ನಟಿ ಮಾನ್ವಿತಾ 
ಸಿನಿಮಾ ಸುದ್ದಿ

ಮಾನ್ವಿತಾಗೆ ಸಿನೆಮಾಗಳ ಸುರಿಮಳೆ

ಕೆಂಡಸಂಪಿಗೆ ಹುಡುಗಿಗೆ ವರ್ಷ ೨೦೧೭ ಫಲಪ್ರದವಾಗಿತ್ತು. ಸೂರಿಯವರ 'ಟಗರು' ಸಿನೆಮಾದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಟಿ ಮಾನ್ವಿತಾ ಈಗ ನವೀನ್ ರೆಡ್ಡಿ ನಿರ್ದೇಶನದ 'ರಿಲ್ಯಾಕ್ಸ್ ಸತ್ಯ'

ಬೆಂಗಳೂರು: ಕೆಂಡಸಂಪಿಗೆ ಹುಡುಗಿಗೆ ವರ್ಷ ೨೦೧೭ ಫಲಪ್ರದವಾಗಿತ್ತು. ಸೂರಿಯವರ 'ಟಗರು' ಸಿನೆಮಾದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಟಿ ಮಾನ್ವಿತಾ ಹರೀಶ್ ಈಗ ನವೀನ್ ರೆಡ್ಡಿ ನಿರ್ದೇಶನದ 'ರಿಲ್ಯಾಕ್ಸ್ ಸತ್ಯ' ಸಿನೆಮಾದಲ್ಲಿ ಕೂಡ ನಟಿಸುತ್ತಿದ್ದು ಮತ್ತೊಂದು ದೊಡ್ಡ ಯೋಜನೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. 
ಆರ್ ಚಂದ್ರು ಅವರ 'ಕನಕ' ಸಿನೆಮಾಗೆ ಮಾನ್ವಿತಾ ಆಯ್ಕೆಯಾಗಿದ್ದಾರೆ. ಇದರಲ್ಲಿ ಅವರು ದುನಿಯಾ ವಿಜಯ್ ಎದುರು ನಟಿಸಲಿದ್ದಾರೆ. ಇದನ್ನು ಧೃಢೀಕರಿಸುವ ನಟಿ "ವಿಜಯ್ ಅವರಿಗೆ ಒರಟ ಮತ್ತು ಮುಗ್ಧತೆಯ ನೋಟವಿದೆ. ಇದು ಎಲ್ಲಾ ಹಿರೊಗಳಿಗೂ ಇರುವುದಿಲ್ಲ. ಅಲ್ಲದೆ ನನಗೆ ಸತ್ಯ ಹೆಗಡೆ ಅವರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾನು ಅವರನ್ನು ಕನ್ನಡ ಚಿತ್ರರಂಗದ ಅತ್ಯದ್ಭುತ ಸಿನೆಮ್ಯಾಟೋಗ್ರಾಫರ್ ಗಳಲ್ಲಿ ಒಬ್ಬರು ಎಂದು ನಂಬುತ್ತೇನೆ. 'ಕೆಂಡಸಂಪಿಗೆ' ಯಸ್ಸಿಗೆ ಅವರು ಕೂಡ ಒಬ್ಬ ಕಾರಣಕರ್ತರು" ಎನ್ನುತ್ತಾರೆ ನಟಿ. 
ಒಬ್ಬ ನಾಯಕನಟಿಯನ್ನು ಅಂತಿಮಗೊಳಿಸಿರುವ ನಿರ್ದೇಶಕ ಚಂದ್ರು ಈಗ 'ಕನಕ' ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಮೊದಲಾರ್ಧ ಚಿತ್ರೀಕರಣ ಸಂಪೂರ್ಣಗೊಂಡ ಮೇಲೆ ಮತ್ತೊಬ್ಬ ಹೀರೋಯಿನ್ ಹೆಸರನ್ನು ನಿರ್ದೇಶಕ ಧೃಢೀಕರಿಸಲಿದ್ದಾರಂತೆ.  
'ಕನಕ'ದಲ್ಲಿ ವಿಜಯ್ ಆಟೋ ಚಾಲಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನವೀನ್ ಸಜ್ಜು ಸಂಗೀತ ನೀಡಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel