ಅನೂಪ್ ಭಂಢಾರಿ-ಪುನೀತ್ ರಾಜಕುಮಾರ್
ಬೆಂಗಳೂರು: ಅನೂಪ್ ಮತ್ತು ನಿರುಪ್ ಭಂಢಾರಿ ಸಹೋದರರು ತಮ್ಮ 'ರಂಗಿತರಂಗ' ಸಿನೆಮಾವನ್ನು ವಿಶ್ವಪರ್ಯಟನೆ ಮಾಡಿಸಿದವರು. ಈಗ ನಿರುಪ್ ನಾಯಕನಟನಾಗಿರುವ 'ರಾಜರಾಥ' ಸಿನೆಮಾದಲ್ಲಿ ಅವರಿಬ್ಬರೂ ಬ್ಯುಸಿಯಾಗಿದ್ದಾರೆ.
ಆದರೆ ಇತ್ತೀಚಿನ ಆಸಕ್ತಿದಾಯಕ ಸುದ್ದಿಯಲ್ಲಿ ಅನೂಪ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಿನೆಮಾವೊಂದನ್ನು ನಿರ್ದೇಶಿಸಲಿದ್ದಾರೆ. ಈ ಸಿನೆಯಾದಲ್ಲಿ ಪುನೀತ್ ಜೊತೆಗೆ ನಿರುಪ್, ತೆರೆಯನ್ನು ಹಂಚಿಕೊಳ್ಳುತ್ತಿರುವುದು ನಿರ್ದೇಶಕರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಮಾರ್ಚ್ ೨ ರಂದು ಹುಟ್ಟುಹಬ್ಬ ಆಚರಿಸಿಕೊಂಡಿರುವ ನಿರ್ದೇಶಕ ಈ ದೊಡ್ಡ ಘೋಷಣೆಯನ್ನು ಮಾಡಲು ಸಿದ್ಧರಾಗಿದ್ದಾರೆ.
"ಇದು ಆಕ್ಷನ್-ಸಾಹಸಮಯ ಚಿತ್ರವಾಗಿರಲಿದೆ. ಇದು ನನಗೆ ಅತಿ ಹೆಚ್ಚು ಸಂತಸದ ಕ್ಷಣ ಏಕೆಂದರೆ ನಾವಿಬ್ಬರು ಸಹೋದದರರಿಗೆ ದೊಡ್ಡ ನನಟನೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ" ಎನ್ನುತ್ತಾರೆ ಅನೂಪ್.
"ಒಂದು ಸಾಲಿನ ಕಥೆ ಕೇಳುವ ಮೊದಲೇ ಪುನೀತ್ ಅವರು ನಮ್ಮ ಜೊತೆಗೆ ಕೆಲಸ ಮಾಡುವ ಆಸಕ್ತಿಯನ್ನು ಈ ಹಿಂದೆಯೇ ತೋರಿದ್ದರು" ಎನ್ನುವ ಅನೂಪ್ "ನಾನು 'ರಾಜರಾಥ'ದಲ್ಲಿ ಬ್ಯುಸಿಯಿದ್ದರಿಂದ ಈ ಕಥೆಯ ಮೇಲೆ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಸ್ಕ್ರಿಪ್ಟ್ ಮೇಲೆ ಕೆಲಸ ಪ್ರಾರಂಭಿಸಲಿದ್ದೇವೆ. ನನ್ನ ಪೂರ್ವನಿಯೋಜಿತ ಕೆಲಸಗಳು ಮುಗಿದು, ಸ್ಕ್ರಿಪ್ಟ್ ಸಂಪೂರ್ಣಗೊಂಡ ಮೇಲೆ ಚಿತ್ರೀಕರಣದ ದಿನಾಂಕ ನಿಶ್ಚಯವಾಗಲಿದೆ" ಎನ್ನುತ್ತಾರೆ ಅವರು.
ಈ ಯೋಜನೆಯನ್ನು ಪುನೀತ್ ಅಭಿಮಾನಿಗಳಿಗೆ ಅರ್ಪಿಸುವ ಅನೂಪ್ "'ರಂಗಿತರಂಗ' ಬಂದ ಮೇಲೆ ನಾನು ಪುನೀತ್ ರಾಜಕುಮಾರ್ ಸಿನೆಮಾವನ್ನು ನಿರ್ದೇಶಿಸಲಿದ್ದೇನೆ ಎಂಬ ವದಂತಿ ಹಬ್ಬಿತ್ತು.
"ಇದು ಸುಮ್ಮನೆ ಬಂದು ಹೋದ ಚಿಂತನೆಯಾಗಿದ್ದರು, ಕಾಳ್ಗಿಚ್ಚಿನಂತೆ ಹಬ್ಬಿತು. ನನ್ನನ್ನು ಭೇಟಿ ಮಾಡಿದವರೆಲ್ಲ ಪುನೀತ್ ಅವರೊಂದಿಗೆ ಸಿನೆಮಾ ಯಾವಾಗ ಮಾಡುತ್ತೀರಿ ಎಂದು ಕೇಳುತ್ತಿದ್ದರು. ನಾನು ಹಿಂದಿನ ದಿನಗಳಲ್ಲಿ ಒಂದು ವಿಷಯವನ್ನು ಕಲ್ಪಿಸಿಕೊಂಡಿದ್ದೆ ಅದು ಮರುಕಳಿಸಿ, ವಿಷಯ ಪುನೀತ್ ಅವರಿಗೆ ಹೊಂದಾಣಿಕೆಯಾಗುತ್ತದೆ ಎಂದೆನಿಸಿತು.
"ಈಗ ಅದೇ ಕಥೆಯ ಮೇಲೆ ಕೆಲಸ ಮಾಡುತ್ತಿದ್ದೇವೆ" ಎನ್ನುವ ಅವರು ಈ ಸಿನೆಮಾದಲ್ಲಿ ಪುನೀತ್ ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.
"ಇದು ಕಮರ್ಷಿಯಲ್ ಸಿನೆಮಾ ಆಗಲಿದೆ ಜೊತೆಗೆ ಜನ ನನ್ನಿಂದ ನಿರೀಕ್ಷಿಸುವ ಸಿನೆಮಾ ಕೂಡ ಆಗಲಿದೆ" ಎನ್ನುವ ನಿರ್ದೇಶಕ್ "ಪುನೀತ್ ಅವರು ವಿಶ್ವ ಸಿನೆಮಾದ ಬಗ್ಗೆ ಅತಿ ಹೆಚ್ಚು ಮೆಚ್ಚುಗೆಯಿದೆ ಎಂದು ತಿಳಿದು ಆಶ್ಚರ್ಯವಾಯಿತು. ನಮ್ಮ ಮನಸ್ಥಿತಿಗಳು ಹೊಂದಾಣಿಕೆಯಾಗಿದ್ದು ಬಹಳ ಆಸಕ್ತಿದಾಯಕ. ಸಿನೆಮಾದ ಬಗ್ಗೆ ಅವರ ಅಭಿಪ್ರಾಯಗಳು ಆಪ್ತವಾದವು. ಅವರು 'ರಂಗಿತರಂಗ' ನೋಡಿದ್ದರು ಮತ್ತು ನನ್ನ ಕೆಲಸವನ್ನು ತಿಳಿದಿದ್ದರು ಎಂಬ ಅಂಶ ನನ್ನ ಜೊತೆಗೆ ಕೆಲಸ ಮಾಡಲು ಅವರು ಒಪ್ಪುವುದಕ್ಕೆ ಸಹಕರಿಸಿತು" ಎನ್ನುತ್ತಾರೆ ಅನೂಪ್.