ಮುಂಬೈ: 'ವಿಐಪಿ-೨' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಟ-ನಿರ್ದೇಶಕ ಧನುಷ್, ಮಾವ ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಬಗ್ಗೆ ಕೇಳಿದ ಪ್ರಶ್ನೆಗೆ ನೇರ ಉತ್ತರ ನೀಡಲು ನಿರಾಕರಿಸಿ, ನನ್ನ ಅಭಿಪ್ರಾಯವನ್ನು ನನ್ನ ಬಳಿಯೇ ಇಟ್ಟುಕೊಳ್ಳುತ್ತೇನೆ ಎಂದಿದ್ದಾರೆ.
ರಜನಿಕಾಂತ್ ರಾಜಕೀಯಕ್ಕೆ ಸೇರಬೇಕೇ ಎಂಬ ಪ್ರಶ್ನೆಗೆ, ವರದಿಗಾರರಿಗೆ ಉತ್ತರಿಸಿರುವ ಧನುಷ್ "ನಿಮ್ಮ ಬಳಿ ಅಭಿಪ್ರಾಯ ಇದೆಯೇ? ಯಾಕಿರಬಾರದು? ನನಗೆ ನನ್ನದೇ ಅಭಿಪ್ರಾಯ ಇದೆ ಮತ್ತು ಅದನ್ನು ನನ್ನ ಬಳಿಯೇ ಉಳಿಸಿಕೊಳ್ಳುತ್ತೇನೆ" ಎಂದಿದ್ದಾರೆ.
ಕಳೆದ ಕೆಲವು ವಾರಗಳಿಂದ ರಾಜಕೀಯ ಪ್ರವೇಶ ಮಾಡುವ ಸುಳಿವನ್ನು ರಜನೀಕಾಂತ್ ನೀಡುತ್ತಲೇ ಬಂದಿದ್ದಾರೆ.
ಕಳೆದ ತಿಂಗಳು ಕೂಡ "ದೇವರು ಇಚ್ಛಿಸಿದರೆ" ರಾಜಕೀಯದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದಾಗಿ ರಜನೀಕಾಂತ್ ಹೇಳಿದ್ದರು. ಸದ್ಯಕ್ಕೆ ರಜನೀಕಾಂತ್ 'ಕಾಲಾ' ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಶಂಕರ್ ಅವರ '೨.೦' ಸಿನೆಮಾದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ.