ದರ್ಶನ್ 
ಸಿನಿಮಾ ಸುದ್ದಿ

ಪವನ್ ಒಡೆಯರ್- ದರ್ಶನ್ ಕಾಂಬಿನೇಷನ್ ಸಿನಿಮಾ ರದ್ದು!

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 50 ನೇ ಸಿನಿಮಾವಾದ ಕುರುಕ್ಷೇತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ದರ್ಶನ್ ಅವರ 51ನೇ ಹಾಗೂ 52ನೇ ...

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 50 ನೇ ಸಿನಿಮಾವಾದ ಕುರುಕ್ಷೇತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ದರ್ಶನ್ ಅವರ 51ನೇ ಹಾಗೂ 52ನೇ ಸಿನಿಮಾ ಯಾವುವು ಎಂಬ ಬಗ್ಗೆ ಹಲವು ಮಾತುಗಳು ಕೇಳಿ ಬರುತ್ತಿವೆ.
ಶೈಲಜಾ ನಾಗ್ ಮತ್ತು ಸುರೇಶ್ ನಿರ್ಮಾಣದ ಪೊನ್ ಕುಮಾರ್ ನಿರ್ದೇಶನದ ಸಿನಿಮಾದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ.  ಇದರ ಜೊತೆಗೆ  ಪವನ್ ಒಡೆಯರ್ ನಿರ್ದೇಶನದ ಸಂದೇಶ್ ಎನ್ ನಿರ್ಮಾಣದ ಒಡೆಯರ್ ಎಂಬ ಸಿನಿಮಾದಲ್ಲಿ  ಬಾಕ್ಸರ್ ಪಾತ್ರದಲ್ಲಿ ದರ್ಶನ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು, ಸದ್ಯಕ್ಕೆ ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ದರ್ಶನ್ ಪೊನ್ ಕುಮಾರ್ ಜತೆಗಿನ ಸಿನಿಮಾ ಮುಂದುವರಿಯಲಿದೆ, ಆದರೆ, ಪವನ್ ಒಡೆಯರ್ ಸಿನಿಮಾ ರದ್ದಾಗಿದೆ ಎಂದು ಕೇಳಿಬರುತ್ತಿದೆ.
ಇದರ ಬದಲಾಗಿ ತಮಿಳು ಹಿಟ್ ಸಿನಿಮಾವೊಂದರ ರಿಮೇಕ್  ನಲ್ಲಿ ದರ್ಶನ ನಟಿಸಲಿದ್ದಾರೆ,. ವೀರಂ ಸಿನಿಮಾದ ಅಜಿತ್ ಪಾತ್ರವನ್ನು ದರ್ಶನ್ ನಿರ್ವಹಿಸಲಿದ್ದಾರೆ, ಎಂ,ಡಿ ಶ್ರೀಧರ್ ನಿರ್ದೇಶನ ಮಾಡಲಿದ್ದಾರೆ, ಪೊಕಿರಿ ಮತ್ತು ಬುಲ್ ಬುಲ್ ನಂತರ ದರ್ಶನ್ ಜೊತೆ ಕೆಲಸ ಮಾಡಲು ಯೋಜಿಸಲಾಗಿತ್ತು, ಸದ್ಯ ರಿಮೇಕ್ ಸಿನಿಮಾವೊಂದನ್ನು ಮಾಡಲು ಹೊರಟಿದ್ದಾರೆ, ಕೆಲವು ದಿನಗಳ ನಂತರ ಈ ಸಿನಿಮಾ ಯೋಜನೆ ಬಗ್ಗೆ ಫೈನಲ್ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದಕ್ಕಾಗಿ ನಾನು ಸಿದ್ಧತೆ ನಡೆಸಿದ್ದು, ದರ್ಶನ್ ಅವರ ಕುರುಕ್ಷೇತ್ರದ ನಂತರ ಮುಂದಿನ ಪ್ಲಾನ್ ಮಾಡಲಾಗುವುದು ಎಂದು ಹೇಳಿದ್ದಾರೆ. ಮತ್ತೊಂದು ಆಸಕ್ತಿದಾಯಕ ವಿಚಾರವೆಂದರೇ ದರ್ಶನ್ ಒಂದೇ ಸಮಯದಲ್ಲಿ ಎರಡು ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಲು ದರ್ಶನ್ ನಿರ್ಧರಿಸಿದ್ದಾರೆ, ಪ್ರತಿ ಸಿನಿಮಾಗೆ 30 ದಿನಗಳ ಸಮಯವನ್ನು ಮೀಸಲಿರಿಸಲಿದ್ದಾರೆ. ಹೈದರಾಬಾದ್ ಗೆ ತೆರಳು ಮುನ್ನವೇ ನಿರ್ಮಾಪಕರ ಜೊತೆ ಚರ್ಚೆ ನಡೆದಿದೆ. ಕುರುಕ್ಷೇತ್ರ ಶೂಟಿಂಗ್  ನಂತರ ಮುಂದಿನ ಸಿನಿಮಾ ತಯಾರಿ ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!