ಇಶಾ ಕೊಪ್ಪಿಕರ್ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ಗೆ ಇಶಾ ಕೊಪ್ಪಿಕರ್ ವಾಪಸ್!

ಕನ್ನಡ ಚಿತ್ರರಂಗದಿಂದ ದೂರವಿದ್ದ ಬಾಲಿವುಡ್ ಬೆಡಗಿ ಇಶಾ ಕೊಪ್ಪಿಕರ್ ಮತ್ತೆ ಸ್ಯಾಂಡಲ್ ವುಡ್ ವಾಪಸ್ ಆಗಿದ್ದು, ಮಲಯಾಳಂ ಒಪ್ಪಂ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರು: ಕನ್ನಡ ಚಿತ್ರರಂಗದಿಂದ ದೂರವಿದ್ದ ಬಾಲಿವುಡ್ ಬೆಡಗಿ ಇಶಾ ಕೊಪ್ಪಿಕರ್ ಮತ್ತೆ ಸ್ಯಾಂಡಲ್ ವುಡ್ ವಾಪಸ್ ಆಗಿದ್ದು, ಮಲಯಾಳಂ ಒಪ್ಪಂ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಹಿಂದೆ ತೆಲುಗು ಮತ್ತು ತಮಿಳು ಭಾಷೆಯಲ್ಲಿ ತೆರೆಕಂಡ ಲೂಟ್ ಚಿತ್ರದಲ್ಲಿ ಎಸಿಪಿಯಾಗಿ ಕಾಣಿಸಿಕೊಂಡಿದ್ದ ಇಶಾ ಕೊಪ್ಪಿಕ್ಕರ್ ಇದೀಗ ಮತ್ತೆ ಪೊಲೀಸ್ ಅಧಿಕಾರಿ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ವಾಪಸ್ ಆಗಿದ್ದಾರೆ. ಈ  ಹಿಂದೆ ಮಲೆಯಾಳಂ ನಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ಒಪ್ಪಂ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಇಶಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಮಲಯಾಳಂ ನಲ್ಲಿ ನಟ ಮೋಹನ್ ಲಾಲ್ ಅಭಿನಯಿಸಿದ್ದ ಪಾತ್ರದಲ್ಲಿ ಕನ್ನಡದಲ್ಲಿ ನಟ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ. ಚಿತ್ರವನ್ನು ಹಯಗ್ರೀವ ಕಲಾ ಚಿತ್ರ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಜಿವಿಆರ್ ವಾಸು ಚಿತ್ರವನ್ನು  ನಿರ್ದೇಶಿಸುತ್ತಿದ್ದಾರೆ. ಇನ್ನು ಚಿತ್ರಕ್ಕೆ ಮತ್ತೋರ್ವ ಹಿರೋಯಿನ್ ನ ಅವಶ್ಯಕತೆ ಇದ್ದು, 2ನೇ ನಾಯಕಿಗಾಗಿ ಚಿತ್ರ ತಂಡ ಶೋಧ ನಡೆಸಿದೆ. ಇನ್ನು ಖಳನಾಯಕನ ಪಾತ್ರಕ್ಕೆ ಖ್ಯಾತನಟ ವಸಿಷ್ಠ ಸಿಂಹ ಅವರೊಂದಿಗೆ ಚರ್ಚೆ  ನಡೆಯುತ್ತಿದ್ದು, ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ. ಇನ್ನು ಚಿತ್ರದಲ್ಲಿನ ಮುಗುವಿನ ಪಾತ್ರಕ್ಕೆ ಮೂಲ ಮಲಯಾಳಂನ ಒಪ್ಪಂ ನಲ್ಲಿ ನಟಿಸಿದ್ದ ಬೇಬಿ ಮೀನಾಕ್ಷಿ ಆಯ್ಕೆ ಅಂತಿಮವಾಗಿದೆಯಂತೆ. 
ಈ ಕ್ರೈಮ್ ಥ್ರಿಲ್ಲರ್ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ರಾಹುಲ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಇದೇ ನವೆಂಬರ್ 22ರಂದು ಚಿತ್ರತಂಡ ಮೂಹೂರ್ತ ಕಾರ್ಯಕ್ರಮಕ್ಕೆ ಯೋಜನೆ ರೂಪಿಸಿದ್ದು, ನಟ  ಶಿವರಾಜ್ ಕುಮಾರ್ ಪ್ರಸ್ತುತ ಸೂರಿ ನಿರ್ದೇಶನದ ಟಗರು ಮತ್ತು ಪ್ರೇಮ್ ನಿರ್ದೇಶನ ವಿಲ್ಲನ್ ಚಿತ್ರಗಳಲ್ಲಿ ಬಿಸಿಯಾಗಿದ್ದು, ಇದರ ನಡುವೆಯೇ ಸಮಯ ಮಾಡಿಕೊಂಡು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಚಿತ್ರತಂಡ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

60 ದಿನಗಳ ಕದನ ವಿರಾಮ ವಿಸ್ತರಣೆಗೆ ಅಮೆರಿಕ, ಇರಾನ್ ಸಂಧಾನಕಾರರು ಒಪ್ಪಿಗೆ; ಟ್ರಂಪ್ ಅನುಮೋದನೆ ಬಾಕಿ

ಕರ್ನಾಟಕ ನಾಯಕತ್ವ ಬದಲಾವಣೆಯ ನಡುವೆ CM ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತೆ ದೆಹಲಿಗೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ; ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧವೇ ಅತ್ಯಾಚಾರ ಯತ್ನ ಆರೋಪ, ಮಾನನಷ್ಟ ಮೊಕದ್ದಮೆ: ಕಣ್ಣೀರಿಟ್ಟು ಕ್ಷಮೆ ಕೇಳಿದ 'ಹಳ್ಳಿಮೇಷ್ಟ್ರು' ನಟಿ Bindiya!

Karnataka CM News LIVE Updates | ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ; ಸಿಎಲ್‌ಪಿ ಸಭೆ ಶನಿವಾರ ಸಾಧ್ಯತೆ!

SCROLL FOR NEXT