ಮೇಘನಾ ರಾಜ್ 
ಸಿನಿಮಾ ಸುದ್ದಿ

ಕುರುಕ್ಷೇತ್ರದಲ್ಲಿ ದರ್ಶನ್ ಗೆ ರಾಜಕುಮಾರಿ ಮೇಘನಾ ರಾಜ್

ಕನ್ನಡದಲ್ಲಿ ಮುನಿರತ್ನ ನಿರ್ಮಾಣದ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕುರುಕ್ಷೇತ್ರದ ದೀರ್ಘಾವಧಿ...

ಕನ್ನಡದಲ್ಲಿ ಮುನಿರತ್ನ ನಿರ್ಮಾಣದ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕುರುಕ್ಷೇತ್ರದ ದೀರ್ಘಾವಧಿಯ ಶೂಟಿಂಗ್ ಗೆ ನಿನ್ನೆ ಚಾಲನೆ ಸಿಕ್ಕಿದೆ. ಡಿಸೆಂಬರ್ 20ರ ಹೊತ್ತಿಗೆ ಶೂಟಿಂಗ್ ಪೂರ್ತಿ ಮುಗಿಸುವ ಭರವಸೆಯಲ್ಲಿ ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ಇದ್ದಾರೆ.
ಇದುವರೆಗೆ ದರ್ಶನ್ ಗೆ ಜೋಡಿಯಾಗಿ ನಟಿಸುತ್ತಾರೆ ಎಂಬ ಕುತೂಹಲವಿತ್ತು. ಕೆಲವು ನಟಿಯರ ಹೆಸರು ಈ ಹಿಂದೆ ಕೇಳಿಬರುತ್ತಿತ್ತು. ಅದೀಗ ಕನ್ನಡದ ನಟಿ ಮೇಘನಾ ರಾಜ್ ಪಾಲಾಗಿದೆ. 
ಬಹಳ ಚರ್ಚೆ, ಮಾತುಕತೆಯ ನಂತರ ಮೇಘನಾ ರಾಜ್ ಅವರನ್ನು ಆ ಪಾತ್ರಕ್ಕೆ ಆಯ್ಕೆ ಮಾಡಲಾಯಿತಂತೆ. ಭಾನುಮತಿ ಪಾತ್ರವನ್ನು ಕನ್ನಡದ ನಟಿಯೇ ಅಭಿನಯಿಸಬೇಕೆಂದು ನಿರ್ದೇಶಕ ನಾಗಣ್ಣ ಮತ್ತು ನಿರ್ಮಾಪಕ ಮುನಿರತ್ನ ಬಯಸಿದ್ದರಂತೆ. ಹೀಗಾಗಿ ಅಂತಿಮವಾಗಿ ಮೇಘನಾ ರಾಜ್ ರನ್ನು ಆಯ್ಕೆ ಮಾಡಿಕೊಂಡರು. ಇದಕ್ಕಾಗಿ ದುರ್ಯೋಧನ ಮತ್ತು ಭಾನುಮತಿ ನಡುವಿನ ದೃಶ್ಯದ ಚಿತ್ರೀಕರಣವನ್ನು ಕೊನೆಗೆ ಉಳಿಸಿಕೊಂಡಿದ್ದರು. 
ಅಲ್ಲಮ ಪ್ರಭು ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರ ಪುರಾಣ ಚಿತ್ರವೊಂದರಲ್ಲಿ ಮೇಘನಾ ರಾಜ್ ಅಭಿನಯಿಸುತ್ತಿದ್ದಾರೆ. ಮೇಘನಾ ಈಗಾಗಲೇ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.
ಕನ್ನಡದಲ್ಲಿ ಬಹುತಾರಾಗಣ ಮತ್ತು ದೊಡ್ಡ ಬಜೆಟ್ ನೊಂದಿಗೆ ತಯಾರಾಗುತ್ತಿರುವ ಕುರುಕ್ಷೇತ್ರ ಚಿತ್ರಕ್ಕೆ ವಿ.ಹರಿಕೃಷ್ಣ ಅವರ ಸಂಗೀತವಿದೆ. ಹಿರಿಯ ನಟರಾದ ಅಂಬರೀಷ್, ಅರ್ಜುನ್ ಸರ್ಜಾ, ಭಾರತಿ ವಿಷ್ಣುವರ್ಧನ್, ರವಿ ಶಂಕರ್, ಶ್ರೀನಾಥ್, ಸಾಯಿಕುಮಾರ್  ಸೇರಿದಂತೆ ನಟ ನಟಿಯರಾದ ಸ್ನೇಹಾ, ನಿಖಿಲ್ ಕುಮಾರ್, ಹರಿಪ್ರಿಯಾ ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇದು 'ತುರ್ತು ಪರಿಸ್ಥಿತಿಯಂತಹ ಸ್ಥಿತಿ'; ಹೋರಾಟ ಈಗಷ್ಟೇ ಆರಂಭ; ದೇಶಾದ್ಯಂತ CJP ಪ್ರತಿಭಟನೆ ನಡೆಯಲಿದೆ: ಸೌರವ್ ದಾಸ್

'ಸುಳ್ಳಿನ ದಾಳಿಯಿಂದ ನನ್ನ ಕುಗ್ಗಿಸಲು ಸಾಧ್ಯವಿಲ್ಲ': ವಾಟ್ಸಪ್ ಸ್ಟೇಟಸ್ ಮೂಲಕ HDKಗೆ ಹಾಸನ ಡಿಸಿ ಲತಾಕುಮಾರಿ ಟಾಂಗ್

'ಪ್ರೇಮದ ಊರಲಿ' ಚಿತ್ರ ವೀಕ್ಷಣೆಗೆ ಹೋಗಿದ್ದವರಿಗೆ ಶಾಕ್; ಮನೆಯಲ್ಲಿ ಕಳ್ಳ ಲಾಕ್, ಸಿಕ್ಕಿಬಿದ್ದಿದ್ದೇ ರೋಚಕ!

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!