ಹುಬ್ಬಳ್ಳಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಟ್ವೀಟ್ ಗೆ ಕೊನೆಗೂ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಹೆಬ್ಬುಲಿ ಚಿತ್ರದ ಪ್ರಚಾರಕ್ಕಾಗಿ ಹುಬ್ಬಳ್ಳಿಗೆ ಆಗಮಿಸಿರುವ ಸುದೀಪ್, ದರ್ಶನ್ ಟ್ವೀಟ್ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನೀವು ನನಗೆ ಗೌರವ ಕೊಟ್ಟರೆ ನಾನು ನಿಮಗೆ ಕೊಡುತ್ತೇನೆ (Give Respect And Take Respect) ಎಂದು ಬಿರುಸಿನ ಉತ್ತರ ನೀಡಿ, ಕೋಪದಿಂದಲೇ ಸುದೀಪ್ ಹೊರನಡೆದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ 'ಸುದೀಪ್ ಮತ್ತು ನಾನು ಇನ್ಮುಂದೆ ಸ್ನೇಹಿತರಲ್ಲ' ಎಂದು ಟ್ವೀಟ್ ಮಾಡುವ ಮೂಲಕ ಹೊಸ ವಿವಾದಕ್ಕೆ ಕಾರಣವಾಗಿದ್ದರು.
ತುಮಕೂರಿನಲ್ಲಿ ಸ್ನೇಹಿತನ ನಿಧನದಿಂದ ಬಹಳ ನೋವಾಗಿದೆ. ತುಂಬಾ ಹಳೆಯ ಸ್ನೇಹಿತರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಸುದೀಪ್ ಇದೇ ವೇಳೆ ತಿಳಿಸಿದ್ದಾರೆ.