ನಟಿ ರಚಿತಾ ರಾಮ್ 
ಸಿನಿಮಾ ಸುದ್ದಿ

ಆರ್ ಜೆ ಮಯೂರ್ ಸಿನೆಮಾಗೆ ರಚಿತಾ ರಾಮ್ ನಿರ್ಮಾಪಕಿ

ಸದ್ಯಕ್ಕೆ ಬೆಳ್ಳಿ ತೆರೆಯಿಂದ ವಿರಾಮ ಪಡೆದು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಈಗ ನಿರ್ಮಾಪಕರಾಗಿ ಹೊರಹೊಮ್ಮಿರುವುದು ವಿಶೇಷ.

ಬೆಂಗಳೂರು: ಸದ್ಯಕ್ಕೆ ಬೆಳ್ಳಿ ತೆರೆಯಿಂದ ವಿರಾಮ ಪಡೆದು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಈಗ ನಿರ್ಮಾಪಕರಾಗಿ ಹೊರಹೊಮ್ಮಿರುವುದು ವಿಶೇಷ.  
ಅವರು ನಿರ್ಮಾಪಕಿಯಾಗಿ ಮೊದಲು ಕಿರುಚಿತ್ರವೊಂದಕ್ಕೆ ಸಾಥ್ ನೀಡಲಿದ್ದಾರೆ. ರೇಡಿಯೋ ಜಾಕಿ ಮಯೂರ್ ಈ ಕಿರುಚಿತ್ರದ ಮೂಲಕ ನಿರ್ದೇಶಕನಾಗಿ ಹೊರಹೊಮ್ಮುತ್ತಿದ್ದಾರೆ.
'ಬುಲ್ ಬುಲ್' ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಈಗ ಜನಪ್ರಿಯವಾಗಿರುವ ನಟಿ "ನಾನು ಬೆಳ್ಳಿ ತೆರೆಗೆ ಹೆಜ್ಜೆಯಿಟ್ಟಾಗ ಅಂದುಕೊಂಡದ್ದೇನೆಂದರೆ, ನಾನು ನಟಿಸುವುದನ್ನು ಬಿಟ್ಟರು ಚಲನಚಿತ್ರೋದ್ಯಮದ ಜೊತೆಗೆ ಸಂಬಂಧವನ್ನು ಮಾತ್ರ ಉಳಿಸಿಕೊಳ್ಳಬೇಕೆಂಬುದು" ಎನ್ನುವ ರಚಿತಾ "ಆದುದರಿಂದಲೇ ನಾನು ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಲು ನಿಶ್ಚಯಿಸಿದ್ದು. ಇದು ಈಗ ಸಾಧ್ಯವಾಗಿದೆ ಮತ್ತು ಈ ಕಿರುಚಿತ್ರ ಅದರತ್ತ ಮೊದಲ ಹೆಜ್ಜೆ" ಎನ್ನುತ್ತಾರೆ. 
ಈ ಯೋಜನೆ ಮೊದಲೇ ಇತ್ತಾದರೂ ಒಂದು ಕಪ್ ಕಾಫಿ ಕುಡಿದು ಅಂತಿಮಗೊಳಿಸಿದೆವು ಎನ್ನುವ ನಟಿ "ಮಯೂರ್ ನನ್ನ ಒಳ್ಳೆಯ ಗೆಳೆಯ ಮತ್ತು ನಾವು ಸಿನೆಮಾ ಬಗ್ಗೆ ಕಳೆದ ನಾಲ್ಕು ವರ್ಷಗಳಿಂದಲೂ ಚರ್ಚಿಸುತ್ತಿದ್ದೇವೆ. ಈಗ ಒಳ್ಳೆಯ ವಿಷಯದ ಬಗ್ಗೆ ಸಿನೆಮಾ ನಿರ್ಮಾಣ ಪ್ರಾರಂಭಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ" ಎನ್ನುವ ರಚಿತಾ ಇದಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿರುವುದಕ್ಕೂ ಸಂತಸ ವ್ಯಕ್ತಪಡಿಸುತ್ತಾರೆ. 
ಸ್ಕ್ರಿಪ್ಟ್ ಓದಿಲ್ಲ ಎಂದು ನಟಿ ತಿಳಿಸಿದರು ಮಯೂರ್ ಹೇಳಿರುವ ಸಿನೆಮಾ ವಿಷಯದ ಬಗ್ಗೆ ಭರವಸೆ ವ್ಯಕ್ತಪಡಿಸುತ್ತಾರೆ. ೮ ವರ್ಷಗಳಿಂದ ರೇಡಿಯೋ ಜಾಕಿ ಆಗಿರುವ ಮಯೂರ್ ತಮ್ಮ ನಿರ್ದೇಶನಕ್ಕೆ ಸ್ಫೂರ್ತಿ ನಟ ರ್ನಿರ್ದೇಶಕ ರವಿಚಂದ್ರನ್ ಎಂದು ತಿಳಿಸುತ್ತಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT