ಶಾನ್ವಿ ಶ್ರೀವಾಸ್ತವ 
ಸಿನಿಮಾ ಸುದ್ದಿ

ಮೀರಾ ಛಾಯೆಯಿಂದ ಇನ್ನೂ ಹೊರಬರದ ಶಾನ್ವಿ; 'ಮುಫ್ತಿ' ಮೇಲೆ ಅಪಾರ ನಿರೀಕ್ಷೆ

ದರ್ಶನ್ ಅಭಿನಯದ 'ತಾರಕ್' ಚಿತ್ರ ಯಶಸ್ವಿಯಾಗಿದೆ. ಆದರೂ ಅದರ ನಾಯಕಿ ಶಾನ್ವಿ ಶ್ರೀವಾಸ್ತವ ಅವರು ಮಾತ್ರ ಇನ್ನೂ ಮೀರಾ ಪಾತ್ರಝ್ಯಾಂಗೋವರ್ ನಿಂದ ಹೊರಬಂದಿಲ್ಲ.

ಬೆಂಗಳೂರು: ದರ್ಶನ್ ಅಭಿನಯದ 'ತಾರಕ್' ಚಿತ್ರ ಯಶಸ್ವಿಯಾಗಿದೆ. ಆದರೂ ಅದರ ನಾಯಕಿ ಶಾನ್ವಿ ಶ್ರೀವಾಸ್ತವ ಅವರು ಮಾತ್ರ ಇನ್ನೂ ಮೀರಾ  ಪಾತ್ರಝ್ಯಾಂಗೋವರ್ ನಿಂದ ಹೊರಬಂದಿಲ್ಲ.
'ತಾರಕ್ ಚಿತ್ರದಲ್ಲಿ ಓರ್ವ ಅನಿವಾಸಿ ಭಾರತೀಯ ಪಾತ್ರ ನಿರ್ವಹಿಸಿದ್ದ ಶಾನ್ವಿ  "ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನ ಉಡುಪು, ನನ್ನ ಚಿಂತನೆಗಳಲ್ಲಿ ನಾನಿಂದಿಗೂ ಮೀರಾ ಪಾತ್ರವನ್ನೇ ಅನುಸರಿಸುತ್ತಿದ್ದೇನೆ. ಆ ಪಾತ್ರ ನನ್ನ ಮೇಲೆ ಗಾಢವಾಗಿ ಪ್ರಭಾವ ಬೀರಿದೆ.ಆ ಚಿತ್ರ ಗಲ್ಲ್ಪೆಟ್ಟಿಗೆಯಲ್ಲಿ ಎಷ್ಟು ಯಶಸ್ವಿಯಾಗಿದೆ ನನಗೆ ತಿಳಿದಿಲ್ಲ. ಆದರೆ ನನಗೆ ಆಪಾತ್ರದ ಛಾಯೆಯಿಂದ ಹೊರಬರಲು ಆಗುತ್ತಿಲ್ಲ. ನನಗೆ ಅಂತಹಾ ಇನ್ನೊಂದು ಗಟ್ಟಿ ಪಾತ್ರ ಸಿಗುವವರೆಗೂ ಈ ಸ್ಥಿತಿ ಮುಂದುವರಿಯಲಿದೆ.ಇದೀಗ ನನ್ನ ಕುಟುಂಬದವರೂ ಈ ಕುರಿತಂತೆ ನನ್ನನ್ನು ಪ್ರಶ್ನಿಸತೊಡಗಿದ್ದಾರೆ"
ಅವರ ಮುಂದಿನ ಚಿತ್ರ 'ಮುಫ್ತಿ' ಬಗೆಗೆ ಮಾತನಾಡಿದ ಶಾನ್ವಿ "ನಾನು ಈ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ ಮೊದಲ ಕಾರಣ, ಜಯಣ್ಣ ಇದರ ನಿರ್ಮಾಪಕರಾಗಿರುವುದು. ಇವರ ಬಗೆಗೆ ನನಗೆ ಅಪಾರ ಗೌರವವಿದೆ. ನಾನು ಕಥೆಯನ್ನೂ ಕೇಳದೆ ಪಾತ್ರಕ್ಕೆ ಒಪ್ಪಿಗೆ ಸೂಚಿಸಿದ್ದೆ. ಈ ಚಿತ್ರದಲ್ಲಿ ಶ್ರೀಮುರಳಿ ಪ್ರಮುಖ ಪಾತ್ರಧಾರಿಯಾಗಿದ್ದು ೈನ್ನೂ ಹಲವಾರು ಪ್ರಮುಖ ನಟರು ಅಭಿನಯಿಸುತ್ತಿದ್ದಾರೆ."
ಚಿತ್ರದಲ್ಲಿ ನಾಯಕನಿಗೆ ಪ್ರೀತಿಯ ಕುರಿತು ಆಸಕ್ತಿ ಮೂಡುವಂತೆ ಮಾಡುವ ನಟಿ, ಚಿತ್ರದ ಕಥೆ ಲಘುವಾಗಿ ಕಂದರೂ . ಶಾನ್ವಿ ಅವರ ಪಾತ್ರ ಚಿತ್ರಣ ಅದ್ಭುತವಾಗಿದೆ. ಆದರೆ ಈ ಚಿತ್ರದಲ್ಲಿ ಅವರು ಯಾವ ಹಾಡಿನಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ಅಚ್ಚರಿಯ ಸತ್ಯ."ಚಿತ್ರವು ಬೇಡದೇ ಹೋದಾಗ ಹಾಡೊಂದನ್ನು ಒತ್ತಾಯ ಪೂರ್ವಕ ತುರುಕಿಸುವುಉದು ತಪ್ಪಾಗುತ್ತದೆ ಎಂದು ನಾನು ಅವರಿಗೆ ತಿಳಿಸಿದೆ. ವಾಸ್ತವವಾಗಿ, ಒಂದು ಮಾಸ್ ಚಿತ್ರಕ್ಕೆ ಹೆಚ್ಚಿನ ಹಾಡುಗಳು ಬೇಕಾಗಿದೆಯೆ ಎನ್ನುವ ವಿಚಾರದಲ್ಲಿ ನಿರ್ಮಾಪಕರು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿದರು. ಅದರ ಕೊನೆಯಲ್ಲಿ,ಯಾವುದೇ ಡ್ಯುಯಟ್ ಸಾಂಗ್ ಗಳ ಅವಶ್ಯಕತೆ ಇಲ್ಲ ಎನ್ನುವ ನಿರ್ಧಾರಕ್ಕೆ ಅವರು ಬಂದರು" ಶಾನ್ವಿ ವಿವರಿಸಿದರು.
"'ಮುಫ್ತಿ' ಚಿತ್ರದಲ್ಲಿನ ವಿಚಾರಗಳಿಗಾಗಿಯೇ ಪ್ರೇಕ್ಷಕರು ಆ ಚಿತ್ರವನ್ನು ನೋಡಬೇಕು. ಶ್ರೀಮುರಳಿ ಹಾಗೂ ಶಿವರಾಜ್ ಕುಮಾರ್ ಅಭಿನಯ ಜತೆಗೆ ನನ್ನ ಪಾತ್ರದ ಬಗ್ಗೆ ಬಂದರೆ ನನ್ನ ಕೆಲ  ಅಭಿವ್ಯಕ್ತಿಗಳು, ತುಸು ಹಾಸ್ಯವನ್ನೂ ಸಹ ಸವಿಯಬಹುದು. ಇಂತಹ ಕಥೆಯಲ್ಲಿ ನಾನೂ ಪಾತ್ರವಾಗಿರುವುದು ನನಗೆ ಸಂತಸ ತಂದಿದೆ. ನಾಯಕನ ಹಿಂದೆ ಮರ ಸುತ್ತುವ ಕೆಲಸಕ್ಕೆ ಮಾತ್ರ ಸೀಮಿತವಾಗಲು ನಾನು ಬಯಸಲಾರೆ" ಶಾನ್ವಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ