ಜನಪ್ರಿಯ ನಿರ್ಮಾಪಕ ರಾಕ್ಲೈನ್ ವೆಂಕಟೇಶ್
ಬೆಂಗಳೂರು: ಜನಪ್ರಿಯ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರಿಗೆ ನಟನೆಯೇನು ಹೊಸದಲ್ಲ. ಅವರು ಈಗಾಗಲೇ ಕೆಲವು ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು ಬಾಲ ನಿರ್ದೇಶನದ ತಮಿಳು ಸಿನೆಮಾ 'ನಾಚಿಯಾರ್'ನಲ್ಲಿ ಪ್ರಮುಖ ಪಾತ್ರ ಪಡೆದಿರುವುದು ವಿಶೇಷ.
'ಪಿತಾಮಗನ್' ನಿರ್ದೇಶಕನೊಂದಿಗೆ ಕೆಲಸ ಮಾಡುವುದಕ್ಕೆ ರಾಕ್ಲೈನ್ ಉತ್ಸುಕರಾಗಿದ್ದಾರೆ ಎಂದು ತಿಳಿಸುವ ಮೂಲಗಳು "ಬಾಲ ಸರ್ ಕೇಳಿದಾಗ ಅವರು ಚಕಿತಗೊಂಡರು. ಆದರೆ ಬಾಲ ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಕಳೆದುಕೊಳ್ಳಲು ಅವರಿಗೆ ಕಿಂಚಿತ್ತೂ ಇಷ್ಟವಿರಲಿಲ್ಲ. ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಮತ್ತು ವಿಶೇಷ ನೋಟದಲ್ಲಿ ಕಾಣಿಸಿಕೊಳ್ಳಲಿದ್ದಾರೆ" ಎನ್ನುತ್ತವೆ.
ರಾಕ್ಲೈನ್ ಪ್ರಮುಖ ಖಳನಾಯಕನಾಗಿ ಅಭಿನಯಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ "ಅವರು ಖಳನಾಯಕನ ಪಾತ್ರವನ್ನು ಮಾಡುತ್ತಿದ್ದಾರೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಹಲವು ಅಚ್ಚರಿಗಳನ್ನು ಬಾಲು ಸರ್ ಮೂಡಿಸುವುದು ನಿಜ. ಈ ತಿಂಗಳ ಕೊನೆಯಲ್ಲಿ ಅವರು ಸೆಟ್ ಸೇರಲಿದ್ದಾರೆ" ಎನ್ನುತ್ತಾರೆ.
ಈ ಸಿನೆಮಾದಲ್ಲಿ ಜ್ಯೋತಿಕಾ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದು, ಜಿ ವಿ ಪ್ರಕಾಶ್ ಕುಮಾರಿನ್ ಪ್ರಮುಖ ಋಣಾತ್ಮಕ ಪಾತ್ರ ನಿರ್ವಹಿಸಲಿದ್ದಾರೆ. ಈ ಯೋಜನೆಗೆ ಬುಧವಾರ ಚಾಲನೆ ಸಿಕ್ಕಿದೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಸಂಗೀತ ಚಿತ್ರಕ್ಕಿದೆ.
ಬಹುತೇಕ ತಮಿಳುನಾಡಿನಲ್ಲಿಯೇ ಚಿತ್ರೀಕರಣ ನಡೆಯಲಿರುವ ಈ ಸಿನೆಮಾ ಕ್ರೈಮ್ ಥ್ರಿಲ್ಲರ್ ಎನ್ನಲಾಗಿದೆ.