ವಿಕ್ಕಿ ವರುಣ್ 
ಸಿನಿಮಾ ಸುದ್ದಿ

ಕಾಲೇಜ್ ಕುಮಾರ್ ಸಿನಿಮಾದಲ್ಲಿ 'ಲೂನಾ' ಕಮಾಲ್

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಹಳದಿ ಬಣ್ಣದ ಕಂಟೆಸ್ಸಾ ಕಾರು ಗಮನ ಸೆಳೆದಂತೆ ಕಾಲೇಜ್ ಕುಮಾರ್ ಸಿನಿಮಾದಲ್ಲಿ ಲೂನಾ ಕೂಡ ಅಭಿಮಾನಿಗಳ ...

ಬೆಂಗಳೂರು:  ಸಿನಿಮಾದಲ್ಲಿ ಕೇವಲ ನಾಯಕ ನಟ ಮಾತ್ರ ಪರದೆ ಮೇಲೆ ಲೈಮ್ ಲೈಟ್ ಆಗುವುದಿಲ್ಲ, ಕೆಲವೊಮ್ಮೆ ಹೀರೋ ಬಳಸಿದ ವಾಹನಗಳು ಕೂಡ ಬೆಳಕಿಗೆ ಬರುತ್ತವೆ, ಅಂತಹುದ್ದೇ ಮ್ಯಾಜಿಕ್ ಕಾಲೇಜ್ ಕುಮಾರ್ ಸಿನಿಮಾದಲ್ಲೂ ನಡೆದಿದೆ.
ಕಿರಿಕ್ ಪಾರ್ಟಿ ಸಿನಿಮಾದಲ್ಲಿ  ಹಳದಿ ಬಣ್ಣದ ಕಂಟೆಸ್ಸಾ ಕಾರು ಗಮನ ಸೆಳೆದಂತೆ ಕಾಲೇಜ್ ಕುಮಾರ್ ಸಿನಿಮಾದಲ್ಲಿ  ಲೂನಾ ಕೂಡ ಅಭಿಮಾನಿಗಳ ಮನಗೆದ್ದಿದೆ.
ಕಾಲೇಜ್ ಕುಮಾರನ ತಂದೆಯಾಗಿ ನಟಿಸಿರುವ ರವಿಶಂಕರ್ ಲುಕ್ ಮತ್ತು ಅವರ ಅಭಿನಯ ಬೊಂಬಾಟ್ ಆಗಿದೆ.  ನಾಯಕ ವಿಕ್ಕಿ ಬಳಸಿರುವ ಕ್ಲಾಸಿಕ್ ಮಾಡೆಲ್ ಲೂನಾ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಇದು ತಂದೆ-ಮಗನ ಕಥೆಯಾಗಿದೆ.
ರವಿಶಂಕರ್ ಆಡಿಟರ್ ಕಚೇರಿಯಲ್ಲಿ ಕ್ಲರ್ಕ್ ಆಗಿರುತ್ತಾರೆ. ಅವರ ಬಳಿ ಒಂದು ಲೂನಾ ಇದ್ದು ನಂತರ ಅದನ್ನು ತಮ್ಮ ಮಗನಿಗೆ ನೀಡುತ್ತಾರೆ. 
ತಮಿಳಿನ ವಿಐಪಿ ಸಿನಿಮಾದಿಂದ ಪ್ರೇರಿತಗೊಂಡು ಕಾಲೇಜ್ ಕುಮಾರ್ ಚಿತ್ರ ತೆಗೆಯಲಾಗಿದೆ ಎಂಬ ರೂಮರ್ಸ್ ಕೇಳಿ ಬಂದಿವೆ ಎಂಬ ಮಾತಿಗೆ ಸ್ಪಷ್ಟನೆ ನೀಡಿರುವ ನಿರ್ದೇಶಕ ಸಂತೋಷ್, ಲೂನಾ ಮಧ್ಯಮ ವರ್ಗದ ಜನರ ಮೌಲ್ಯಗಳ ಸಂಕೇತ, ಸಿನಿಮಾದಲ್ಲಿ ತಂದೆ-ಮಗನ ಬಾಂಧವ್ಯದ ಬಗ್ಗೆ ನೋಡಬಹುದು, ತಂದೆ-ಮಗ ಇಬ್ಬರು ಲೂನಾ ಬಗ್ಗೆ ಹೊಂದಿರುವ ಭಾವನಾತ್ಮಕ  ಸಂಬಂಧದ ಕಥೆಯಾಗಿದೆ ಎಂದು ಹೇಳಿದ್ದಾರೆ. 
ಲೂನಾ ಸೆಟ್ ನಲ್ಲಿ ಹಲವು ಕಲಾವಿದರ ಮನ ಸೆಳೆದಿದೆ, ನಟಿ ಸಂಯುಕ್ತಾ ಹೆಗಡೆ ಸೇರಿದಂತೆ ಪ್ರತಿಯೊಬ್ಬರು ಅದನ್ನು ಓಡಿಸಬೇಕೆಂದು ಬಯಸುತ್ತಿದ್ದರು ಎಂದು ಹೇಳಿದ್ದಾರೆ. ಒಂದು ವೇಳೆ ಪೆಟ್ರೋಲ್ ಮುಗಿದರೇ ಪೆಟಲ್ ತುಳಿಯುವ ಮೂಲಕ ಅದನ್ನು ಓಡಿಸಬಹುದಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್