ಹರ್ಷ-ಪುನೀತ್ ರಾಜಕುಮಾರ್-ಹರಿಪ್ರಿಯಾ
ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅಭಿನಯದ 'ಅಂಜನಿಪುತ್ರ' ಸಿನೆಮಾದಲ್ಲಿ ಹರಿಪ್ರಿಯಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತು ಅವರ ಜೊತೆಗೆ ನೃತ್ಯವೊಂದರಲ್ಲಿ ಕಾಣಿಸಿಕೊಂಡಿರುವುದರ ಬಗ್ಗೆ ವರದಿಗಳಾಗಿದ್ದವು. ಈಗ ಅದನ್ನು ಧೃಢೀಕರಿಸಿರುವ ನಟಿ, ಸದ್ಯಕ್ಕೆ ಪರಿಚಯ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವುದಾಗಿ ಹೇಳಿದ್ದಾರೆ.
"ನೃತ್ಯ ನನ್ನ ನೆಚ್ಚಿನ ಚಟುವಟಿಕೆ. ಈಗ ಪುನೀತ್ ಜೊತೆಗೆ ಹೆಜ್ಜೆ ಹಾಕುವುದಕ್ಕೆ ಸಾಕಷ್ಟು ಉತ್ಸುಕಳಾಗಿದ್ದೇನೆ" ಎನ್ನುತ್ತಾರೆ ಹರಿಪ್ರಿಯಾ.
"ಈ ಹಾಡಿನಲ್ಲಿ ನಮಗೆ ಎರಡು ವಿಭಿನ್ನ ನೋಟಗಳಿವೆ. ಒಂದು ಗ್ಯಾರೇಜ್ ಥೀಮ್. ಮತ್ತೊಂದು ಥೀಮ್ ಬಗ್ಗೆ ಹರ್ಷ ಮಾಸ್ಟರ್ ಚಿಂತಿಸುತ್ತಿದ್ದಾರೆ. ಇದನ್ನು ಅವರು ಗುಟ್ಟಾಗಿ ಇಟ್ಟಿದ್ದಾರೆ. ವಸ್ತ್ರ ವಿನ್ಯಾಸವನ್ನು ಯೋಗಿ ಸಿದ್ಧಪಡಿಸಿದ್ದಾರೆ. ನಿರ್ದೇಶದ ಹರ್ಷ ಅವರೇ ಈ ಪರಿಚಯ ಹಾಡಿಗೆ ನೃತ್ಯ ನಿರ್ದೇಶನವನ್ನು ಮಾಡಿದ್ದಾರೆ" ಎನ್ನುತ್ತಾರೆ ಹರಿಪ್ರಿಯಾ.
ಚಿತ್ರೀಕರಣದಲ್ಲಿ ಎರಡು ದಿನ ಭಾಗಿಯಾಗಿರುವ ಹರಿಪ್ರಿಯಾ, ಪುನೀತ್ ಅವರ ವೇಗವನ್ನು ಹೊಂದಿಕೊಳ್ಳುವುದು ಸವಾಲು ಎನ್ನುತ್ತಾರೆ. "ನನ್ನ ಮೂಲ ಆಂಗಿಕ ಭಾಷೆ ಶಾಸ್ತ್ರೀಯ ನೃತ್ಯ ಭಾರತನಾಟ್ಯಮ್ ದು. ಪುನೀತ್ ಅವರ ನೃತ್ಯ ಆಧುನಿಕ ಮತ್ತು ಸ್ಟೈಲಿಶ್. ಆದರೆ ಹರ್ಷ ಅವರ ಸೃಜನಶೀಲತೆ ಎಲ್ಲವನ್ನು ಸುಗಮಗೊಳಿಸುತ್ತಿದೆ" ಎನ್ನುತ್ತಾರೆ ಹರಿಪ್ರಿಯಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics