'ಹುಲಿರಾಯ' ಸಿನೆಮಾದ ಪೋಸ್ಟರ್ 
ಸಿನಿಮಾ ಸುದ್ದಿ

ಘರ್ಜಿಸಲು ಬರುತ್ತಿದ್ದಾನೆ 'ಹುಲಿರಾಯ'

'ನಮ್ ಏರಿಯಾದಲ್ಲಿ ಒಂದಿನ', 'ತುಘಲಕ್' ಸಿನೆಮಾಗಳ ನಂತರ ವಿರಾಮ ತೆಗೆದುಕೊಂಡಿದ್ದ ನಿರ್ದೇಶಕ ಅರವಿಂದ್ ಕೌಶಿಕ್ ಈಗ 'ಹುಲಿರಾಯ'ನ ಮೂಲಕ ಹಿಂದಿರುಗಿದ್ದಾರೆ.

ಬೆಂಗಳೂರು: 'ನಮ್ ಏರಿಯಾದಲ್ಲಿ ಒಂದಿನ', 'ತುಘಲಕ್' ಸಿನೆಮಾಗಳ ನಂತರ ವಿರಾಮ ತೆಗೆದುಕೊಂಡಿದ್ದ ನಿರ್ದೇಶಕ ಅರವಿಂದ್ ಕೌಶಿಕ್ ಈಗ 'ಹುಲಿರಾಯ'ನ ಮೂಲಕ ಹಿಂದಿರುಗಿದ್ದಾರೆ. 
ನೆನಪಿನಲ್ಲುಳಿಯುವ ಸಿನೆಮಾ ಮಾಡಿದ್ದೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುವ ಅರವಿಂದ್ "ನನ್ನ ಕಥೆ ಹಿಡಿದು ಎಲ್ಲ ನಿರ್ಮಾಪಕರಿಗೂ ಒಪ್ಪಿಸುವ ಬದಲು, ಟೀಸರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೆ. ಇದಕ್ಕೆ ಬಂದ ಅಭೂತಪೂರ್ವ ಪ್ರತಿಕ್ರಿಯೆ ನನಗೆ ನಿರ್ಮಾಪಕನನ್ನು ದೊರಕಿಸಿಕೊಟ್ಟಿತು ಮತ್ತು ಅವರು ನನ್ನ ಗೆಳೆಯ ಕೂಡ" ಎನ್ನುತ್ತಾರೆ.
"ಈ ಸಿನೆಮಾ ಕೇಂದ್ರದಲ್ಲಿ ಮನರಂಜನೆಯಿಂದ ಕೂಡಿರುವಂತಾದ್ದು. ನನ್ನ ಗೆಳೆಯನ ಜೊತೆಗೆ ಕಾಡಿಗೆ ಹೋದಾಗ ಈ ಕಥೆ ಹೊಳೆದದ್ದು. ಹುಲಿಯ ಕಥೆ ಮೂಲಕ ನನ್ನ ಕಥೆ ಹೇಳುವುದು ಸುಲಭ ಎಂದೆನಿಸಿತು. ಆದರೆ ನನ್ನ ಸಿನೆಮಾದಲ್ಲಿ ಹುಲಿ ಎಲ್ಲಿಯೂ ಬರುವುದಿಲ್ಲ" ಎನ್ನುತ್ತಾರೆ ಅರವಿಂದ್. 
"ಈ ಸಿನೆಮಾದಲ್ಲಿ ಪ್ರೇಮಕಥೆಯಿದೆ, ಭಾವನಾತ್ಮಕ ಪಯಣ ಇದೆ, ಆಕ್ಷನ್ ಇದೆ ಮತ್ತು ಥ್ರಿಲ್ಲರ್ ಇದೆ" ಎನ್ನುತ್ತಾರೆ. 
ಸಿನೆಮಾದಲ್ಲಿ ಬಾಲು ನಾಗೇಂದ್ರ, ದಿವ್ಯ, ಚಿರಶ್ರೀ ಮುಂತಾದವರು ನಟಿಸಿದ್ದು ಆಗಸ್ಟ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಅರ್ಜುನ್ ರಾಮು ಸಂಗೀತ ನೀಡಿರುವ ಈ ಸಿನೆಮಾವನ್ನು ಪುಷ್ಕರ್ ಫಿಲಂಸ್ ವಿತರಣೆ ಮಾಡುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ