ರವಿ ಬಸ್ರೂರ್ 
ಸಿನಿಮಾ ಸುದ್ದಿ

ನಿರ್ದೇಶಕ ರವಿ ಬಸ್ರೂರ್ ಗೂ ಸಂಖ್ಯೆ 13 ಕ್ಕೂ ಅಂಟಿದ ನಂಟು!

ನಿರ್ದೇಶಕ ರವಿ ಬಸ್ರೂರ್ ಗೂ ಹಾಗೂ 13ನೇ ಸಂಖ್ಯೆಗೂ ಒಂದು ಅವಿನಾಭಾವ ಸಂಬಂಧವಿದೆ, ರವಿ ಬಸ್ರೂರ್ ಅವರ ಮುಂದಿನ ಕಟಕ ಸಿನಿಮಾದ ...

ಬೆಂಗಳೂರು: ನಿರ್ದೇಶಕ ರವಿ ಬಸ್ರೂರ್ ಗೂ ಹಾಗೂ 13ನೇ ಸಂಖ್ಯೆಗೂ ಒಂದು ಅವಿನಾಭಾವ ಸಂಬಂಧವಿದೆ, ರವಿ ಬಸ್ರೂರ್ ಅವರ ಮುಂದಿನ ಕಟಕ ಸಿನಿಮಾದ ಟ್ರೈಲರ್ ಅನ್ನು ನಟ ಪುನೀತ್ ರಾಜ್ ಕುಮಾರ್ ಅಕ್ಟೋಬರ್ 13 ರಂದು ರಿಲೀಸ್ ಮಾಡಲಿದ್ದಾರೆ. 
ಕನ್ನಡ, ಇಂಗ್ಲೀಷ್,  ತೆಲುಗು, ತಮಿಳು, ಮಲಯಾಳಂ, ಕೊಂಕಣಿ, ಕೊಡವ, ಅಸ್ಸಾಮಿ, ಬ್ಯಾರಿ,, ಪಂಜಾಬಿ ಮತ್ತು ಮರಾಠಿ ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ಕಟಕ ಸಿನಿಮಾ ಟ್ರೈಲರ್ ಬಿಡುಗಡೆಗೊಳ್ಳಲಿದೆ.
ನಾನು ಮತ್ತು ನನ್ನ ತಂಡ ನಿಜಕ್ಕೂ ಅಚ್ಚರಿಗೊಂಡಿದ್ದೇವೆ,  ನನ್ನ ಹಿಂದಿನ ಕುಂದಾಪುರ ಕನ್ನಡದ 2 ಸಿನಿಮಾಗಳು  13ನೇ ತಾರೀಖಿನಂದೇ ಬಿಡುಗಡೆಯಾಗಿದ್ದವು. ನಾನು ಈ ಮೊದಲು 13ರ ಸಂಖ್ಯೆಯನ್ನು ಅದೃಷ್ಠಹೀನ ಎನ್ನುತ್ತಿದೆ. ಆದರೆ ಅದೇ ಸಂಖ್ಯೆ ನನ್ನ ಪಾಲಿಗೆ ಅದೃಷ್ಟದ ಸಂಖ್ಯೆಯಾಗಿದೆ.
ಹಲವು ನಿರ್ದೇಶಕರು ಬೇರೆ ಬೇರೆ ಭಾಷೆಗಳಲ್ಲಿ ಅವರ ಟ್ರೈಲರ್ ಗಳಿಗೆ ಕತ್ತರಿ ಪ್ರಯೋಗ ಮಾಡುತ್ತಿದ್ದರು, ಆದರೆ ಈಗ ಅದೇ ನಿರ್ದೇಶಕರು ಅವರವರ ಸ್ವಂತ ಭಾಷೆಗಳಲ್ಲಿ  ಟ್ರೈಲರ್ ಟಬ್ಬಿಂಗ್ ಮಾಡುತ್ತಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ. 
ಇಲ್ಲಿಯವರೆಗೂ ತಮಿಳು, ತೆಲುಗು, ಹಾಗೂ ಮಲಯಾಳಂಗಳಲ್ಲಿ ಡಬ್ಬಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಅಸ್ಸಾಮಿ ಮತ್ತು ಮರಾಠಿ ಸಿನಿಮಾ ತಯಾರಕರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ ಹಾಗೆಯೇ ಕೊಂಕಣಿ ಮತ್ತು ತುಳು ಭಾಷೆಗಳಲ್ಲು ಕೂಡ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಹೇಳಿದ್ದಾರೆ.
ಸಿನಿಮಾದ ಡಬ್ಬಿಂಗ್ ಮಾರಾಟ ಹಕ್ಕು, ಈಗಾಗಲೇ ಖರೀದಿಯಾಗಿದೆ, ಕಾಸ್ಮೋಪಾಲಿಟನ್ ಸಿಟಿಯಾದ ಬೆಂಗಳೂರಿನಲ್ಲಿ ವಿವಿಧ ಭಾಷೆಗಳ ಜನರಿದ್ದಾರೆ,  ಡಬ್ಬಿಂಗ್ ವರ್ಸನ್ ಮುಂದಿನ ಮೂರು ವಾರಗಳ ನಂತರ ಬಿಡುಗಡೆಯಾಗುವುಗುವುದು ಎಂದು ಹೇಳಿದ್ದಾರೆ.ಕಟಕ ಸಿನಿಮಾ ಮಾಟ ಮಂತ್ರದ ಕುರಿತ ಕಥೆಯಾಗಿದೆ. ಎನ್ ಎಸ್ ರಾಜ ಕುಮಾರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ