ನಿರ್ದೇಶಕ ಶ್ರೀನಿವಾಸ ರಾಜು 
ಸಿನಿಮಾ ಸುದ್ದಿ

ದಂಡುಪಾಳ್ಯ ಕೊನೆಯ ಭಾಗ ಶೀಘ್ರವೇ ಬಿಡುಗಡೆ: ಶ್ರೀನಿವಾಸ್ ರಾಜು

ಕಳೆದ ವರ್ಷ ಜುಲೈಯಲ್ಲಿ ದಂಡುಪಾಳ್ಯ 2ನೇ ಭಾಗ ಬಿಡುಗಡೆ ಮಾಡಿದ್ದ ನಿರ್ದೇಶಕ ಶ್ರೀನಿವಾಸ್ ರಾಜು....

ಕಳೆದ ವರ್ಷ ಜುಲೈಯಲ್ಲಿ ದಂಡುಪಾಳ್ಯ 2ನೇ ಭಾಗ ಬಿಡುಗಡೆ ಮಾಡಿದ್ದ ನಿರ್ದೇಶಕ ಶ್ರೀನಿವಾಸ್ ರಾಜು ಮೂರನೇ ಮತ್ತು ಕೊನೆಯ ಭಾಗವನ್ನು ಮುಂದಿನ ಆಗಸ್ಟ್ ನಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದರು. ಆದರೆ ಇದೀಗ ಸ್ವಲ್ಪ ಕಾಲ ಕಾದು ಈ ತಿಂಗಳ ಕೊನೆ ಭಾಗದಲ್ಲಿ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದಾರೆ.
ದಂಡುಪಾಳ್ಯದ ಮುಕ್ತಾಯ ಭಾಗ ಇಷ್ಟು ಹೊತ್ತಿಗೆ ಬಿಡುಗಡೆಯಾಗಬೇಕಿತ್ತು. ಆದರೆ ಮುಕ್ತಾಯದ ಭಾಗ ತೆರೆಗೆ ತರಲು ಸ್ವಲ್ಪ ಸಮಯ ಕಾಯಲು ನಾನು ನಿರ್ಧರಿಸಿದೆ. ಅಪರಾಧ ಹಿನ್ನಲೆಯ ಚಿತ್ರವಾಗಿರುವ ದಂಡುಪಾಳ್ಯದಲ್ಲಿ ಪೂಜಾ ಗಾಂಧಿ, ರವಿ ಶಂಕರ್, ಮಕ್ರಂದ್ ದೇಶಪಾಂಡೆ ಮತ್ತು ಸಂಜನಾ ಅಭಿನಯಿಸಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಎ ಸರ್ಟಿಫಿಕೇಟ್ ಸಿಕ್ಕಿದೆ. ಪ್ರಮಾಣಪತ್ರ ಮಂಡಳಿ ಸದಸ್ಯರಿಂದ ಸಿಕ್ಕಿದ ಪ್ರತಿಕ್ರಿಯೆಯಿಂದ ಖುಷಿಯಾಗಿದ್ದು, ಅವರು ಚಿತ್ರವನ್ನು ಇಷ್ಟಪಟ್ಟಿದ್ದಾರೆ ಎಂದು ಶ್ರೀನಿವಾಸ್ ರಾಜು ಹೇಳಿದರು.
ಕಪ್ಪು ಮತ್ತು ಬಿಳಿ ಬಣ್ಣದ ಪೋಸ್ಟರ್ ಗಳೊಂದಿಗೆ ದಂಡುಪಾಳ್ಯ-3ನೇ ಭಾಗದ ಪ್ರಚಾರಕ್ಕೆ ನಿರ್ದೇಶಕರು ವಿಶಿಷ್ಟವಾಗಿ ಯೋಚಿಸಿದ್ದಾರೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ನಿರ್ದೇಶಕ ಶ್ರೀನಿವಾಸ್ ರಾಜು, ಅಪರಾಧ ಹಿನ್ನೆಲೆಯ ಕಥೆಯನ್ನು ಮೂರು ಭಾಗಗಳಾಗಿ ಸಿನಿಮಾ ಮಾಡಿದ ಮೊದಲ ನಿರ್ದೇಶಕ ತಾನು. ಹಾಲಿವುಡ್ ಚಿತ್ರದಿಂದ ಪ್ರೇರೇಪಣೆಗೊಂಡು ಮತ್ತು ಖ್ಯಾತ ಸ್ಟಾರ್ ಗಳನ್ನು ಇಟ್ಟುಕೊಂಡು ಸರಣಿ ಚಿತ್ರಗಳನ್ನು ತಯಾರಿಸಲಾಗುತ್ತದೆ. ಆದರೆ ನನ್ನನ್ನು ನಿಜ ಜೀವನ ಕಥೆಯಾಧಾರಿತ ಅಪರಾಧ ಹಿನ್ನೆಲೆಯ ಚಿತ್ರ ಎಂದರು.
ದಂಡುಪಾಳ್ಯ-2 ವಿವಾದಗಳನ್ನು ಹುಟ್ಟುಹಾಕಿತ್ತಲ್ಲದೆ ಅಷ್ಟೊಂದು ಗಳಿಕೆ ಮಾಡಲಿಲ್ಲ ಎಂಬುದನ್ನು ಒಪ್ಪಿಕೊಳ್ಳುವ ಶ್ರೀನಿವಾಸ್ ರಾಜು, ಮೂರನೇ ಭಾಗ ಖಂಡಿತಾ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎನ್ನುತ್ತಾರೆ.
ಶ್ರೀನಿವಾಸು ರಾಜು ತೆರೆ ಮೇಲೆ ಚಿತ್ರವನ್ನು ಹೇಗೆ ಕೊನೆಗೊಳಿಸುತ್ತಾರೆ ಎಂಬ ಬಗ್ಗೆ ಇರುವ ಕುತೂಹಲ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನಗೆ ಉತ್ತಮ ಅನ್ನಿಸಿದ ರೀತಿಯಲ್ಲಿ ಮುಕ್ತಾಯಗೊಳಿಸಿದ್ದೇನೆ ಎಂದರು.
ದಂಡುಪಾಳ್ಯ ಸರಣಿ ಚಿತ್ರಗಳನ್ನು ರಾಮ್ ಅವರು ನಿರ್ಮಿಸಿದ್ದು, ಅರ್ಜುನ್ ಜನ್ಯ ಅವರ ಸಂಗೀತವಿದೆ. ವೆಂಕಟೇಶ್ ಪ್ರಸಾದ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?