ಜೈ ಸಂಪತ್ 
ಸಿನಿಮಾ ಸುದ್ದಿ

ಕುಡಿದು ಚಾಲನೆ: ಯುವ ನಟನಿಗೆ ದಂಡ, 6 ತಿಂಗಳ ಕಾಲ ಚಾಲನ ಪರವಾನಗಿ ರದ್ದು

ಕುಡಿದು ಚಾಲನೆ ಮಾಡಿದ ಆರೋಪದ ಮೇಲೆ ನ್ಯಾಯಾಲಯ ತಮಿಳಿನ ನಟ ಜೈ ಸಂಪತ್ ಅವರಿಗೆ 5,200 ದಂಡ ಹಾಗೂ 6 ತಿಂಗಳ ಕಾಲ ಪರವಾನಗಿ ರದ್ದು ಮಾಡಿದೆ...

ಚೆನ್ನೈ: ಕುಡಿದು ಚಾಲನೆ ಮಾಡಿದ ಆರೋಪದ ಮೇಲೆ ನ್ಯಾಯಾಲಯ ತಮಿಳಿನ ನಟ ಜೈ ಸಂಪತ್ ಅವರಿಗೆ 5,200 ದಂಡ ಹಾಗೂ 6 ತಿಂಗಳ ಕಾಲ ಪರವಾನಗಿ ರದ್ದು ಮಾಡಿದೆ. 
ಸೆಪ್ಟೆಂಬರ್ 21ರಂದು ಆಡಿ ಕಾರನ್ನು ಓಡಿಸುತ್ತಿದ್ದ ಜೈ ಸಂಪತ್ ಆದ್ಯಾರ್ ಬ್ರಿಡ್ಜ್ ನ ಕಂಬಕ್ಕೆ ಗುದ್ದಿದ್ದರು. ಈ ವೇಳೆ ಸುಬ್ರಮಣಿಯಂಪುರಂ ನಟ ಕುಡಿದು ಚಾಲನೆ ಮಾಡಿದ್ದರು ಎಂದು ದೂರು ದಾಖಲಿಸಿದ್ದರು. 
ಕುಡಿದು ಚಾಲನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯದಲ್ಲಿ ಜೈ ಸಂಪತ್ ಅವರು ಕುಡಿದು ಚಾಲನೆ ಮಾಡಿರುವುದು ಇದು ಎರಡನೇ ಪ್ರಕರಣವಾಗಿದ್ದು ಅವರ ಚಾಲನ ಪರವಾನಗಿಯನ್ನು ರದ್ದು ಪಡಿಸುವಂತೆ ಮನವಿ ಮಾಡಿದರು. ಅಂತೆ ನ್ಯಾಯಾಲಯ ಅವರ ಪರವಾನಗಿಯನ್ನು ಆರು ತಿಂಗಳಿಗೆ ರದ್ದು ಮಾಡಿದೆ. 
ಜೈ ಸಂಪತ್ ಅವರು 2014ರಲ್ಲಿ ಕುಡಿದು ಚಾಲನೆ ಮಾಡಿ ಅಶೋಕ್ ನಗರದ ಕಾಶಿ ಥಿಯೇಟರ್ ಬಳಿ ಡಿವೈಡರ್ ಗೆ ಗುದ್ದಿದ್ದು ಅಂದು ಸಹ ಅವರ ವಿರುದ್ಧ ಕುಡಿದು ಚಾಲನೆ ಪ್ರಕರಣವನ್ನು ದಾಖಲಿಸಲಾಗಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್ ನಿಂದ ಇರಾನ್ ಗುಪ್ತಚರ ಇಲಾಖೆ ಮುಖ್ಯಸ್ಥರ ಹತ್ಯೆ?; ಇದರಿಂದೆಲ್ಲಾ ನಾಯಕತ್ವಕ್ಕೆ ಮಾರಕ ಹೊಡೆತ ಬೀಳಲ್ಲ- ಇರಾನ್

ಉಪ ಚುನಾವಣೆ 2026: ಸಿದ್ದರಾಮಯ್ಯ ಸಂಧಾನ ಯಶಸ್ವಿ, ಬಾಗಲಕೋಟೆ ಕಾಂಗ್ರೆಸ್ ಕದನಕ್ಕೆ ಕೊನೆಗೂ ತೆರೆ!

'ನನ್ನ ಘನತೆಗೆ ಧಕ್ಕೆ, ಪ್ರಚಾರಕ್ಕೆ ಬರಲ್ಲ..' 'ನಿರ್ದೇಶಕ ಪ್ರೇಮ್ ಗೆ ಮೊದಲೇ ಎಚ್ಚರಿಕೆ ನೀಡಿದ್ದೆ..': ಬಾಲಿವುಡ್ ನಟಿ Nora Fatehi ಶಾಕಿಂಗ್ ಹೇಳಿಕೆ

'Rafale ಫೈಟರ್ ಜೆಟ್, ಕ್ಷಿಪಣಿಗಳೂ ಕೂಡ ನಿಷ್ಪ್ರಯೋಜಕ... ': ಲೆಫ್ಟಿನೆಂಟ್ ಜನರಲ್ Raj Shukla ಅಚ್ಚರಿ ಹೇಳಿಕೆ

ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಶಾಕ್; ಇನ್ನುಮುಂದೆ ಉತ್ತಮ ಕ್ರೆಡಿಟ್ ಸ್ಕೋರ್ ಕಡ್ಡಾಯ!

SCROLL FOR NEXT