ಸಿನಿಮಾ ಸುದ್ದಿ

ಎಸ್.ಪಿ.ಬಾಲಸುಬ್ರಹ್ಮಣ್ಯಂ ಇನ್ನು ಇಳಯರಾಜಾ ಹಾಡುಗಳನ್ನು ಹಾಡುವಂತಿಲ್ಲ!

Srinivasamurthy VN

ನವದೆಹಲಿ: ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಇನ್ನು ಮುಂದೆ ಇಳಿಯರಾಜ ಅವರ ಹಾಡುಗಳನ್ನು ಹಾಡುವಂತಿಲ್ಲ. ಒಂದು ವೇಳೆ ಹಾಡಿದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖ್ಯಾತ  ಗಾಯಕರಿಗೆ ನೋಟಿಸ್ ನೀಡಲಾಗಿದೆ.

ಈ ವಿಚಾರವನ್ನು ಸ್ವತಃ ಗಾಯಕ ಎಸ್ ಪಿ ಬಾಲ ಸುಬ್ರಹ್ಮಣ್ಯಂ ಅವರೇ ಹೇಳಿಕೊಂಡಿದ್ದು, ಸಂಗೀತ ನಿರ್ದೇಶಕ ಇಳಯರಾಜ ಅವರು ತಮಗೆ ತಮ್ಮ ಪುತ್ರ ಹಾಗೂ ಚಿತ್ರಾ ಅವರಿಗೆ ಕಾನೂನು ನೋಟಿಸ್ ನೀಡಿದ್ದಾರೆ. ಇನ್ನು ಮುಂದೆ  ಯಾವುದೇ ಖಾಸಗಿ ಕಾರ್ಯಕ್ರಮದಲ್ಲಿ ಇಳಯರಾಜ ಅವರ ಹಾಡುಗಳನ್ನು ಅನುಮತಿ ಇಲ್ಲದೇ ಹಾಡುವಂತಿಲ್ಲ. ಒಂದು ವೇಳೆ ಹಾಡಿದರೆ ಹಕ್ಕು ಸ್ವಾಮ್ಯ ಕಾಯ್ದೆಯ ಅಡಿಯಲ್ಲಿ ಭಾರಿ ಪ್ರಮಾಣದ ದಂಡ ಹಾಗೂ ಕಾನೂನು ರೀತ್ಯ  ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಳಯರಾಜ ಅವರು ತಮಗೆ, ಇತರೆ ಹಾಡುಗಾರರಿಗೆ ಮತ್ತು  ಕಾರ್ಯಕ್ರಮ ಸಂಘಟಕರಿಗೆ ನೋಟಿಸ್ ನೀಡಿದ್ದಾರೆ ಎಂದು ಎಸ್ ಪಿಬಿ ಬರೆದುಕೊಂಡಿದ್ದಾರೆ.

ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಎಸ್ ಪಿಬಿ ಅಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. "ಕಳೆದ ಆಗಸ್ಟ್ ನಲ್ಲಿ ಟೊರಾಂಟೋ, ಮಲೇಷ್ಯಾ, ಶ್ರೀಲಂಕಾ, ರಷ್ಯಾ, ಸಿಂಗಾಪುರ, ದುಬೈ ಹಾಗೂ ಭಾರತದ ವಿವಿಧೆಡೆ  ಕಾರ್ಯಕ್ರಮ ನೀಡಿದ್ದೆವು. ಆಗ ಇಳಯರಾಜ ಅವರ ಕಚೇರಿಯಿಂದ ಯಾವುದೇ ಸಂದೇಶ ಬಂದಿರಲಿಲ್ಲ. ಇದೀಗ ಅಮೆರಿಕ ಪ್ರವಾಸ ಆರಂಭಿಸಿದ ಬಳಿಕ ನೋಟಿಸ್ ಬಂದಿದೆ. ಈ ವಿಚಾರವಾಗಿ  ವಿನಾಕಾರಣ ಕಠೋರಾ  ಅಭಿಪ್ರಾಯಗಳು ಅಥವಾ ಚರ್ಚೆಗಳು ನಡೆಯುವುದು ಬೇಡು. ಒಂದು ವೇಳೆ ದೇವರು ಇದನ್ನು ಬಯಸಿದ್ದ ಎಂದಾದಲ್ಲಿ ಅದನ್ನು ನಾನು ಪೂಜ್ಯ ಭಾವನೆಯಿಂದ ಪಾಲಿಸುತ್ತೇನೆ" ಎಂದು ಎಸ್ ಪಿಬಿ ಬರೆದುಕೊಂಡಿದ್ದಾರೆ.

SCROLL FOR NEXT