ಬೆಂಗಳೂರು: ವಿವಾಹದ ನಂತರ ನಟಿಯರಿಗೆ ವೃತ್ತಿ ಜೀವನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದಕ್ಕೆ ತಡೆಯಾಗುತ್ತದೆ ಎಂಬ ನಂಬಿಕೆ ದಟ್ಟವಾಗಿದ್ದರು, ಮದುವೆಯಾದ ಮೇಲೆ ಸಿನೆಮಾರಂಗದಿಂದ ದೂರವುಳಿಯುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದ್ದವರು ನಟಿ ರಾಧಿಕಾ ಪಂಡಿತ್. ನನ್ನ ಮುಂದಿನ ಭವಿಷ್ಯದ ಬಗ್ಗೆ ಮುಕ್ತ ಮನಸ್ಸಿದೆ ಎನ್ನುವ ನಟಿ, ಪತಿ ಮತ್ತು ನಟ ಯಶ್ ಅವರ ಸಂಪೂರ್ಣ ಸಹಕಾರವಿದೆ ಎನ್ನುತ್ತಾರೆ.
"ಮದುವೆಯಾದ ಮೇಲೆ ಮನೆಗೆಲಸಗಳನ್ನು ನೋಡಿಕೊಂಡು, ಕೆಲವೇ ಸಿನೆಮಾಗಳಲ್ಲಿ ಕೆಲಸ ಮಾಡಿಕೊಂಡು, ನಿರ್ಮಾಣ ಸಂಸ್ಥೆ ಪ್ರಾರಂಭಿಸಬೇಕು ಎಂದು ಜನರ ನಂಬಿಕೆ. ಅದು ನಿಜವಿರಬಹುದು. ಆದರೆ ನಾನು ಇನ್ನು ಚಟುವಟಿಕೆಯಿಂದ ಇದ್ದೇನೆ. ಯಶ್ ಮತ್ತು ನಾನು ಇಬ್ಬರು ಇನ್ನು ಅತ್ಯುತ್ತಮ ಗೆಳೆಯರು ಮತ್ತು ನಮ್ಮ ಈ ಹೊಂದಾಣಿಕೆಯ ನಡುವೆ ಕೆಲಸ ಹೊರಗೆ ಇರುತ್ತದೆ. ಹೀಗಿದ್ದೂ ನಾವಿಬ್ಬರು ಮತ್ತೊಬ್ಬರ ಸಲಹೆ ಪಡೆಯುತ್ತೇವೆ.
"ನಾನು ಬೇರೆ ಯಾರಿಗೋ ನಟನೆ ಪ್ರಾರಂಭಿಸಿದ್ದಲ್ಲ. ನಾನು 'ಮೊಗ್ಗಿನ ಮನಸ್ಸು' ಪ್ರಾರಂಭಿಸಿದಾಗ ಯಾವ ಮನಸ್ಥಿತಿಯಿತ್ತೋ, ಅದೇ ಮನಸ್ಥಿತಿಯಲ್ಲಿ ಈಗಲೂ ಇದ್ದೇನೆ. ನನಗೆ ಯಾವುದೇ ರೀತಿಯ ನಿರ್ಬಂಧ ಕಾಣುತ್ತಿಲ್ಲ" ಎನ್ನುತ್ತಾರೆ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ ರಾಧಿಕಾ.
ನಟಿ ಈಗ ಮುಂದಿನ ಸಿನೆಮಾಗೆ ಸಹಿ ಹಾಕಿದ್ದು, ಹುಟ್ಟುಹಬ್ಬದ ಆಚರಣೆಯ ಸಮಯದಲ್ಲಿ ಅದರ ಅಧಿಕೃತ ಘೋಷಣೆ ಆಗಲಿದೆಯಂತೆ. "ನಾನು ಈಗ ಯಾವುದೇ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ನಾನು ತಂಡದ ಜೊತೆ ಸ್ಕ್ರಿಪ್ಟ್ ಬಗ್ಗೆ ಚರ್ಚಿಸಿದ್ದೇನೆ ಅದನ್ನು ಉತ್ತಮಪಡಿಸಲು ಈಗ ಕಾರ್ಯ ಪ್ರಗತಿಯಲ್ಲಿದೆ.
"ನಾನು ನಟನೆ ನಿಲ್ಲಿಸಿದ್ದೇನೆ ಎಂದು ತಿಳಿದುಕೊಂಡಿರುವವರಿಗೆ ಹೇಳುವುದೇನೆಂದರೆ ಶೀಘ್ರದಲ್ಲೇ ಹಿಂದಿರುಗಲಿದ್ದೇನೆ" ಎನ್ನುತ್ತಾರೆ ಎರಡು ತಿಂಗಳು ವಿರಾಮ ತೆಗೆದುಕೊಂಡಿದ್ದ ನಟಿ. ಈ ಸಮಯದಲ್ಲಿ ಅವರು ಯಶ್ ಅವರ ಸಾಮಾಜಿಕ ಚಟುವಟಿಕೆಯಾದ 'ಯಶೋಮಾರ್ಗ'ಕ್ಕೆ ಕೈಜೋಡಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕೆರೆಗಳ ಪುನರುಜ್ಜೀವನ ಕಾರ್ಯ ಇದಾಗಿದೆ. "ಈ ಯೋಜನೆಯಲ್ಲಿ ನಾನು ತೊಡಗಿಸಿಕೊಂಡಿದ್ದೆ, ಈಗ ನಟನೆಗೆ ಹಿಂದಿರುಗುವ ಸಮಯ" ಎನ್ನುತ್ತಾರೆ.
ಈ ವರ್ಷದ ಹುಟ್ಟುಹಬ್ಬ ರಾಧಿಕಾ ಅವರಿಗೆ ವಿಶೇಷ, ಏಕೆಂದರೆ ಯಶ್ ಅವರನ್ನು ವರಿಸಿದ ಮೇಲೆ ಬಂದಂತ ಮೊದಲ ಹುಟ್ಟುಹಬ್ಬ ಇದು. "ಕರ್ನಾಟಕದ ವಿವಿಧ ಬಾಗಗಳಿಂದ ನನಗೆ ಅಭಿನಂದಿಸಲು ಜನ ಬರಲಿದ್ದಾರೆ. ಈ ಸಮಯದಲ್ಲಿ ಯಶ್ ನನ್ನ ಜೊತೆಗೆ ಸದಾ ಇರುವುದರಿಂದ ನನ್ನ ಖುಷಿ ಇಮ್ಮಡಿಸಲಿದೆ" ಎನ್ನುತ್ತಾರೆ ರಾಧಿಕಾ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos