ಬೆಂಗಳೂರು: ಹಿಂದೂ ಧಾರ್ಮಿಕ ಗ್ರಂಥವಾದ ಮಹಾಭಾರತದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ದಕ್ಷಿಣ ಭಾರತದ ನಟ ಕಮಲ್ ಹಾಸನ್ ವಿರುದ್ಧ ಪ್ರಣವಾನಂದ ಸ್ವಾಮೀಜಿ ಬೆಂಗಳೂರಿನ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವೈಯಕ್ತಿಕ ಲಾಭಕ್ಕಾಗಿ ಮಹಾಭಾರತದಲ್ಲಿ ಹೆಣ್ಣನ್ನು ಜೂಜಿಗಿಡಲಾಗಿತ್ತು. ಇಂಥಹ ಗ್ರಂಥಗಳನ್ನು ನಾವು ನಂಬಬೇಕಾ ಎಂದು ಕಮಲ್ ಹಾಸನ್ ಖಾಸಗಿ ಟಿವಿ ಚಾನಲ್ ಗೆ ನೀಡಿದ ಸಂದರ್ಶನ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕಮಲ್ ಹಾಸನ್ ಅವಹೇಳನಕಾರಿ ಹೇಳಿಕೆಯನ್ನು ಖಂಡಿರುವ ಪ್ರಣವಾನಂದ ಸ್ವಾಮೀಜಿ ಅವರು ಇಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.