ನಟಿ ಅಕ್ಷರ ಗೌಡ 
ಸಿನಿಮಾ ಸುದ್ದಿ

ಎರಡನೇ ಸಿನೆಮಾಗೆ ಸಜ್ಜಾದ ಗೌಸ್ ಪೀರ್; ಅಕ್ಷರ ನಾಯಕನಟಿ

ಆಕ್ಷನ್-ಹಾಸ್ಯ ಚಿತ್ರ 'ಶಾರ್ಪ್ ಶೂಟರ್' ಸಿನೆಮಾದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದ ಗೀತರಚನಾಕಾರ ಗೌಸ್ ಪೀರ್ ತಮ್ಮ ಎರಡನೇ ಯೋಜನೆಯನ್ನು ಅಂತಿಮಗೊಳಿಸಲು ಒಂದೂವರೆ ವರ್ಷ

ಬೆಂಗಳೂರು: ಆಕ್ಷನ್-ಹಾಸ್ಯ ಚಿತ್ರ 'ಶಾರ್ಪ್ ಶೂಟರ್' ಸಿನೆಮಾದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದ ಗೀತರಚನಾಕಾರ ಗೌಸ್ ಪೀರ್ ತಮ್ಮ ಎರಡನೇ ಯೋಜನೆಯನ್ನು ಅಂತಿಮಗೊಳಿಸಲು ಒಂದೂವರೆ ವರ್ಷ ತೆಗೆದುಕೊಂಡಿದ್ದಾರೆ. ಈಗ ಅದಕ್ಕೆ ಸಿದ್ಧವಾಗಿದ್ದು, ಇದು ಥ್ರಿಲ್ಲರ್ ಸಿನೆಮಾ ಎನ್ನುತ್ತಾರೆ. 
ಮುರಳಿ ಕುಮಾರ್ ಈ ಸಿನೆಮಾದ ನಿರ್ಮಾಪಕನಾಗಿದ್ದು, ಚಾರ್ಮಿಯೋನ್ ಮೋಶನ್ ಪಿಕ್ಚರ್ಸ್ ಬ್ಯಾನರ್ ಅಡಿ ಈ ಸಿನೆಮಾ ನಿರ್ಮಾಣಗೊಳ್ಳಲಿದೆ. "ಸ್ಕ್ರಿಪ್ಟ್ ಅಂತಿಮಗೊಂಡಿದೆ ಮತ್ತು ಆಷಾಢ ಕಳೆದ ಮೇಲೆ ಕೆಲಸ ಪ್ರಾರಂಭಿಸುತ್ತೇವೆ. ಇದು ಆಗಸ್ಟ್ ಮೊದಲ ವಾರದಲ್ಲಿ ಶುರುವಾಗಲಿದೆ" ಎನ್ನುತ್ತಾರೆ ನಿರ್ದೇಶಕ. 
ಸಿನೆಮಾದ ಹೀರೊ ಹೆಸರನ್ನು ಮುಂದಿನ ವಾರ ಅಧಿಕೃತವಾಗಿ ನಿರ್ದೇಶಕ ಘೋಷಿಸಲಿದ್ದು, ನಾಯಕನಟಿಯಾಗಿ ಅಕ್ಷರ ಗೌಡ ಆಯ್ಕೆಯಾಗಿರುವುದಾಗಿ ತಿಳಿಸುತ್ತಾರೆ ಪೀರ್. "ಅವರ ದಿನಾಂಕ ಧೃಢೀಕರಣಗೊಳ್ಳುವವರೆಗೂ ಯಾರು ಹೀರೊ ಎಂದು ತಿಳಿಸುವುದಿಲ್ಲ" ಎನ್ನುವ ಪೀರ್ "ಸ್ಕ್ರಿಪ್ಟ್ ಓದಿ ಒಂದಿಬ್ಬರು ಹೀರೋಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಈಮಧ್ಯೆ ಅಕ್ಷರ ಅವರ ಆಡಿಷನ್ ನಡೆಸಿದ ನಂತರ ನಾಯಕನಟಿ ಪಾತ್ರಕ್ಕೆ ಅವರು ಸೂಕ್ತ ಎಂದೆನಿಸಿತು" ಎನ್ನುತ್ತಾರೆ. 
ಕಾಲಿವುಡ್ ನಲ್ಲಿಯೂ ನಟಿಸಿರುವ ಅಕ್ಷರ ಹರಿಪ್ರಸಾದ್ ಜಯಣ್ಣ ಅವರ 'ಪ್ರೇಮದಲ್ಲಿ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದವರು. ಈಗ ಈ ಸಿನೆಮಾ ಸೆನ್ಸಾರ್ ಪ್ರಮಾಣಪತ್ರಕ್ಕೆ ಕಾಯುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel