ನಟಿ ಜಯಸುಧಾ ಹಾಗೂ ಅವರ ಪತಿ ನಿತಿನ್ ಕಪೂರ್
ಮುಂಬೈ: ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿದ್ದ ಖ್ಯಾತ ನಟಿ, ಕಾಂಗ್ರೆಸ್ ಪಕ್ಷದ ಮಾಜಿ ಶಾಸಕಿ ಜಯಸುಧಾ ಅವರ ಪತಿ ಹಾಗೂ ನಿರ್ಮಾಪಕ ನಿತಿನ್ ಕಪೂರ್ ಅವರು ಮುಂಬೈನಲ್ಲಿರುವ ತಮ್ಮ ಕಚೇರಿಯಲ್ಲಿ ಮಂಗಳವಾರ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ಸಾವಿಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಆದರೆ, ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ನಿತಿನ್ ಕಪೂರ್ ಅವರು ಬಾಲಿವುಡ್ ನಟ ಜಿತೇಂದ್ರ ಅವರ ಸೋದರ ಸಂಬಂಧಿಯಾಗಿದ್ದಾರೆ. 30 ವರ್ಷಗಳ ಹಿಂದೆ ನಟಿ ಜಯಸುಧಾ ಅವರನ್ನು ವಿವಾಹವಾಗಿದ್ದರು. ದಂಪತಿಗಳಿಗೆ ನಿಹಾರ್ ಮತ್ತು ಶ್ರೆಯನ್ ಎಂಬ ಇಬ್ಬರು ಮಕ್ಕಳಿದ್ದಾರೆ.
ನಿತಿನ್ ಅವರು ಮಧ್ಯಾಹ್ನ 2 ಗಂಟೆಯ ವೇಳೆಗೆ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ. ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಜಯಸುಧಾ ಮತ್ತು ನಿತಿನ್ ಕಪೂರ್ ಮಧ್ಯೆ ಮನಸ್ಥಾಪವಿತ್ತು. ಇದೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
ನಿತಿನ್ ಕುಟುಂಬದಿಂದ ಬೇರಾಗಿ ಮುಂಬೈನಲ್ಲಿ ಸೋದರಿ ಜೊತೆ ನೆಲೆಸಿದ್ದರು. ಜಯಸುಧಾ ಕನ್ನಡದಲ್ಲಿ ನೀ ತಂದ ಕಾಣಿಕೆ, ತಾಯಿಯ ಮಡಿಲು, ವಜ್ರಕಾಯ ಚಿತ್ರಗಳಲ್ಲಿ ನಟಿಸಿದ್ದರು.