'ಸತ್ಯ ಹರಿಶ್ಚಂದ್ರ' ಸಿನೆಮಾದಲ್ಲಿ ಭಾವನಾ ಮತ್ತು ಸಂಚಿತ ಪಡುಕೋಣೆ
ಬೆಂಗಳೂರು: ನಟ ಶರಣ್, ನಿರ್ದೇಶಕ ದಯಾಳ್ ಪದ್ಮನಾಭ್ ಸೇರಿದಂತೆ ೨೩ ಜನರ 'ಸತ್ಯ ಹರಿಶ್ಚಂದ್ರ' ಸಿನೆಮಾದ ಇಡೀ ತಂಡ, ಹೊಸ ತಾಣಗಳನ್ನು ಹುಡುಕಿ ೧೬ ದಿನಗಳ ಚಿತ್ರೀಕರಣ ನಡೆಸಲು ಪೋರ್ಚುಗಲ್ ಗೆ ಪ್ರಯಾಣ ಬೆಳೆಸಿದೆ.
"ಪೋರ್ಚುಗಲ್ ನಲ್ಲಿ ಚಿತ್ರೀಕರಣಗೊಳ್ಳಲಿರುವ ದೃಶ್ಯಗಳು ಸಿನೆಮಾದ ನಡುಭಾಗದಲ್ಲಿ ಮೂಡಲಿವೆ" ಎಂದು ತಿಳಿಸುವ ನಿರ್ದೇಶಕ ಈ ಭಾಗವನ್ನು ವಿದೇಶದಲ್ಲಿಯೇ ಏಕೆ ಚಿತ್ರೀಕರಣ ಮಾಡಬೇಕಾಯಿತು ಎಂಬುದಕ್ಕೆ ಕಾರಣ ತಿಳಿಸುತ್ತಾರೆ.
"ಶೀರ್ಷಿಕೆಯಿಂದ ಇದು ಐತಿಹಾಸಿಕ ಸಿನೆಮಾ ಎಂದೆನಿಸಿದರೂ ನಿಜವಾಗಿ ಇದು ರೋಮ್ಯಾಂಟಿಕ್ ಹಾಸ್ಯ ಚಿತ್ರ. ಕಥೆಗೆ ವಿದೇಶಿ ತಾಣದಲ್ಲಿ ಚಿತ್ರೀಕರಣ ನಡೆಸುವುದು ಅಗತ್ಯವಾಗಿತ್ತು. ಸಾಮಾನ್ಯವಾಗಿ ಜನ ಅಲ್ಲಿ ಹಾಡುಗಳನ್ನಷ್ಟೇ ಚಿತ್ರೀಕರಿಸುತ್ತಾರೆ ಆದರೆ ನಾವಲ್ಲಿ ಕೆಲವು ಆಕ್ಷನ್ ದೃಶ್ಯಗಳು, ೨ ಹಾಡುಗಳು ಸೇರಿದಂತೆ ಒಟ್ಟಾರೆ ೧೨ ದೃಶ್ಯಗಳನ್ನು ಅಲ್ಲಿ ಚಿತ್ರೀಕರಿಸುತ್ತಿದ್ದೇವೆ" ಎನ್ನುತ್ತಾರೆ.
ಎರಡು ಹಾಡುಗಳ ನೃತ್ಯನಿರ್ದೇಶನವನ್ನು ಇಮ್ರಾನ್ ಸರ್ದಾರಿಯಾ ಮಾಡಲಿದ್ದಾರೆ. ಪೋರ್ಚುಗಲ್ ನಲ್ಲಿ ಆಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಲು ದಯಾಳ್ ಅವರು ಯೂರೋಪಿನ ಸ್ಟಂಟ್ ಮಾಸ್ಟರ್ ಅವರನ್ನು ಒಳಗೊಂಡಿದ್ದಾರಂತೆ
ಕೆ ಮಂಜು ನಿರ್ಮಿಸುತ್ತಿರುವ 'ಸತ್ಯ ಹರಿಶ್ಚಂದ್ರ' ಸಿನೆಮಾದಲ್ಲಿ ಇಬ್ಬರು ನಾಯಕಿಯರು ಭಾವನಾ ಮತ್ತು ಸಂಚಿತಾ ಪಡುಕೋಣೆ ಶರಣ್ ಎದುರು ನಟಿಸುತ್ತಿದ್ದಾರೆ.
ಅರ್ಜುನ್ ಜನ್ಯ ಸಿನೆಮಾಗೆ ಸಂಗೀತ ನೀಡುತ್ತಿದ್ದು, ಫೈಸಲ್ ಅಲಿ ಅವರ ಛಾಯಾಗ್ರಹಣ ಇದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos