ಸಿನಿಮಾ ಸುದ್ದಿ

ಕ್ರೈಂ ಹಾಸ್ಯ ಚಲನಚಿತ್ರ 'ರಿಲ್ಯಾಕ್ಸ್ ಸತ್ಯ' ದಲ್ಲಿ ಮಾನ್ವಿತಾ ಹರೀಶ್ ಭಿನ್ನ ಅವತಾರ

Guruprasad Narayana
ಬೆಂಗಳೂರು: 'ರಿಲ್ಯಾಕ್ಸ್ ಸತ್ಯ' ಸಿನೆಮಾದಲ್ಲಿ ನಟಿಸುತ್ತಿರುವ ನಟಿ ಮಾನ್ವಿತಾ ಹರೀಶ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 
"ಈ ಸಿನೆಮಾದಲ್ಲಿ ನನ್ನನ್ನು ಮಾಯಾ ದೇವತೆಯಾಗಿ ತೋರಿಸುತ್ತಿದ್ದಾರೆ. ಪಾತ್ರದ ಹೆಸರು ಕೂಡ ಮಾಯಾ. ಆದುದರಿಂದ ನನ್ನ ಕೂದಲನ್ನು ಸುರಳಿ ಸುತ್ತಿಕೊಂಡಿದ್ದೇನೆ" ಎನ್ನುತ್ತಾರೆ ಮಾನ್ವಿತಾ. 
'ರಿಲ್ಯಾಕ್ಸ್ ಸತ್ಯ'  ನವೀನ್ ರೆಡ್ಡಿ ಅವರ ಎರಡನೇ ಸಿನೆಮಾ. ಇದು ಕ್ರೈಂ ಹಾಸ್ಯ ಚಲನಚಿತ್ರ ಎನ್ನುವ ನವೀನ್ "ಸಾಮಾಜಿಕ ಸಮಸ್ಯೆಯನ್ನು ಮನರಂಜನೆಯ ಮೂಲಕ ಏಕೆ ಚರ್ಚಿಸಬಾರದು? ಆದುದರಿಂದ ಕ್ರೈಂ ಹಾಸ್ಯ ಚಲನಚಿತ್ರ ನಿರ್ದೇಶಿಲಸು ನಿರ್ಧರಿಸಿದೆ" ಎನ್ನುತ್ತಾರೆ. ಬಹುತೇಕ ಚಿತ್ರೀಕರಣ ಮುಗಿದಿದ್ದು, ಇನ್ನು ಹಾಡುಗಳಷ್ಟೇ ಬಾಕಿ ಉಳಿದಿವೆಯಂತೆ.
'ರಿಲ್ಯಾಕ್ಸ್ ಸತ್ಯ' ಸಿನೆಮಾಗೆ ಪ್ರಭು ನಾಯಕ ನಟ. 'ಕೆಂಡಸಂಪಿಗೆ', 'ಟಗರು' ಸಿನೆಮಾಗಳಲ್ಲಿ ನಟಿಸಿರುವ ಮಾನ್ವಿತಾ, ಈ ಸಿನೆಮಾದ ಚಿತ್ರೀಕರಣ 'ಕೆಂಡಸಂಪಿಗೆ' ದಿನಗಳನ್ನು ನೆನಪಿಸಿದ್ದಾಗಿ ತಿಳಿಸುತ್ತಾರೆ. "ಸೆಟ್ ನಲ್ಲಿ ಕೆಲವೇ ಜನರಿದ್ದರು. ಇದು ಸಣ್ಣ ಬಜೆಟ್ ಚಿತ್ರ. ವಿಷಯ ತಾಜಾತನದಿಂದ ಕೂಡಿದೆ. ಮತ್ತೆ ವೃತ್ತಿಜೀವನ ಪ್ರಾರಂಭಿಸಿದ ಭಾವನೆ ಮೂಡಿದೆ. ಹಾಸ್ಯಮಯವಾಗಿರುವ ಕ್ರೈಮ್ ಥ್ರಿಲ್ಲರ್ ಭಾಗವಾಗಿರುವುದಕ್ಕೆ ಉತ್ಸುಕಳಾಗಿದ್ದೇನೆ. ನಾನು 'ಬಿಗ್ ಬ್ಯಾಂಗ್ ಥಿಯರಿ' ಇಂಗ್ಲಿಷ್ ಧಾರಾವಾಹಿಯ ಅತಿ ದೊಡ್ಡ ಅಭಿಮಾನಿ. ಇದು ಕೂಡ ನಗೆಯ ದಂಗೆಯನ್ನು ಎಬ್ಬಿಸಲಿದೆ" ಎನ್ನುತ್ತಾರೆ. 
SCROLL FOR NEXT