'ಚೌಕ' ಸಿನೆಮಾದ ಪೋಸ್ಟರ್ 
ಸಿನಿಮಾ ಸುದ್ದಿ

ನಾಲ್ಕು ಭಾಷೆಗಳಲ್ಲಿ 'ಚೌಕ' ರಿಮೇಕ್

ತರುಣ್ ಸುಧೀರ್ ಚೊಚ್ಚಲ ನಿರ್ದೇಶನದ 'ಚೌಕ' ಈ ವಾರ ಯಶಸ್ವಿ ೫೦ ದಿನಗಳ ಪ್ರದರ್ಶನ ಪೂರೈಸಲಿದೆ. ಈ ಮಧ್ಯೆ ಈ ಸಿನೆಮಾ ನಾಲ್ಕು ಭಾಷೆಗಳಲ್ಲಿ ರಿಮೇಕ್ ಆಗುತ್ತಿದ್ದು ಚಿತ್ರತಂಡದ ಹರ್ಷವನ್ನು

ಬೆಂಗಳೂರು: ತರುಣ್ ಸುಧೀರ್ ಚೊಚ್ಚಲ ನಿರ್ದೇಶನದ 'ಚೌಕ' ಈ ವಾರ ಯಶಸ್ವಿ ೫೦ ದಿನಗಳ ಪ್ರದರ್ಶನ ಪೂರೈಸಲಿದೆ. ಈ ಮಧ್ಯೆ ಈ ಸಿನೆಮಾ ನಾಲ್ಕು ಭಾಷೆಗಳಲ್ಲಿ ರಿಮೇಕ್ ಆಗುತ್ತಿದ್ದು ಚಿತ್ರತಂಡದ ಹರ್ಷವನ್ನು ಇಮ್ಮಡಿಗೊಳಿಸಿದೆ. 
ಈ ಸಿನೆಮಾದ ತಮಿಳು ಮತ್ತು ತೆಲುಗು ರಿಮೇಕ್ ಹಕ್ಕುಗಳನ್ನು ಮಾರಾಟ ಮಾಡಲಾಗಿದ್ದು, ಬೆಂಗಾಲಿ ಮತ್ತು ಮರಾಠಿ ನಿರ್ಮಾಪಕರು ಕೂಡ ಆಸಕ್ತಿ ತೋರಿದ್ದಾರಂತೆ. 
ಈ ವಿಷಯವನ್ನು ಧೃಢೀಕರಿಸುವ ಚಿತ್ರನಿರ್ದೇಶಕ ತರುಣ್ "ಎಲ್ಲ ಮಾತುಕತೆಗಳು ಅಂತಿಮಗೊಂಡಾಗ ಅಧಿಕೃತ ಘೋಷಣೆ ಮಾಡಲಾಗುವುದು" ಎನ್ನುತ್ತಾರೆ. 
ದ್ವಾರಕೀಶ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ೫೦ ನೆಯ ಚಿತ್ರ 'ಚೌಕ'ದಲ್ಲಿ ಐವರು ಹೀರೋಗಳು ಮತ್ತು ಹೀರೋಯಿನ್ ಗಳು ನಟಿಸಿದರೆ ನಟ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಈ ಸಿನೆಮಾ ೨೫ ತಂತ್ರಜ್ಞರನ್ನು ಒಟ್ಟಿಗೆ ತಂದಿರುವುದು ವಿಶೇಷ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!

ಜುಲೈ ಕಂಟಕ: ಕಳೆದ ವರ್ಷ ಹಠಾತ್ ಬಿರುಗಾಳಿಯಿಂದ ದೋಣಿ ಮಗುಚಿ 39 ಮಂದಿ ಸಾವು; ಈ ವರ್ಷ 15 ಮಂದಿ ದುರ್ಮರಣ!