ಪಿತೃತ್ವ ವಿವಾದ: ಧನುಷ್ಗೆ ಡಿಎನ್ಎ ಪರೀಕ್ಷೆಗೆ ಸೂಚಿಸುವಂತೆ ಕೋರ್ಟ್ಗೆ ಕದಿರೇಸನ್ ಅರ್ಜಿ
ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯ ಹಾಗೂ ನಟ ಧನುಷ್ ನಮ್ಮ ಮಗ ಎಂದು ಹೇಳಿಕೊಂಡು ಬಂದ ಮಧುರೈನ ಕದಿರೇಶನ್ ದಂಪತಿಗಳು ಇದೀಗ ಧನುಷ್ ಗೆ...
ಮಧುರೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯ ಹಾಗೂ ನಟ ಧನುಷ್ ನಮ್ಮ ಮಗ ಎಂದು ಹೇಳಿಕೊಂಡು ಬಂದ ಮಧುರೈನ ಕದಿರೇಶನ್ ದಂಪತಿಗಳು ಇದೀಗ ಧನುಷ್ ಗೆ ಡಿಎನ್ಎ ಪರೀಕ್ಷೆ ಮಾಡಿಸುವಂತೆ ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
60 ವರ್ಷದ ಕದೀರೇಸನ್ ಮತ್ತು ಪತ್ನಿ 55 ವರ್ಷದ ಮೀನಾಕ್ಷಿ ದಂಪತಿಗಳು ಮಧುರೈನ ಮೇಲೂರು ತಾಲೂಕಿನ ಮಲಮ್ ಪಟ್ಟಿ ಗ್ರಾಮದ ನಿವಾಸಿಗಳಾಗಿದ್ದು ಧನುಷ್ ನಮ್ಮ ಮಗ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನಮಗೆ ಮೂವರು ಮಕ್ಕಳಿದ್ದು ಅವರಲ್ಲಿ ಧನುಷ್ ಕೂಡ ಒಬ್ಬರು ಎಂದು ಹೇಳಿ ದಂಪತಿಗಳು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಈ ಸಂಬಂಧ ಕೋರ್ಟ್ ಧನುಷ್ ಗೆ ಸಮನ್ಸ್ ಜಾರಿ ಮಾಡಿತ್ತು.
ಧನುಷ್ ತನ್ನ ಮಗ, ಆತನನ್ನು ನೋಡಲು ಅವಕಾಶ ಮಾಡಿಕೊಡಬೇಕು ಹಾಗೂ ವಯೋವೃದ್ಧ ತಂದೆ-ತಾಯಿಗಳಿಗೆ ಜೀವನಾಂಶ ಕೊಡಿಸಬೇಕು ಎಂದು ಆಗ್ರಹಿಸಿ ಕದಿರೇಸನ್ ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಇದರ ಬೆನ್ನಲ್ಲೇ ಈಗ ಡಿಎನ್ಎ ಪರೀಕ್ಷೆ ಮಾಡಿಸುವಂತೆ ಮನವಿ ಮಾಡಿದ್ದು ಈ ಅರ್ಜಿಯ ವಿಚಾರಣೆ ಮಾರ್ಚ್ 9 ರಂದು ನಡೆಯಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.