ಯುಗಪುರುಷ ಚಿತ್ರದ ನಟ ಅರ್ಜುನ್ ದೇವ್ ಮೇಲೆ ನಾಲ್ವರು ದುಷ್ಕರ್ಮಿಗಳು ರಾಮನಗರದಲ್ಲಿ ದಾಳಿ ನಡೆಸಿದ್ದಾರೆ.
ಅರ್ಜುನ್ ದೇವ್ ತಮ್ಮ ಐ-20 ಕಾರಿನಲ್ಲಿ ಡ್ರೈವರ್ ಮತ್ತು ಸ್ನೇಹಿತನ ಜತೆ ತೆರಳುತ್ತಿದ್ದಾಗ ಎರಡು ಬೈಕ್ ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ರಾಡ್ ನಿಂದ ಕಾರಿನ ಗಾಜನ್ನು ಹೊಡೆದು ನಂತರ ಗನ್ ನಿಂದ ಗುಂಡು ಹಾರಿಸಲು ಪ್ರಯತ್ನ ನಡೆಸಿದ್ದರು ಎಂದು ತಿಳಿದುಬಂದಿದೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್ ಗೆ ಹಾಜರಾಗುತ್ತಿದ್ದ ಸಂದರ್ಭದಲ್ಲಿ ಕೋರ್ಟ್ ಬಳಿಯೇ ಈ ಘಟನೆ ಸಂಭವಿಸಿದ್ದು, ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.