ಸಿನಿಮಾ ಸುದ್ದಿ

'ಪದ್ಮಾವತಿ' ವಿಧ್ವಂಸಕರಿಂದ ಚಿತ್ತೋರ್ಘರ್ ಕೋಟೆಯ ಪದ್ಮಿನಿ ಮಹಲ್ ಕನ್ನಡಿಗಳು ಪುಡಿಪುಡಿ

Guruprasad Narayana
ಜೈಪುರ: ರಜಪೂತ ರಾಣಿ ಪದ್ಮಾವತಿಯ ಪ್ರತಿಬಿಂಬವನ್ನು ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿಗೆ ತೋರಿಸಲಾಗಿದ್ದ ಕನ್ನಡಿಗಳು ಎಂದು ನಂಬಲಾದ, ಚಿತ್ತೋರ್ಘರ್ ಕೋಟೆಯ ಪದ್ಮಿನಿ ಮಹಲ್ ಗೆ ನುಗ್ಗಿದ ಕೆಲವು ಕಿಡಿಗೇಡಿಗಳು ಅದನ್ನು ಪುಡಿಗುಟ್ಟಿ ಧ್ವಂಸವೆಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 
"ಕೆಲವು ಕಿಡಿಗೇಡಿಗಳು ಸೋನಾವಾರ ಸಂಜೆ ಎಲ್ಲಾ ಮೂರು ಕನ್ನಡಿಗಳನ್ನು ಒಡೆದುಹಾಕಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದು ತನಿಖೆ ಜಾರಿಯಲ್ಲಿದೆ ಎಂದಿದ್ದಾರೆ. 
ಕನ್ನಡಿಗಳನ್ನು ಒಡೆದಿದ್ದಕ್ಕೆ ಶ್ರೀ ರಜಪೂತ್ ಕರ್ಣಿ ಸೇನಾ ಹೊಣೆ ಹೊತ್ತಿದೆ. ಜನವರಿ ೨೭ ರಂದು ಸಂಜಯ್ ಲೀಲಾ ಭನ್ಸಾಲಿ ಅವರು ನಿರ್ದೇಶಿಸುತ್ತಿರುವ 'ಪದ್ಮಾವತಿ' ಸಿನೆಮಾ ಸೆಟ್ ಹೊಕ್ಕಿ ದಾಂಧಲೆ ನಡೆಸಿದ್ದು ಕೂಡ ಇದೆ ಸಂಘಟನೆಯ ಕಾರ್ಯಕರ್ತರು. 
"ನಾವು ಇದನ್ನು ೧೫ ದಿನಗಳ ಹಿಂದೆಯೇ ಎಚ್ಚರಿಸಿದ್ದವು, ಅದರ ಹೊರತಾಗಿಯೂ ಕನ್ನಡಿಗಳನ್ನು ತೆರವು ಮಾಡಿಲ್ಲ" ಎಂದು ಶ್ರೀ ರಜಪೂತ್ ಕರ್ಣಿ ಸೇನಾದ ಕಾರ್ಯಕರ್ತರೊಬ್ಬರು ಹೇಳಿದ್ದಾರೆ. 
೧೩ ನೇ ಶತಮಾನದ ಸುಲ್ತಾನ ಖಿಲ್ಜಿಗೆ ಈ ಕನ್ನಡಿಗಳ ಮೂಲಕ ರಾಣಿ ಪದ್ಮಾವತಿಯ ಪ್ರತಿಬಿಂಬ ತೋರಿಸಲಾಗಿತ್ತು ಎಂಬ ನಂಬಿಕೆಯಿದೆ. ಆದರೆ ಈ ಘಟನೆ ನಡೆದ ಮೇಲಷ್ಟೇ ಕನ್ನಡಿಗಳನ್ನು ಕಂಡುಹಿಡಿಯಲಾಗಿದ್ದು ಎಂಬುದು ಕರ್ಣಿ ಸೇನಾದ ವಾದ. 
ಭನ್ಸಾಲಿ ಅವರ ಚಿತ್ರ ನಿಜ ಸಂಗತಿಗಳನ್ನು ತಿರುಚಿದೆ ಎಂದು ದೂರಿ ನಿರ್ದೇಶಕರೊಂದಿಗೆ ಈ ಸೇನೆಯ ಕಾರ್ಯಕರ್ತರು ಜನವರಿ ೨೭ ರಂದು ಅನುಚಿತವಾಗಿ ವರ್ತಿಸಿ, ಕೆಲವು ಕ್ಯಾಮರಾ ಮತ್ತಿತರ ಉಪಕರಣಗಳಿಗೆ ಹಾನಿ ಮಾಡಿದ್ದರು. 
SCROLL FOR NEXT