ಎಸ್ ಪಿ ಬಾಲ ಸುಬ್ರಮಣ್ಯಂ ಮತ್ತು ಇಳಯರಾಜ 
ಸಿನಿಮಾ ಸುದ್ದಿ

ಗಾಯಕ ಎಸ್ ಪಿ ಬಿಗೆ ಲೀಗಲ್ ನೋಟಿಸ್ ನೀಡಿದ ಸಂಗೀತ ನಿರ್ದೇಶಕ ಇಳಯರಾಜ

: ಹಿನ್ನೆಲೆ ಗಾಯಕ ಎಸ್ .ಪಿ ಬಾಲಸುಬ್ರಮಣ್ಯಂ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅವರ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್...

ಚೆನ್ನೈ: ಹಿನ್ನೆಲೆ ಗಾಯಕ ಎಸ್ .ಪಿ ಬಾಲಸುಬ್ರಮಣ್ಯಂ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅವರ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ.

ವಿವಿಧೆಡೆ ನಡೆಯುವ ಸಂಗೀತ ಕಾರ್ಯಕ್ರಮಗಳಲ್ಲಿ ತಾವು ಸಂಗೀತ ಸಂಯೋಜಿಸಿರುವ ಹಾಡುಗಳನ್ನು ಹಾಡದಂತೆ ಸಂಗೀತ ನಿರ್ದೇಶಕ ಇಳಯರಾಜ ಎಸ್ .ಪಿ ಬಾಲಸುಬ್ರಮಣ್ಯಂ, ಶ್ರೀಮತಿ ಚೈತ್ರ ಮತ್ತು ಚರಣ್ ಅವರಿಗೆ ಲೀಗಲ್ ನೋಟಿಸ್ ನೀಡಿರುವುದಾಗಿ ಪೋಸ್ಟ್ ಹಾಕಿದ್ದಾರೆ.

ತಾವು ಸಂಗೀತ ಸಂಯೋಜಿಸಿರುವ ಗೀತೆಗಳನ್ನು ತಮ್ಮ ಅನುಮತಿಯಿಲ್ಲದೇ ಯಾವುದೇ ವೇದಿಕೆಗಳಲ್ಲಿ ಹಾಡುವಂತಿಲ್ಲ, ಒಂದು ವೇಳೆ ಹಾಡಿದರೇ, ಅದಕ್ಕೆ ದಂಡ ತೆರಬೇಕಾಗುತ್ತದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.

ನನ್ನ ಮಗ ಚರಣ್ ಎಸ್ ಪಿಬಿ50 ಎಂಬ ಹೆಸರಿನಲ್ಲಿ ವರ್ಲ್ಡ್ ಟೂರ್ ಆಯೋಜಿಸಿದ್ದ, ರಷ್ಯಾ, ಲಂಕಾ, ಮಲೇಶಿಯಾ , ಸಿಂಗಾಪುರ್ ಮತ್ತು ದುಬೈ ಗಳಲ್ಲಿ ಈಗಾಗಲೇ ಸಂಗೀತ ಪ್ರದರ್ಶನ ನೀಡಿದ್ದೇವೆ. ಆಗಸ್ಟ್ ವಲ್ಲಿ ಟೊರಾಂಟೋದಲ್ಲಿ ಸಂಗೀತ ಕಾರ್ಯಕ್ರಮ ನೀಡಬೇಕಿತ್ತು. ಆದರೆ ಕಾರ್ಯಕ್ರಮವನ್ನು ರದ್ದುಗೊಳಿಸುವುದಿಲ್ಲ, ನಮ್ಮ ಸಂಗೀತ ಪಯಣ ಮುಂದುವರಿಯುತ್ತದೆ. ಬೇರೆ ಸಂಗೀತ ನಿರ್ದೇಶಕರ ಗೀತೆಗಳನ್ನು ಹಾಡುವುದಾಗಿ ಎಸ್ ಪಿಬಿ ಹೇಳಿದ್ದಾರೆ.

ತಮ್ಮ ಜೀವಮಾನದ ಅವಧಿಯಲ್ಲಿ ಇದುವರೆಗೂ ಎಸ್ ಪಿಬಿ  ಸುಮಾರು 40 ಸಾವಿರ ಗೀತೆಗಳನ್ನು ಹಾಡಿದ್ದಾರೆ. ಇವರಿಗೆ 2011 ರಲ್ಲಿ ಪ್ರತಿಷ್ಠಿತ ಪದ್ಮಭೂಷಣ ಮತ್ತು ರಾಷ್ಚ್ರ ಪ್ರಶಸ್ತಿ ಸಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT