'ರಾಜಕುಮಾರ' ಸಿನೆಮಾ ಆಡಿಯೋ ಬಿಡುಗಡೆಯಲ್ಲಿ ನಟ ಶರತ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ 
ಸಿನಿಮಾ ಸುದ್ದಿ

ಪುನೀತ್ ರಾಜಕುಮಾರ್ ಅವರಲ್ಲಿ ಅಣ್ಣಾವ್ರನ್ನು ಕಂಡೆ: ಶರತ್ ಕುಮಾರ್

ದಕ್ಷಿಣ ಭಾರತದ ಜನಪ್ರಿಯ ನಟ ಶರತ್ ಕುಮಾರ್ ಅವರಿಗೆ 'ರಾಜಕುಮಾರ್ ಅಂದರೆ ಕರ್ನಾಟಕ ಮತ್ತು ಕರ್ನಾಟಕ ಎಂದರೆ ರಾಜಕುಮಾರ್'. ಅವರು ಹೀಗೆಂದದ್ದು ಸೋಮವಾರ ನಡೆದ ಪುನೀತ್ ರಾಜಕುಮಾರ್

ಬೆಂಗಳೂರು: ದಕ್ಷಿಣ ಭಾರತದ ಜನಪ್ರಿಯ ನಟ ಶರತ್ ಕುಮಾರ್ ಅವರಿಗೆ 'ರಾಜಕುಮಾರ್ ಅಂದರೆ ಕರ್ನಾಟಕ ಮತ್ತು ಕರ್ನಾಟಕ ಎಂದರೆ ರಾಜಕುಮಾರ್'. ಅವರು ಹೀಗೆಂದದ್ದು ಸೋಮವಾರ ನಡೆದ ಪುನೀತ್ ರಾಜಕುಮಾರ್ ನಟನೆಯ 'ರಾಜಕುಮಾರ' ಸಿನೆಮಾದ ಆಡಿಯೋ ಬಿಡುಗಡೆಯಲ್ಲಿ. ಕನ್ನಡ ಚಿತ್ರರಂಗದಲ್ಲಿ 'ರಾಜಕುಮಾರ' ಶರತ್ ಅವರ ನಾಲ್ಕನೇ ಸಿನೆಮಾವಾಗಿದ್ದು, ಪುನೀತ್ ಅವರೊಂದಿಗೆ ಚೊಚ್ಚಲ ಸಿನೆಮಾ. ಅವರು ಈ ಸಿನೆಮಾದಲ್ಲಿ ಪುನೀತ್ ಅವರ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. 
"'ರಾಜಕುಮಾರ' ಶೀರ್ಷಿಕೆ ಹೊತ್ತ ಈ ಸಿನೆಮಾದ ಬಗ್ಗೆ ಅಪಾರ ನಿರೀಕ್ಷೆಗಳಿರುವುದು ನಿಜ. ನನಗೆ ತಿಳಿದಿರುವಂಜೆತೆ ಸಂತೋಷ್ ಆನಂದರಾಮ್ ನಿರ್ದೇಶಿಸಿರುವ ಈ ಸಿನೆಮಾದಲ್ಲಿ ಅಣ್ಣಾವ್ರ ಗುಣಗಳು ಸಾಕಷ್ಟಿವೆ. ಇದರಲ್ಲಿ ಆಳವಿದೆ, ಭಾವನೆಗಳಿವೆ ಮತ್ತು ಮೌಲ್ಯಗಳಿವೆ. 'ರಾಜಕುಮಾರ' ಸಿನೆಮಾದ ಪುನೀತ್ ರಲ್ಲಿ ನಾನು ಅಣ್ಣಾವ್ರನ್ನು ಕಂಡೆ. ಒಂದು ಪಕ್ಷ ಅಣ್ಣಾವ್ರು ಈ ಸಿನೆಮಾದಲ್ಲಿ ನಟಿಸಿದ್ದರು ಅವರು ಕೂಡ ಇದೆ ಸಂಭಾಷಣೆಗಳನ್ನು ಹೇಳುತ್ತಿದ್ದರು ಎಂಬುದರ ಬಗ್ಗೆ ನನಗೆ ಅಚಲ ನಂಬಿಕೆಯಿದೆ" ಎನ್ನುತ್ತಾರೆ ನಟ ಶರತ್. 
ದರ್ಶನ ನಟನೆಯ 'ಸಾರಥಿ' ಸಿನೆಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಪ್ರಯಾಣ ಪ್ರಾರಂಭಿಸಿದ ಶರತ್, ನಾಗಶೇಖರ್ ನಿರ್ದೇಶನದ 'ಮೈನಾ, ಶಿವರಾಜ್ ಕುಮಾರ್ ಅಭಿನಯದ 'ಸಂತೆಯಲ್ಲಿ ನಿಂತ ಕಬೀರ' ಸಿನೆಮಾಗಳಲ್ಲಿಯೂ ನಟಿಸಿದ್ದರು. "'ರಾಜಕುಮಾರ' ಸಿನೆಮಾದಲ್ಲಿ ನನ್ನದು ಆಸಕ್ತಿದಾಯಕ ಮತ್ತು ಸವಾಲಿನ ಪಾತ್ರ. ಈ ಸಿನೆಮಾದಲ್ಲಿ ಕೆಲಸ ಮಾಡುವುದನ್ನು ನಾನು ಬಹಳ ಆನಂದಿಸಿದೆ. ನಾನು ಸುಮಾರು ೧೪೦ ಸಿನೆಮಾಗಳಲ್ಲಿ ನಟಿಸಿದ್ದೇನೆ ಮತ್ತು ಹಲವಾರು ನಿರ್ದೇಶಕರನ್ನು ನೋಡಿದ್ದೇನೆ. ಆವರಲ್ಲಿ ಸಂತೋಷ್ ಆನಂದರಾಮ್ ಅತಿ ಒಳ್ಳೆಯ ನಿರ್ದೇಶಕ" ಎನ್ನುತ್ತಾರೆ ಶರತ್.
'ರಾಜಕುಮಾರ' ಸಿನೆಮಾದಲ್ಲಿ ತಂದೆಯ ಪಾತ್ರ ನಿರ್ವಹಿಸಿರುವುದಕ್ಕೆ ಶರತ್ ಅವರಿಗೆ ಧನ್ಯವಾದ ಹೇಳಿದ ಪುನೀತ್ " ಇದು ಗೌರವ. ಅವರಿಗೆ ಸಾಕಷ್ಟು ಅನುಭವ ಇದ್ದರು, ಸೆಟ್ ನಲ್ಲಿ ನನ್ನ ಗೆಳೆಯನಂತೆ ವರ್ತಿಸಿದರು" ಎನ್ನುತ್ತಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ