ಮನೋರಂಜನ್ 
ಸಿನಿಮಾ ಸುದ್ದಿ

'ಸಾಹೇಬ'ನಿಗೆ ಕಾದದ್ದು ಅರ್ಥಪೂರ್ಣ: ಮನೋರಂಜನ್

ಪ್ರಾರಂಭವಾಗಿ ಒಂದೂವರೆ ವರ್ಷದ ನಂತರ ಮನೋರಂಜನ್ ನಟನೆಯ 'ಸಾಹೇಬ' ಸಿನೆಮಾದ ಚಿತ್ರೀಕರಣ ಮುಗಿದಿದೆ. ಈ ಹಿಂದೆ ಅವರು ನಟಿಸಬೇಕಿದ್ದ 'ರಣಧೀರ' ಸಿನೆಮಾ ನಿಂತುಹೋಗಿ 'ಸಾಹೇಬ'

ಬೆಂಗಳೂರು: ಪ್ರಾರಂಭವಾಗಿ ಒಂದೂವರೆ ವರ್ಷದ ನಂತರ ಮನೋರಂಜನ್ ನಟನೆಯ 'ಸಾಹೇಬ' ಸಿನೆಮಾದ ಚಿತ್ರೀಕರಣ  ಮುಗಿದಿದೆ. ಈ ಹಿಂದೆ ಅವರು ನಟಿಸಬೇಕಿದ್ದ 'ರಣಧೀರ' ಸಿನೆಮಾ ನಿಂತುಹೋಗಿ 'ಸಾಹೇಬ' ವಿಳಂಬವಾಗಿರುವುದಕ್ಕೆ ನಟನನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲ್ ಮಾಡಲಾಗುತ್ತಿತ್ತು. ಈಗ ರೀ-ರೆಕಾರ್ಡಿಂಗ್ ಹಂತದಲ್ಲಿರುವ ಈ ಚಿತ್ರ ಶೀಘ್ರದಲ್ಲೇ ಚಿತ್ರಮಂದಿರಗಳಿಗೆ ಬರಲಿದೆಯಂತೆ. 
ಭರತ್ ನಿರ್ದೇಶನದ ಈ ಸಿನೆಮಾದಲ್ಲಿ ಶಾನ್ವಿ ಶ್ರೀವಾಸ್ತವ ನಾಯಕನಟಿಯಾಗಿದ್ದು, ಜಯಣ್ಣ ಕಂಬೈನ್ಸ್ ಇದನ್ನು ನಿರ್ಮಿಸಿದೆ. ನಿಗದಿಗಿಂತಲೂ ೯೦ ದಿನ ಹೆಚ್ಚುವರಿ ಚಿತ್ರೀಕರಣ ಸಮಯ ತೆಗೆದುಕೊಂಡದ್ದರ ಬಗ್ಗೆ ತಿಳಿಸುವ ನಟ "ಹಲವಾರು ಬಾರಿ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಳ್ಳಬೇಕಾಯಿತು. ಏಕೆಂದರೆ ಚಿತ್ರೀಕರಣ ನಡೆಸಬೇಕಿದ್ದ ಶಾಲೆ ಮತ್ತು ಕಾಲೇಜುಗಳು ಮುಚ್ಚಿದ್ದವು. ಅಲ್ಲದೆ ಒಂದು ಹಾಡಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದೆವು, ಅದಕ್ಕಾಗಿ ಮತ್ತೆ ಚಿತ್ರೀಕಣರನ ಮಾಡಿದೆವು. ಇವೆಲ್ಲಾ ವಿಳಂಬಗಳ ಹೊರತಾಗಿಯೂ ಸಾಹೇಬ ಸಿನೆಮಾದ ಬಗ್ಗೆ ನನಗೆ ಭರವಸೆಯಿದೆ" ಎನ್ನುತ್ತಾರೆ ಮನೋರಂಜನ್. 
ಇನ್ನೊಂದು ತಿಂಗಳಲ್ಲಿ ಬಿಡುಗಡೆ ಸಿನೆಮಾ ಸಿದ್ಧವಾಗಲಿದೆ ಎನ್ನುವ ನಟ "ನನಗೆ ಸಾಮಾಜಿಕ ಜಾಲತಾಣಗಳಲ್ಲಿ ಒರಟು ಸಂದೇಶಗಳು ಬರುತ್ತಿವೆ ಮತ್ತು ಬಿಡುಗಡೆಯ ಬಗ್ಗೆ ನನ್ನನ್ನು ಹಾಸ್ಯ ಮಾಡುತ್ತಿದ್ದಾರೆ. ಅದಕ್ಕೆ ಅವರನ್ನು ನಾನು ದೂಷಿಸುವುದಿಲ್ಲ ಏಕೆಂದರೆ ನಾನು 'ರಣಧೀರ'ನಿಂದ ಪ್ರಾರಂಭಿಸಿದೆ ಆದರೆ ಅದು ನೆನೆಗುದಿಗೆ ಬಿದ್ದಿತು. ಸಾಹೇಬ ಸುಮಾರು ಒಂದು ವರೆ ವರ್ಷ ಹಿಡಿಯಿತು. ಜನರಿಗೆ ಬೇಸರವಾಗಿದೆ ಮತ್ತು ನನ್ನ ಚೊಚ್ಚಲ ಚಿತ್ರದ ಬಗ್ಗೆ ಕೆಲವರಿಗೆ ಮರೆತೇ ಹೋಗಿದೆ. ಆದುದರಿಂದ ಈ ಬಾರಿ ಜೂನ್ ಮೊದಲ ಅಥವಾ ಎರಡನೇ ಆರದಲ್ಲಿ ಬಿಡುಗಡೆ ಮಾಡಲು ಎಲ್ಲರು ಶ್ರಮವಹಿಸಿದ್ದೇವೆ" ಎನ್ನುತ್ತಾರೆ. 
ಈಮಧ್ಯೆ ರವಿಚಂದ್ರನ್ ಪುತ್ರನ ಎರಡನೇ ಚಿತ್ರ ವಿಐಪಿ (ವೃತ್ತಿ ಇಲ್ಲದ ಪದವೀಧರ) ಕೂಡ ಬಹುತೇಕ ಚಿತ್ರೀಕರಣ ಮುಗಿಸಿದೆಯಂತೆ. "ಇನ್ನೊಂದು ಹಾಡಷ್ಟೇ ಬಾಕಿಯಿದ್ದು, ಶೀಘ್ರದಲ್ಲೇ ಸಂಪೂರ್ಣಗೊಳ್ಳಲಿದೆ. ಈ ಸಿನೆಮಾದ ನಿರ್ಮಾಪಕರು ಇದನ್ನು ಮೊದಲು ಬಿಡುಗಡೆ ಮಾಡಲು ಮುಂದಾಗಿದ್ದರು ಆದರೆ 'ಸಾಹೇಬ' ಮೊದಲು ಬಿಡುಗಡೆಯಾಗಬೇಕು ಎಂದು ನಾನು ಪಟ್ಟು ಹಿಡಿದೆ" ಎನ್ನುತ್ತಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT