ಕರೀನಾ ಕಪೂರ್ 
ಸಿನಿಮಾ ಸುದ್ದಿ

ತಾಯ್ತನ ನನ್ನ ವೃತ್ತಿ ಜೀವನವನ್ನು ಬದಲಾಯಿಸಿಲ್ಲ: ಕರೀನಾ ಕಪೂರ್ ಖಾನ್

ತಾಯ್ತನದಿಂದ ನನ್ನ ವೃತ್ತಿ ಜೀವನದ ಮೇಲೆ ಯಾವುದೇ ರೀತಿಯ ಬದಲಾವಣೆಯಾಗಿಲ್ಲ ಎಂದು ನಟಿ ಕರೀನಾ ಕಪೂರ್ ಖಾನ್ ..

ನವದೆಹಲಿ: ತಾಯ್ತನದಿಂದ ನನ್ನ ವೃತ್ತಿ ಜೀವನದ ಮೇಲೆ ಯಾವುದೇ ರೀತಿಯ ಬದಲಾವಣೆಯಾಗಿಲ್ಲ ಎಂದು ನಟಿ ಕರೀನಾ ಕಪೂರ್ ಖಾನ್ ಹೇಳಿದ್ದಾರೆ.
ನಿಯತಕಾಲಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಕರೀನಾ, ನಾನು ಯಾವಾಗಲೂ ಕುಟುಂಬ ಆಧರಿತ ವ್ಯಕ್ತಿಯಾಗಿದ್ದೇನೆ, ಸಂಸಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇನೆ, ನಾನು ನನ್ನ ವೃತ್ತಿ ಜೀವನ ಆರಂಭಿಸಿದಾಗನಿಂದಲೂ ಕುಟುಂಬ ಮತ್ತು ಕೆಲಸವನ್ನು ಸಮಾನವಾಗಿ ನಿಭಾಯಿಸಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಕುಟುಂಬಕ್ಕೆ ನನ್ನ ಮೊದಲ ಆದ್ಯತೆ, ನಾನು ತುಂಬಾ ಮಹಾತ್ವಾಕಾಂಕ್ಷೆ ಹೊಂದಿದ್ದೇನೆ, ಆದರೂ ನಾನು ಕುಟುಂಬಕ್ಕೋಸ್ಕರ ಸಮಯ ಮೀಸಲಿಡುತ್ತೇನೆ, ಯಾವಾಗಲೂ ಕೆಲಸ, ಕೆಲಸ ಎಂದು ನಾನು ಬಯಸುವುದಿಲ್ಲ, ಹೀಗಾಗಿ ವೃತ್ತಿ ಹಾಗೂ ಕೌಟುಂಬಿಕ ಜೀವನದಲ್ಲಿ ಸಮತೋಲಕ ಕಾಪಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಪುತ್ರ ತೈಮೂರ್ ಜನಿಸಿದ 1 ತಿಂಗಳಲ್ಲೇ ಸಿನಿಮಾ ಕಮಿಟ್ ಮೆಂಟ್ ಗಳನ್ನು ಪೂರ್ಣಗೊಳಿಸಿದ್ದಾರೆ. ಸೈಫ್ ಅಲಿ ಖಾನ್ ಇತ್ತೀಚೆಗೆ ತಡರಾತ್ರಿ ಪಾರ್ಟಿಗಳಿಗೆ ಹೋಗುವುದನ್ನು ನಿಯಂತ್ರಿಸುತ್ತಿದ್ದಾರೆ, ಏಕೆಂದರೆ ಮಗ ತೈಮೂರ್ ಗಾಗಿ ಕರೀನಾ ಬೆಳಗ್ಗಿನ ಜಾವವೇ ಎದ್ದೇಳುತ್ತಾರಂತೆ. 
ತೈಮೂರ್ ನಿಂದಾಗಿ ನನ್ನ ಹಾಗೂ ಸೈಫ್ ಜೀವನ ಶೈಲಿಯೇ ಬದಲಾಗಿದೆ ಎಂದು ಹೇಳಿರುವ ಕರೀನಾ ಸದ್ಯ ವೀರ್  ದೇ ವೆಡ್ಡಿಂಗ್ ಎಂಬ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಶಶಾಂಕ್ ಘೋಷ್ ನಿರ್ದೇಶನದ ಈ ಸಿನಿಮಾ ಮೇ 18 ಕ್ಕೆ ರಿಲೀಸ್ ಆಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT