ನಟಿ ಸಂಗೀತ ಭಟ್ 
ಸಿನಿಮಾ ಸುದ್ದಿ

ಕೆಎಂ ಚೈತನ್ಯ ನಿರ್ದೇಶನದ ಚಿತ್ರಕ್ಕೆ ಸಂಗೀತ ಭಟ್ ಸೇರ್ಪಡೆ

'ಎರಡನೇ ಸಲ' ಸಿನೆಮಾದ ನಟನೆಗಾಗಿ ಚಿತ್ರರಂಗದ ಗಮನ ಸೆಳೆದಿದ್ದ ನಟಿ ಸಂಗೀತ ಭಟ್ ಈಗ 'ದಯವಿಟ್ಟು ಗಮನಿಸಿ' ಸಿನೆಮಾದ ವಿಡಿಯೋ ಹಾಡಿನಲ್ಲಿ ಕೂಡ ಕಾಣಿಸಿಕೊಂಡು ತಮ್ಮ ಪ್ರತಿಭೆಯನ್ನು

ಬೆಂಗಳೂರು: 'ಎರಡನೇ ಸಲ' ಸಿನೆಮಾದ ನಟನೆಗಾಗಿ ಚಿತ್ರರಂಗದ ಗಮನ ಸೆಳೆದಿದ್ದ ನಟಿ ಸಂಗೀತ ಭಟ್ ಈಗ 'ದಯವಿಟ್ಟು ಗಮನಿಸಿ' ಸಿನೆಮಾದ ವಿಡಿಯೋ ಹಾಡಿನಲ್ಲಿ ಕೂಡ ಕಾಣಿಸಿಕೊಂಡು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ತಮ್ಮ ಫೋನು ಇತ್ತೀಚಿಗೆ ಸದಾ ರಿಂಗಣಿಸುತ್ತಲೇ ಇದೆ ಎಂದು ಒಪ್ಪಿಕೊಳ್ಳುವ ನಟಿ, ಹಲವು ನಿರ್ದೇಶಕರು ಉತ್ತಮ ಪಾತ್ರಗಳ ಅವಕಾಶ ನೀಡಲು ಮುಂದೆಬಂದಿರುವುದಾಗಿ ಹೇಳುತ್ತಾರೆ. 
ಸದ್ಯಕ್ಕೆ ಅವರು ರೋಹಿತ್ ಪದಕಿ ನಿರ್ದೇಶನದ 'ದಯವಿಟ್ಟು ಗಮನಿಸಿ' ಚಿತ್ರದಲ್ಲಿ ನಿರತರಾಗಿದ್ದಾರೆ. ನಿರ್ಮಾಪಕ ಆಶು ಬೆದ್ರ ನಾಯಕನಟನಾಗಿರುವ, 'ಕಹಿ' ಖ್ಯಾತಿಯ ಅರವಿಂದ್ ಶಾಸ್ತ್ರಿ ನಿರ್ದೇಶನದ ಇನ್ನು ಹೆಸರಿಡದ ಮತ್ತೊಂದು ಚಿತ್ರದಲ್ಲಿ ಕೂಡ ಪಾತ್ರ ಪಡೆದಿದ್ದಾರೆ. ಈಗ ಕೆ ಎಂ ಚೈತನ್ಯ ನಿರ್ದೇಶನದ ಚಿತ್ರಕ್ಕೂ ಕರೆ ಬಂದಿದ್ದು, ಮೊದಲ ಬಾರಿಗೆ ಚಿರಂಜೀವಿ ಸರ್ಜಾ ಮತ್ತು ಶ್ರುತಿ ಹರಿಹರನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಎಲ್ಲರಿಗು ಸಮತೂಕದ ಪಾತ್ರವನ್ನು ಸೃಷ್ಟಿಸುವ ನಿರ್ದೇಶಕ ಕೆ ಎಂ ಚೈತನ್ಯ ಯಾರನ್ನು ಹೀರೊ ಅಥವಾ ಹೀರೋಯಿನ್ ಎಂದು ವರ್ಗೀಕರಿಸಲು ಹೋಗುವುದಿಲ್ಲ. 
ಬೆಳ್ಳಿತೆರೆಯಲ್ಲಿ ಕೆ ಎಂ ಚೈತನ್ಯ ಜೊತೆಗೆ ಸಂಗೀತ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದರೂ, ಅವರ ಸಹಯೋಗ ಮೈಸೂರು ರೇಷ್ಮೆ ಜಾಹಿರಾತಿನದ್ದಂತೆ. "ಅವರು 'ಆ ದಿನಗಳು' ನಿರ್ದೇಶಿದಾಗಿಲಿಂದಲೂ ಚೈತನ್ಯ ಜೊತೆಗೆ ಕೆಲಸ ಮಾಡಲು ನಾನು ಹಾತೊರೆಯುತ್ತಿದ್ದೆ. ಮಾಮೂಲಿತನವನ್ನು ತೊರೆದು ಚಿಂತಿಸುವ ನಿರ್ದೇಶಕ ಚೈತನ್ಯ" ಎನ್ನುತ್ತಾರೆ ಸಂಗೀತ. 
ಉಳಿದ ತಾರಾಗಣವನ್ನು ಅಂತಿಮಗೊಳಿಸುತ್ತಿರುವ ನಿರ್ದೇಶಕ ಚೈತನ್ಯ ಜೂನ್ ಅಂತ್ಯಕ್ಕೆ ನೂತನ ಚಿತ್ರದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?