ ಕನಸು ನನಸಾದ ಕ್ಷಣ. ಇದ್ಕಲ್ಕಿಂತಲೂ ಆಪ್ತ ಪರಿಸ್ಥಿತಿಯನ್ನು ನಿರೀಕ್ಷಿಸಲಾರೆ.
"ವೀಕ್ಷಕನಾಗಿ, ಪ್ರತಿ ಸಿನಿಮಾದಲ್ಲಿಯೂ ಅವರು ಅಷ್ಟು ಖಚಿತವಾಗಿ ನಟಿಸಲು ಹೇಗೆ ಸಾಧ್ಯ ಎಂದು ಅಚ್ಚರಿ ಪಡುತ್ತಿದ್ದೆ. ಈಗ ಸಹನಟನಾಗಿಯೂ ಆ ಅಚ್ಚರಿ ಮುಂದುವರೆದಿದೆ" ಎನ್ನುತ್ತಾರೆ ನವಾಜ್.
'ಮಾಮ್' ಚಲನಚಿತ್ರ ಜುಲೈ ೭ಕ್ಕೆ ಬಿಡುಗಡೆಯಾಗಲಿದೆ.